ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಬಜೆಟ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ ಮೈಸೂರಿಗರು

|
Google Oneindia Kannada News

ಮೈಸೂರು, ಫೆಬ್ರವರಿ 8: 3 ಗಂಟೆಯ ಸುದೀರ್ಘ ಅವಧಿಯ ಬಜೆಟ್ ಗೆ ಮೈಸೂರಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮೈಸೂರಿಗರ ಬಹುನಿರೀಕ್ಷಿತ ಕನಸಾಗಿದ್ದ ಡಬ್ಬಲ್ ಡೆಕ್ಕರ್ ಬಸ್ ಸೇವೆಗೆ 5 ಕೋಟಿ ಮೀಸಲಿಟ್ಟಿದ್ದು, ಸಾಂಸ್ಕೃತಿಕ ನಗರಿ ಮಂದಿಗೆ ಸಂತಸ ತಂದಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್ ಟಿಡಿಸಿ) ವತಿಯಿಂದ ಮೈಸೂರಿನಲ್ಲಿ ಲಂಡನ್ ಬಿಗ್ ಬಸ್ ಮಾದರಿಯ 6 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ ಆರಂಭಿಸಲು 5 ಕೋಟಿ ರೂ. ಅನುದಾನವನ್ನು ಸಿಎಂ ಬಜೆಟ್ ನಲ್ಲಿ ಘೋಷಿಸಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಾಯಕವಾಗಿದೆ.

ಕರ್ನಾಟಕ ಬಜೆಟ್ 2019: ಬೆಂಗಳೂರಿನ ವಿವಿಧ ಇಲಾಖೆಗಳಿಗೆ ದೊರೆತಿದ್ದೇನು? ಕರ್ನಾಟಕ ಬಜೆಟ್ 2019: ಬೆಂಗಳೂರಿನ ವಿವಿಧ ಇಲಾಖೆಗಳಿಗೆ ದೊರೆತಿದ್ದೇನು?

ಸಾಲಮನ್ನಾ ಕುರಿತಾಗಿ ಕೆಲ ರೈತರು ಅಸಮಾಧಾನ ವ್ಯಕ್ತಪಡಿಸಿದ್ದು, ಕುಟುಂಬದಲ್ಲಿ ಒಬ್ಬರ ಸಾಲಮನ್ನಾ ಮಾಡಲು ಮೈತ್ರಿ ಸರ್ಕಾರ ಮುಂದಾಗಿದೆ. ಆದರೆ ನಮ್ಮ ಕುಟುಂಬದಲ್ಲೇ ಇಬ್ಬರು ಮೂವರು ಸಾಲ ಮಾಡಿದ್ದೇವೆ. ಅದು ಬೆಳೆ ಬೆಳೆಯಲು , ಅದಕ್ಕೆ ಏನು ಮಾಡಬೇಕು ಹೇಳಿ ? ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದು ರೈತರ ವಿಚಾರವಾದರೆ ಇತ್ತ ಮಂಡ್ಯ ಸೇರಿದಂತೆ ಮೈಸೂರಿಗೂ ಸೇರಿ ಜಲಧಾರಾ ಯೋಜನೆಗೆ 4 ಸಾವಿರ ಕೋಟಿ ಯೋಜನೆಗೆ ತೆಗೆದಿರಸಲಾಗಿದೆ. ಇದು ಮೈಸೂರಿನ ಕೆಲವು ಭಾಗಕ್ಕೂ ಸಹ ಸಹಕಾರಿಯಾಗಲಿದೆ.

 ಹೊಸ ಕೊಡುಗೆಗಳನ್ನೇನೂ ಕೊಟ್ಟಿಲ್ಲ

ಹೊಸ ಕೊಡುಗೆಗಳನ್ನೇನೂ ಕೊಟ್ಟಿಲ್ಲ

ಮೈಸೂರಿಗೆ ಈ ಬಾರಿ ಒಟ್ಟಾರೆ ಬಜೆಟ್ ನಲ್ಲಿ 150 ಕೋಟಿ ರೂ. ಘೋಷಣೆ ಮಾಡಲಾಗಿದೆ.ಮೆಟ್ರೋ ರೈಲು ಯೋಜನೆಯ ಸಾಧ್ಯತಾ ವರದಿ ತಯಾರಿಕೆ ಅಸ್ತು ಎನ್ನಲಾಗಿದೆ. ಭಾಷಾ ಕೌಶಲ್ಯ ತರಬೇತಿಗೆ ಅನುದಾನ, ಮೈಸೂರು ಸೇರಿದಂತೆ 4 ಜಿಲ್ಲೆಗಳಲ್ಲಿ ವಿಭಾಗಮಟ್ಟದ ತರಬೇತಿ ಕೇಂದ್ರ ಸ್ಥಾಪನೆ, ಜೆ ಎಸ್ ಎಸ್ ಪ್ರಾಯೋಜಕತ್ವದಲ್ಲಿ ಅರ್ಬನ್ ಹಾತ್ ಗೆ 5 ಕೋಟಿ ಅನುದಾನ, ಡಬ್ಬಲ್ ಡಕ್ಕರ್ ಸೇವೆಗೆ 5 ಕೋಟಿ ಮೀಸಲಿಟ್ಟಿದ್ದು ಹೊರತು ಪಡಿಸಿದರೆ ಹೊಸ ಅಭಿವೃದ್ಧಿಕಾರಕ ಕೊಡುಗೆಗಳನ್ನೇನೂ ಕೊಟ್ಟಿಲ್ಲ.

 ಮೈಸೂರು ಮೇಯರ್ ಪ್ರತಿಕ್ರಿಯೆ

ಮೈಸೂರು ಮೇಯರ್ ಪ್ರತಿಕ್ರಿಯೆ

ಮೈಸೂರು ಮಹಾನಗರ ಪಾಲಿಕೆಗೆ ಈ ಹಿಂದೆ ಯಡಿಯೂರಪ್ಪ ಅವರ ಅವಧಿಯಿಂದ ಅಭಿವೃದ್ಧಿಗಾಗಿ 100 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ಈ ಬಾರಿ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ ಅದರ ಪ್ರಮಾಣವನ್ನು 50 ಕೋಟಿ ಏರಿಸಿದ್ದಾರೆ. ಅಂದರೆ ಸದ್ಯ 150 ಕೋಟಿ ಅನುದಾನ ಮೈಸೂರಿಗರಿಗೆ ದೊರಕಿದೆ. ಇದೊಂದು ಸಂತಸದಾಯಕ ವಿಷಯ ಎಂದು ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದ್ದಾರೆ.

ಕುಮಾರಸ್ವಾಮಿ ಬಜೆಟ್ 2019: ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಕುಮಾರಸ್ವಾಮಿ ಬಜೆಟ್ 2019: ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

 ಕುರುಬೂರು ಶಾಂತಕುಮಾರ್ ಅನಿಸಿಕೆ

ಕುರುಬೂರು ಶಾಂತಕುಮಾರ್ ಅನಿಸಿಕೆ

ಇನ್ನು ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ , ಸಮ್ಮಿಶ್ರ ಸರ್ಕಾರ ಮಂಡಿಸಿರುವ ಬಜೆಟ್ ಸಿಹಿನೂ ಅಲ್ಲ, ಕಹಿನೂ ಅಲ್ಲ. ಬಜೆಟ್​ನಲ್ಲಿ ಸಮರ್ಪಕವಾಗಿ ಅನುದಾನ ನೀಡಿಲ್ಲ ಎಂದರು.

ಕರ್ನಾಟಕ ಬಜೆಟ್: ನಾಲ್ಕು ಹೊಸ ತಾಲ್ಲೂಕುಗಳ ರಚನೆ ಕರ್ನಾಟಕ ಬಜೆಟ್: ನಾಲ್ಕು ಹೊಸ ತಾಲ್ಲೂಕುಗಳ ರಚನೆ

 ಹಲವು ರೈತರ ಸಾಲ ಮನ್ನಾ ಆಗಿಲ್ಲ

ಹಲವು ರೈತರ ಸಾಲ ಮನ್ನಾ ಆಗಿಲ್ಲ

ಕಳೆದ ಬಾರಿಯೇ ರೈತರು ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿ ಷರತ್ತುಗಳನ್ನು ವಿಧಿಸಿದರು. ಆದರೆ ಇಂದಿಗೂ ಹಲವು ರೈತರ ಸಾಲ ಮನ್ನಾ ಆಗಿಲ್ಲ. ಲೋಕಸಭಾ ಚುನಾವಣೆ ದೃಷ್ಠಿಕೋನದಿಂದ ಬಜೆಟ್ ಮಂಡಿಸಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

ಒಟ್ಟಾರೆಯಾಗಿ ಮೈಸೂರು ಜನರು ಈ ಬಾರಿಯ ಬಜೆಟ್ ಅನ್ನು ಸಮಾಧಾನಕಾರ ಎಂದು ಒಪ್ಪಿಕೊಳ್ಳುತ್ತಿದ್ದಾರೆ ಅಷ್ಟೇ.

ಕುಮಾರಸ್ವಾಮಿ ಬಜೆಟ್: ಸಾಲಮನ್ನಾ ಯೋಜನೆಗೆ 12,650 ಕೋಟಿಕುಮಾರಸ್ವಾಮಿ ಬಜೆಟ್: ಸಾಲಮನ್ನಾ ಯೋಜನೆಗೆ 12,650 ಕೋಟಿ

English summary
150 crore rs allotted for developmet of Mysuru. But peoples and farmers of district expressed unsatisfied about CM Kumaraswamy budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X