ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಹೀಗಿರುತ್ತೆ ಯದುವೀರ ದತ್ತು ಸ್ವೀಕಾರ ಸಮಾರಂಭ

By Super
|
Google Oneindia Kannada News

ಮೈಸೂರು, ಫೆ. 19: ಮೈಸೂರು ಸಂಸ್ಥಾನದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಯದುವೀರ ಗೋಪಾಲರಾಜ ಅರಸ್ ಅವರನ್ನು ದತ್ತು ಪಡೆಯುವ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿ ಸಕಲ ತಯಾರಿ ನಡೆಯುತ್ತಿದೆ.

ಯದುವೀರ ಅರಸ್ ಅವರನ್ನು ಬೆಟ್ಟದ ಕೋಟೆ ಕುಟುಂಬದಿಂದ ರಾಜ ಕುಟುಂಬಕ್ಕೆ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಫೆ. 23ರಂದು ಅರಮನೆಯ ಕಲ್ಯಾಣ ಮಂಟಪದಲ್ಲಿ ನಡೆಸಲಾಗುವುದು. ಇದೇ ಕಲ್ಯಾಣ ಮಂಟಪದಲ್ಲಿ ಪ್ರಮೋದಾ ದೇವಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಿವಾಹ ಜರುಗಿತ್ತು. ಅರಮನೆಯ ಪುರೋಹಿತರು ನಿಗದಿಪಡಿಸಿರುವಂತೆ ಮಧ್ಯಾಹ್ನ 1.20 ರಿಂದ 1.52ರೊಳಗೆ ದತ್ತು ಪಡೆಯುವ ಕಾರ್ಯಕ್ರಮ ನಡೆಯಲಿದೆ. [ಯದುವೀರ ಕೃತಜ್ಞತೆ]

mysore palace

ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಆಯ್ದ ವ್ಯಕ್ತಿಗಳಿಗೆ ರಾಜ ಕುಟುಂಬದ ಸದಸ್ಯರು ಆಹ್ವಾನ ಪತ್ರಿಕೆ ನೀಡಲು ಆರಂಭಿಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವವರು ನಿಗದಿಪಡಿಸಿದ ದಿರಿಸು (ದರ್ಬಾರ್ ದಿರಿಸು / ರಾಷ್ಟ್ರೀಯ ದಿರಿಸು / ಲಾಂಚ್ ಸೂಟ್) ಧರಿಸಿರಬೇಕು. ದತ್ತು ಸ್ವೀಕಾರ ಕಾರ್ಯಕ್ರಮದ ಸ್ಥಳದಲ್ಲಿ ಮಧ್ಯಾಹ್ನ 12.45 ಗಂಟೆಗೆ ಹಾಜರಿರಬೇಕು. [ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಘೋಷಣೆ]

ಅತಿಥಿಗಳು ಬ್ರಹ್ಮಪುರಿ ಗೇಟು ಮತ್ತು ಮದನ ವಿಲಾಸ ಪೋರ್ಟಿಕೊ ಮೂಲಕ ಒಳ ಪ್ರವೇಶಿಸಲು ಅವಕಾಶವಿದೆ.

ಹೇಗೆ ನಡೆಯುತ್ತೆ ಮೆರವಣಿಗೆ : ದತ್ತು ಸ್ವೀಕರಿಸಿದ ನಂತರ ಸಂಜೆ 6.30 ಗಂಟೆಗೆ ಮೈಸೂರು ರಾಜ ಕುಟುಂಬದ ಸಂಪ್ರದಾಯದಂತೆ ಸಾರ್ವಜನಿಕ ಮೆರವಣಿಗೆ ಆಯೋಜಿಸಲಾಗಿದೆ. ಮೈಸೂರು ಅರಮನೆಯ ಆನೆಬಾಗಿಲಿನಿಂದ ಮೆರವಣಿಗೆ ಆರಂಭವಾಗಲಿದೆ. ಬಲರಾಮ ಗೇಟ್ ಕೋಟೆ ಗಣಪತಿ ದೇಗುಲದ ಮಾರ್ಗದಲ್ಲಿ ಮುಂದುವರಿಯಲಿದೆ. [ಪ್ರಮೋದಾ ದೇವಿ ಮೇಲೆ ಅಸಮಾಧಾನ]

ಚಾಮರಾಜ ಮೂರ್ತಿ ವೃತ್ತವನ್ನು ಸುತ್ತುಹಾಕಿ ಕೋಟೆ ಆಂಜನೇಯ ದೇಗುಲವನ್ನು ತಲುಪಲಿದೆ. ಅರಮನೆಯನ್ನು ಪ್ರವೇಶಿಸಿ ಜಯರಾಮ ಗೇಟ್ ಮೂಲಕ ಅರಮನೆಯನ್ನು ಪ್ರವೇಶಿಸಿ ವರಾಹ ದೇಗುಲ (ಸೋಮೇಶ್ವರ ದೇಗುಲ ಹಾಗೂ ತ್ರಿನೇಶ್ವರ ದೇಗುಲ) ಪ್ರವೇಶಿಸಲಿದೆ. ನಂತರ ಚಾಮುಂಡಿ ತೊಟ್ಟಿ ಮೂಲಕ ಆನೆಬಾಗಿಲು ಪ್ರವೇಶಿಸಲಿದೆ.

ಅಂದು ಸಂಜೆ 6.30ರ ನಂತರ ಅರಮನೆಯಲ್ಲಿ ದೀಪ ಹಚ್ಚಲಾಗುವುದು.

English summary
Mysore Royal Family has started sending invitations to selected dignitaries to attend the adoption ceremony of Yaduveer from Bettada Kote family into the royal family. There will be a public procession after adoption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X