ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1.65 ಕೋಟಿ ತೆರಿಗೆ ಕಟ್ಟದಿದ್ದರೆ ಮೈಸೂರಿನ ಪೊಲೀಸ್ ಭವನ ಜಪ್ತಿ

|
Google Oneindia Kannada News

ಮೈಸೂರು, ಜೂನ್ 14 : ತೆರಿಗೆ ಪಾವತಿ ಮಾಡದಿದ್ದರೆ ನಗರದ ಪೊಲೀಸ್ ಭವನವನ್ನು ಜಪ್ತಿ ಮಾಡುವುದಾಗಿ ನಗರ ಪಾಲಿಕೆಯು ಪೊಲೀಸ್ ಕಮಾಂಡೆಂಟ್ ಗೆ ನೋಟೀಸ್ ಕಳುಹಿಸಿದೆ. ನಗರದ ಜಾಕಿ ಕ್ವಾಟರ್ಸ್ ನಲ್ಲಿರುವ ಪೊಲೀಸ್ ಭವನದ ತೆರಿಗೆ ಪಾವತಿಸದೆ ಇರುವುದರಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿರುವ ಪಾಲಿಕೆ, ಮುಂದಿನ 15 ದಿನದೊಳಗಾಗಿ 1.65 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ತಾಕೀತು ಮಾಡಿದೆ. ಇಲ್ಲವಾದರೆ ಪೊಲೀಸ್ ಭವನವನ್ನು ಜಪ್ತಿ ಮಾಡಿ ಹರಾಜು ಪ್ರಕ್ರಿಯೆ ನಡೆಸಲಾಗುವುದೆಂದು ತಿಳಿಸಿದೆ.

ಮೈಸೂರು ಅರಮನೆಗೆ ನಾಲ್ಕು ವರ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಮೈಸೂರು ಅರಮನೆಗೆ ನಾಲ್ಕು ವರ್ಷದವರೆಗೆ ಆದಾಯ ತೆರಿಗೆ ವಿನಾಯಿತಿ

ಈ ಹಿಂದೆ, ಬಾಕಿ ಇರುವ ತೆರಿಗೆ ಪಾವತಿಸುವಂತೆ ನಗರ ಪಾಲಿಕೆ ಏಪ್ರಿಲ್ 2ರಂದು ಪೊಲೀಸ್ ಕಮಾಂಡೆಂಟ್ ಗೆ ನೋಟೀಸ್ ನೀಡಿ 30 ದಿನದ ಗಡುವು ನೀಡಿತ್ತು. ಆದರೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಜೂ.11ರಂದು ಮತ್ತೊಂದು ನೋಟೀಸ್ ನೀಡಿ, 15 ದಿನದೊಳಗೆ 1.65 ಕೋಟಿ ರೂ. ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆ ಒಡೆತನದಲ್ಲಿರುವ ಈ ಕಟ್ಟಡ, ಪೊಲೀಸ್ ಕಮಾಂಡೆಂಟ್ ಸುಪರ್ದಿಯಲ್ಲಿದೆ.

Mysuru Police has to pay 1.65 crore tax

ನಗರ ಪಾಲಿಕೆಯಿಂದ ಸಿಆರ್ ಪಡೆಯದೇ ಪೊಲೀಸ್ ಭವನ ನಿರ್ಮಿಸಿರುವುದರಿಂದ ದಂಡದ ರೂಪ ದುಪ್ಪಟ್ಟು ಹಣ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪೊಲೀಸ್ ಇಲಾಖೆ 42,600 ಚದರ ಅಡಿ ವಿಸ್ತೀರ್ಣ ಆಸ್ತಿಗೆ ಪಾವತಿಸಬೇಕಾದ ಮೊತ್ತವನ್ನು ವಾರ್ಷಿಕ 23 ಸಾವಿರ ರೂ. ಕಂದಾಯ ರೂಪದಲ್ಲಿ ಪಾವತಿಸುತ್ತಿತ್ತು. ಆದರೆ ಪಾಲಿಕೆ ಸಿಬ್ಬಂದಿ ಅಳತೆ ಮಾಡಿದಾಗ ಪೊಲೀಸ್ ಭವನದ ಜಾಗ 64,218 ಚದರ ಅಡಿ ವಿಸ್ತೀರ್ಣವಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ 2003-04ರಿಂದ 2018-19ನೇ ಸಾಲಿನವರೆಗೆ 16 ವರ್ಷಕ್ಕೆ 1,65,80,818 ರೂಪಾಯಿ ಪಾವತಿಸುವಂತೆ ನೋಟೀಸ್ ನೀಡಿತ್ತು. ಅಲ್ಲದೇ ನಿಯಮ ಉಲ್ಲಂಘಿಸಿದ ಪರಿಣಾಮ ದುಪ್ಪಟ್ಟು ತೆರಿಗೆ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

English summary
Mysuru Police bhavana authorities has to pay 1.65 crore tax to income tax department. This is the Second time department issued notice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X