• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಲ್ಲಿ ಜನನ, ಮರಣ ನೋಂದಣಿ ಆನ್‌ಲೈನ್‌

By Kiran B Hegde
|

ಮೈಸೂರು, ಫೆ. 9: ಆನ್‌ಲೈನ್‌ನಲ್ಲಿ ಜನನ ಮತ್ತು ಮರಣ ನೋಂದಣಿ ಸೌಲಭ್ಯವು ಇಷ್ಟು ದಿನ ನಗರದ ನಿವಾಸಿಗಳಿಗೆ ಮಾತ್ರ ಲಭ್ಯವಿತ್ತು. ಮಾರ್ಚ್ 1ರಿಂದ ಮೈಸೂರಿನ ಗ್ರಾಮೀಣ ಜನತೆಗೂ ಈ ಅವಕಾಶ ಸಿಗಲಿದೆ.

ರಾಜ್ಯದ ಒಟ್ಟು 11 ಜಿಲ್ಲೆಗಳಲ್ಲಿ ಫೆ. 1ರಿಂದಲೇ ಆನ್‌ಲೈನ್‌ನಲ್ಲಿ ಜನನ ಮತ್ತು ಮರಣ ನೋಂದಣಿಯ ಸೌಲಭ್ಯ ಒದಗಿಸಲಾಗಿದೆ. ಮೈಸೂರು ಸೇರಿದಂತೆ ಇನ್ನೂ 9 ಜಿಲ್ಲೆಗಳಲ್ಲಿ ಮಾರ್ಚ್ 1ರಿಂದ ಜಾರಿಗೆ ಬರಲಿದೆ. [ದಿ ಅದರ್ ಎಂಡ್ ಆಫ್ ದಿ ಕಾರಿಡಾರ್' ಲೋಕಾರ್ಪಣೆ]

ಈ ಕುರಿತು ಅಂಕಿ ಅಂಶಗಳ ನಿರ್ದೇಶನಾಲಯದ ಜಂಟಿ ನಿರ್ದೇಶಕ ಕೆ.ಎಸ್. ಶಂಕರ್ ಮಾಹಿತಿ ನೀಡಿದ್ದಾರೆ. ತಹಸೀಲ್ದಾರರು, ಉಪ ತಹಸೀಲ್ದಾರರು, ಗ್ರಾಮ ಲೆಕ್ಕಿಗರು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಲ್ಲಿನ ಡೇಟಾ ಎಂಟ್ರಿ ನಿರ್ವಾಹಕರಿಗೆ ಹಮ್ಮಿಕೊಂಡಿದ್ದ 'E-JanMa' ಕಾರ್ಯಕ್ರಮದ ತರಬೇತಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ. [ವಾಹನದ ಟಿಂಟೆಡ್ ಗ್ಲಾಸ್ ಬದಲಾಯಿಸಿ]

ಆದ್ದರಿಂದ ಇನ್ನು ಮುಂದೆ ಮೈಸೂರು ಜಿಲ್ಲೆಯ ನಗರ ಹಾಗೂ ಗ್ರಾಮೀಣ ನಿವಾಸಿಗಳೆಲ್ಲರೂ ತಮ್ಮ ಕುಟುಂಬದ ಜನ್ಮ ಹಾಗೂ ಮರಣ ಮಾಹಿತಿಯನ್ನು ಮನೆಯಲ್ಲಿ ಕುಳಿತೇ ನೋಂದಣಿ ಮಾಡಬಹುದು. ನೋಂದಾವಣಿ ಆದ 21 ದಿನಗಳಲ್ಲಿ ಪ್ರಮಾಣಪತ್ರ ಸಿಗಲಿದೆ ಎಂದು ಕೆ.ಎಸ್. ಶಂಕರ್ ಹೇಳಿದ್ದಾರೆ. [ಬೆಂಗಳೂರು-ಮೈಸೂರು ಆರು ಪಥದ ರಸ್ತೆ ವಿಳಂಬ?]

ಜನನ ಪ್ರಮಾಣಪತ್ರವು ಶಾಲೆ ಪ್ರವೇಶಾತಿ, ಉದ್ಯೋಗ, ಸರ್ಕಾರಿ ಸೌಲಭ್ಯ ಪಡೆಯಲು, ಮತದಾನ ಮಾಡುವಾಗ, ಚಾಲನಾ ಪರವಾನಗಿ ಪಡೆಯುವಾಗ, ಪಾಸ್ ಪೋರ್ಟ್ ಮತ್ತು ಇತರ ಸಂದರ್ಭಗಳಿಗೆ ಅಗತ್ಯ. [ಮೈಸೂರಿಗೂ ಸಿಗುತ್ತೆ ವೈ ಫೈ]

ಮರಣ ಪ್ರಮಾಣಪತ್ರವು ಜೀವನ ವಿಮಾ ಮೊತ್ತ, ಪಿತ್ರಾರ್ಜಿತ ಆಸ್ತಿ ಹಾಗೂ ಸಹಾನುಭೂತಿ ಆಧಾರದ ಮೇಲೆ ಉದ್ಯೋಗ ಪಡೆಯಲು ಅತ್ಯವಶ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Registration of births and deaths in rural areas of Mysuru district, will go online from March 1st. K.S. Shankar, Joint Director of Directorate of Economics and Statistics has announced this.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more