ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ ಬಿ ಐ ವಿರುದ್ಧ ಬೀದಿಗಿಳಿದ ಮೈಸೂರು ಜನ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜನವರಿ 10 : ಕೇಂದ್ರ ಸರ್ಕಾರವು ಭಾರತೀಯ ಸ್ಟೇಟ್ ಬ್ಯಾಂಕ್ ನ ಉಳಿತಾಯ ಖಾತೆಯ ಕನಿಷ್ಠ ಮೊತ್ತವನ್ನು 3 ಸಾವಿರ ರೂ.ಗಳಿಂದ 500 ರೂ.ಗಳಿಗೆ ಇಳಿಕೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು.

ಎಸ್ ಬಿಐನ ನಿವ್ವಳ ಲಾಭಕ್ಕಿಂತ ಗ್ರಾಹಕರಿಂದ ವಸೂಲಾದ ದಂಡ ಮೊತ್ತ ಹೆಚ್ಚು ಎಸ್ ಬಿಐನ ನಿವ್ವಳ ಲಾಭಕ್ಕಿಂತ ಗ್ರಾಹಕರಿಂದ ವಸೂಲಾದ ದಂಡ ಮೊತ್ತ ಹೆಚ್ಚು

ನಗರದ ಸಯ್ಯಾಜಿರಾವ್ ರಸ್ತೆಯ ಡಿ.ಬನುಮಯ್ಯ ಕಾಲೇಜು ಪಕ್ಕದ ಬ್ಯಾಂಕ್ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಎಸ್ಬಿಐ ವಿರುದ್ಧ ಧಿಕ್ಕಾರ ಕೂಗಿದರಲ್ಲದೆ, ಎಸ್ಬಿಐ ಉಳಿತಾಯ ಖಾತೆಯ ಕನಿಷ್ಠ ಮೊತ್ತವನ್ನು 3 ಸಾವಿರ ರೂ.ಗಳಿಗೆ ನಿಗದಿ ಮಾಡಿರುವುದರಿಂದ ಸಾಮಾನ್ಯರು, ಬಡವರು ತಮ್ಮ ಉಳಿತಾಯ ಖಾತೆಯಲ್ಲಿ ಇಷ್ಟು ಮೊತ್ತವನ್ನು ನಿಭಾಯಿಸಲಾರದೆ, ಪ್ರತಿತಿಂಗಳು ಬ್ಯಾಂಕ್ ವಿಧಿಸುವ ದಂಡಕ್ಕೆ ಕಂಗಾಲಾಗಿದ್ದಾರೆ. ಎಸ್ಬಿಐ ಬಡ ಜನರ ಸಾವಿರಾರು ರೂಪಾಯಿಗಳನ್ನು ದಂಡದ ರೂಪದಲ್ಲಿ ನುಂಗಿ ನೀರು ಕುಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಕ್ರಾಂತಿ ವಿಶೇಷ ಪುಟ

Mysuru people protest against SBI

ಕೋಟಿ - ಕೋಟಿ ದಂಡ ವಸೂಲಿ
2017-18ನೇ ಸಾಲಿನಲ್ಲಿ ಕನಿಷ್ಠ ಮೊತ್ತ ನಿಭಾಯಿಸಲಾಗದವರ ಖಾತೆಯಿಂದ ಎಸ್ಬಿಐ ಸುಮಾರು 1,771.67 ಕೋಟಿ ರೂ.ಗಳನ್ನು ದಂಡವಾಗಿ ವಸೂಲಿ ಮಾಡಿದೆ. ಈ ರೀತಿ ಬಡ, ಸಾಮಾನ್ಯ ಜನರಿಗೆ ಅವೈಜ್ಞಾನಿಕವಾಗಿ ದಂಡ ವಿಧಿಸುತ್ತಿರುವುದು ಸರಿಯಲ್ಲ. ಪ್ರಧಾನಿಯವರು ಡಿಜಿಟಲ್ ಇಂಡಿಯಾ ಮಾಡುವ ಮೂಲಕ ಜನಸಾಮಾನ್ಯರು ಬ್ಯಾಂಕಿಗೆ ಬಾರದ ಹಾಗೆ ಮಾಡುತ್ತಿದ್ದಾರೆಂದು ಪತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
English summary
People in Mysuru protested against state bank of India to reduce deposit ammount from Rs. 3000 to 500 Rs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X