ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆಯ ಪ್ರವೇಶ ದರ ಏರಿಕೆ;ಎಷ್ಟಾಯ್ತು ಗೊತ್ತಾ?

|
Google Oneindia Kannada News

ಮೈಸೂರು, ಮೇ 8: ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದೆ.ಏಪ್ರಿಲ್‌ 1ರಿಂದಲೇ ನೂತನ ದರ ಜಾರಿಗೆ ಬಂದಿದ್ದು, ಈ ಹಿಂದೆ 50ರೂ ಇದ್ದ ಪ್ರವೇಶ ದರ, ಇದೀಗ 70ಕ್ಕೆ ಏರಿಸಲಾಗಿದೆ. ಮಕ್ಕಳು ಹಾಗೂ ವಿದ್ಯಾರ್ಥಿಗಳ ಪ್ರವೇಶ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 20 ರೂ.ಪ್ರವೇಶ ದರ ಹೆಚ್ಚಳಕ್ಕೆ ಅರಮನೆ ಮಂಡಳಿ ಆಡಳಿತ ಒಪ್ಪಿಗೆ ನೀಡಿದೆ. ಇದರೊಂದಿಗೆ ಎರಡು ವರ್ಷಗಳಲ್ಲಿ 30 ರೂ.ಏರಿಕೆ ಮಾಡಲಾಗಿದೆ.

ಈ ವರ್ಷ ಮೈಸೂರು ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಎಷ್ಟು ಗೊತ್ತಾ?ಈ ವರ್ಷ ಮೈಸೂರು ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಎಷ್ಟು ಗೊತ್ತಾ?

ಸರಕು ಮತ್ತು ಸೇವಾ ತೆರಿಗೆ ವಿಧಿಸುತ್ತಿರುವ ಕಾರಣ ಪ್ರವೇಶ ದರದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ 2017ರಲ್ಲಿ ಪ್ರವೇಶ ದರದಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಭಾರತೀಯರು ಹಾಗೂ ವಿದೇಶಿಯರಿಗೆ ಏಕರೂಪದ ಪ್ರವೇಶ ದರ ನಿಗದಿಪಡಿಸಲು ಆಗ ನಿರ್ಧರಿಸಲಾಗಿತ್ತು. ಭಾರತೀಯರಿಗೆ 40 ರೂ ಪ್ರವೇಶ ದರವಿತ್ತು. ಇದನ್ನು 50 ರೂ.ಗೆ ಹೆಚ್ಚಿಸಲಾಗಿತ್ತು. ವಿದೇಶಿಯರಿಗೆ 200 ರೂ. ಇದ್ದದ್ದನ್ನು 50 ರೂ.ಗೆ ತಗ್ಗಿಸಲಾಗಿತ್ತು.

Mysuru palace entrance fees has been hiked

ಕಳೆದ ವರ್ಷ ಮೃಗಾಲಯದ ಪ್ರವೇಶ ದರ ಹೆಚ್ಚಿಸಲಾಗಿತ್ತು. ಸಿಬ್ಬಂದಿ ವೆಚ್ಚ, ಪ್ರಾಣಿಗಳ ಆಹಾರ ವಸ್ತುಗಳ ಬೆಲೆ ಹೆ‌ಚ್ಚಳ, ನಿರ್ವಹಣಾ ವೆಚ್ಚಗಳ ಹೊರೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ಹೋಟೆಲ್‌ ಮಾಲೀಕರ ಸಂಘ ಸೇರಿದಂತೆ ಪ್ರವಾಸಿ ಪ್ರವರ್ತಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆಂದು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯು ಏಕ ಟಿಕೆಟ್‌ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದವು.

 ಹೊಸವರ್ಷಾಚರಣೆ: ಸಾಂಸ್ಕೃತಿಕ ನಗರಿಯತ್ತ ಪ್ರವಾಸಿಗರ ದಂಡು ಹೊಸವರ್ಷಾಚರಣೆ: ಸಾಂಸ್ಕೃತಿಕ ನಗರಿಯತ್ತ ಪ್ರವಾಸಿಗರ ದಂಡು

ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಆದರೆ, ಅದನ್ನು ಮುಂದುವರಿಸುವ ಬಗ್ಗೆ ಯಾರೂ ಆಸಕ್ತಿ ತೋರಿಸುತ್ತಿಲ್ಲ. ಸದ್ಯ ವಯಸ್ಕರಿಗೆ 70 ರೂ, ವಿದೇಶಿಗರಿಗೆ 70 ರೂ, ಮಕ್ಕಳಿಗೆ 30ರೂ, ವಿದ್ಯಾರ್ಥಿಗಳಿಗೆ 10ರೂ ನಿಗದಿಪಡಿಸಲಾಗಿದೆ.

English summary
Mysuru Ambavilasa palace entrance fees has been hiked at 20 Rs.The new rates have come into effect from April 1 and the price has already been raised to Rs 70 for adults only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X