ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆ ತೆರೆಯುವ ಬಗ್ಗೆ ಮಹತ್ವದ ನಿರ್ಧಾರ

|
Google Oneindia Kannada News

ಮೈಸೂರು, ಆ. 11: ಐದು ತಿಂಗಳುಗಳ ಬಳಿಕ ಮೈಸೂರು ಅರಮನೆಯನ್ನು ಮತ್ತೆ ಪ್ರವಾಸಿಗರ ವೀಕ್ಷಣಗೆಗೆ ತೆರೆಯಲು ನಿರ್ಧಾರ ಮಾಡಲಾಗಿದೆ. ಕೊರೊನಾ ವೈರಸ್ ಸೋಂಕು ಹರಡುವ ಆತಂಕದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ ತಿಂಗಳಿನಲ್ಲಿ ಮೈಸೂರು ಅರಮನೆಯನ್ನು ಸಾರ್ವಜನಿಕರ ವೀಕ್ಷಣಗೆ ಬಂದ್ ಮಾಡಲಾಗಿತ್ತು. ರಾಜ್ಯದಲ್ಲಿ ಆರಂಭದಲ್ಲಿಯೇ ಕೋವಿಡ್ ಸೋಂಕಿತತರು ಮೈಸೂರಿನಲ್ಲಿ ಪತ್ತೆಯಾದಾಗ ದೇಶದಲ್ಲಿ ಲಾಕ್‌ಡೌನ್ ಜಾರಿಗೆ ಬರುವ ಮೊದಲೇ ಮೈಸೂರನ್ನು ಲಾಕ್‌ಡೌನ್ ಮಾಡಲಾಗಿತ್ತು. ಹೀಗಾಗಿಯೇ ಮೈಸೂರಿನಲ್ಲಿ ಕೊರೊನಾ ವೈರಸ್ ಹರಡುವುದು ನಿಯಂತ್ರಣಕ್ಕೆ ಸಿಕ್ಕಿತ್ತು.

ಇದೀಗ ಮತ್ತೆ ವಿಶ್ವಪ್ರಸಿದ್ಧ ಮೈಸೂರು ಅರಮನೆಯನ್ನು ಪ್ರವಾಸಿಗರ ವೀಕ್ಷಣಗೆ ತೆರೆಯಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಮೈಸೂರು ಅರಮನೆ ಮಂಡಳಿ ಸಾರ್ವಜನಿಕರು ಅರಮನೆ ವೀಕ್ಷಣೆ ಮಾಡಬಹುದು ಎಂದಿದ್ದಾರೆ.

Mysuru Palace is open for visitors all days including Saturday Sunday and holidays

ಮೈಸೂರು ಮೃಗಾಲಯದಲ್ಲಿ ದುರಂತ: ಮಾವುತನನ್ನು ಕೊಂದ ಆನೆಮೈಸೂರು ಮೃಗಾಲಯದಲ್ಲಿ ದುರಂತ: ಮಾವುತನನ್ನು ಕೊಂದ ಆನೆ

ಮೈಸೂರು ಅರಮನೆಯನ್ನು ಪ್ರತಿ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳನ್ನು ಒಳಗೊಂಡಂತೆ ಎಲ್ಲಾ ದಿನಗಳಲ್ಲೂ ಪ್ರವಾಸಿಗರ ವೀಕ್ಷೆಣೆಗಾಗಿ ತೆರೆಯಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯ ವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶ ಮುಕ್ತವಾಗಿದ್ದು, ಅರಮನೆಯ ಆವರಣದಲ್ಲಿ ಸಂಜೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಪ್ರತಿ ಭಾನುವಾರದಂದು ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯನ್ನು ಸಹ ತಾತ್ಕಲಿಕವಾಗಿ ರದ್ದು ಪಡಿಸಲಾಗಿದೆ ಎಂದು ಅರಮನೆ ಮಂಡಳಿ ಉಪ‌ನಿರ್ದೆಶಕ ಟಿ.ಎಸ್. ಸುಬ್ರಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
The Mysuru Palace is open for visitors every day including every Saturday, Sunday, and the general holidays. The palace is open to tourists from 10 am to 5.30 pm, and the evening's sound and light program in the palace premises has been temporarily canceled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X