ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಲಾಕ್ ನಿಂದ ಪಲ್ಸ್ ಪೋಲಿಯೋಗೆ ವಿಶೇಷ ಮಾರ್ಕರ್ ಪೆನ್

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 7 : ಏಷ್ಯದಲ್ಲಿಯೇ ಖ್ಯಾತಿ ಗಳಿಸಿರುವ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲಾಕ್) ಮತ್ತೊಂದು ಹೊಸ ತಂತ್ರಜ್ಞಾನ ಬಳಸಿ ಮಾರ್ಕರ್ ಪೆನ್ ನ್ನು ತಯಾರಿಸಿದೆ.

ಪಂಚರಾಜ್ಯದ ಚುನಾವಣೆಗೆ ಮೈಸೂರಿನಿಂದ ಮಸಿ ಬಳಕೆ!ಪಂಚರಾಜ್ಯದ ಚುನಾವಣೆಗೆ ಮೈಸೂರಿನಿಂದ ಮಸಿ ಬಳಕೆ!

ಪೋಲಿಯೋ ಲಸಿಕೆ ಹಾಕಿಸಿಕೊಂಡ ಮಕ್ಕಳಿಗೆ ಶಾಹಿ ಮೂಲಕ ಬೆರಳಿಗೆ ಗುರುತು ಮಾಡಲಾಗುತ್ತಿದೆ. ಇದೀಗ ಶಾಹಿ ಬದಲಾಗಿ ಈ ಮಾರ್ಕರ್ ಪೆನ್ ಪರಿಚಯಿಸಲು ಮೈಲಾಕ್ ಮುಂದಾಗಿದೆ.

Mysuru Paints And Varnish Limited to provide special marker pens for pulse polio campaign


ಈ ಕುರಿತು ಇಂದು (ಸೋಮವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಲಾಕ್ ಅಧ್ಯಕ್ಷ ವೆಂಕಟೇಶ್, "ಇದೇ ಪ್ರಥಮ ಬಾರಿಗೆ ಮಾರ್ಕರ್ ಪೆನ್ ಗಳನ್ನು ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಂಡ ಮಕ್ಕಳಿಗೆ ಬಳಸಲಾಗುತ್ತಿದ್ದು, ಪೆನ್ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಗುಣಮಟ್ಟದ ಪರೀಕ್ಷೆಗಾಗಿ ಈಗಾಗಲೇ ಆಂಧ್ರಪ್ರದೇಶದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ" ಎಂದರು.

ಲಸಿಕೆ ಹಾಕಿದ ಕೂಡಲೇ ಮಕ್ಕಳು ಬೆರಳನ್ನು ಬಾಯಿಗೆ ಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಿ ವಿಶೇಷ ತಂತ್ರಜ್ಞಾನ ಬಳಸಿ ಪೆನ್ ಗಳನ್ನು ತಯಾರಿಸಲಾಗಿದೆ.

Mysuru Paints And Varnish Limited to provide special marker pens for pulse polio campaign

ಈ ಮಾರ್ಕರ್ ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆಗಾಗಿ ದೊರೆತ ನಂತರ ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲಾಗುವುದು. 3 ಎಂ.ಎಲ್ ಸಾಮರ್ಥ್ಯದ ಈ ಮಾರ್ಕರ್ ಪೆನ್ ಗೆ ಒಂದಕ್ಕೆ 60 ರು. ನಿಗದಿಪಡಿಸಲಾಗಿದ್ದು, 350 ರಿಂದ 400 ಮಕ್ಕಳಿಗೆ ಇದನ್ನು ಬಳಸಬಹುದಾಗಿದೆ,

ಅಲ್ಲದೇ ಈಚೆಗೆ ನಡೆದ ರಾಷ್ಟ್ರಪತಿ ಹಾಗೂ ಉಪರಾಷ್ಟ್ರತಪತಿ ಚುನಾವಣೆಯಲ್ಲಿಯೂ ಪೆನ್ ಬಳಕೆಯಾಗಿರುವುದು ಮೈಲಾಕ್ ಗೆ ಹೆಮ್ಮೆಯ ಸಂಗತಿಯೆಂದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

English summary
The newly developed marker pens are transported to Andhra Pradesh to use in pulse polio campaign, said Mysuru Paints and Varnish Limited (MPVL) chairman H A Venkatesh, at a press meet held at the Press Club here on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X