ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಮಹದೇವಪುರದಲ್ಲಿ ಕನಕನಿಗೆ ನಿತ್ಯಪೂಜೆ!

ದಿನನಿತ್ಯ ಕನಕನನ್ನು ನೆನೆಯಲು ಅಲ್ಲಿ ಸಾಧ್ಯವಾಗಿರುವುದು ಹೇಗೆಂದರೆ ಗ್ರಾಮದಲ್ಲಿ ಕನಕನಿಗಾಗಿಯೇ ಗುಡಿಕಟ್ಟಿದ್ದಾರೆ. ಜತೆಗೆ ನಿತ್ಯವೂ ಪೂಜಾಕೈಂಕರ್ಯಗಳನ್ನು ನೆರವೇರಿಸುತ್ತಾರೆ.

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ನವೆಂಬರ್ 17: ರಾಜ್ಯದ ಬಹುತೇಕ ಕಡೆ ಕನಕದಾಸರನ್ನು ಅವರ ಜಯಂತಿ ಸಂದರ್ಭ ಮಾತ್ರ ನೆನಪು ಮಾಡಿಕೊಳ್ಳಲಾಗುತ್ತದೆ. ಆದರೆ ಮೈಸೂರು ಜಿಲ್ಲೆಯ ಮಹದೇವಪುರದ ಜನ ನಿತ್ಯ ಕನಕನ ಪೂಜೆ ಪಾರ್ಥನೆಯಲ್ಲಿ ಕಾಲಕಳೆಯುತ್ತಾರೆ.

ಇಷ್ಟಕ್ಕೂ ದಿನನಿತ್ಯ ಕನಕನನ್ನು ನೆನೆಯಲು ಅಲ್ಲಿ ಸಾಧ್ಯವಾಗಿರುವುದು ಹೇಗೆಂದರೆ ಗ್ರಾಮದಲ್ಲಿ ಕನಕನಿಗಾಗಿಯೇ ಗುಡಿಕಟ್ಟಿದ್ದಾರೆ. ಜತೆಗೆ ನಿತ್ಯವೂ ಪೂಜಾಕೈಂಕರ್ಯಗಳನ್ನು ನೆರವೇರಿಸುತ್ತಾರೆ.[ಕನಕನ ದರ್ಶನಕ್ಕೆ ದಟ್ಸ್ ಕನ್ನಡ ಬೆಳಕಿಂಡಿ]

kanaka 1

ಕನಕದಾಸರಿಗೆ ದೇಗುಲ ನಿರ್ಮಿಸಿ ಪೂಜೆ ಮಾಡುತ್ತಾ ಬಂದವರು ಕುರುಬ ಸಮಾಜದವರಲ್ಲ. ಗಂಗಮತಸ್ಥರು ಎನ್ನುವುದು ಇಲ್ಲಿನ ಮತ್ತೊಂದು ವಿಶೇಷ. ಇನ್ನು ಎಲ್ಲೂ ಇಲ್ಲದ ಕನಕ ದೇಗುಲ ಇಲ್ಲಿ ಏಕೆ ನಿರ್ಮಾಣವಾಯಿತು ಎಂಬ ಪ್ರಶ್ನೆಯೂ ಕಾಡಬಹುದು.[ಇಂಟರ್ನೆಟ್ ಕಿಂಡಿಯಿಂದ ಕನಕದಾಸರಿಗೆ ನಮನ]

ಇದಕ್ಕೆ ಹೇಳುವ ಇತಿಹಾಸವೆಂದರೆ ದೇಶಸಂಚಾರ ಹೊರಟಿದ್ದ ಕನಕದಾಸರು ಒಮ್ಮೆ ಮೈಸೂರಿನಿಂದ 18 ಕಿ.ಮೀ. ದೂರದಲ್ಲಿರುವ ಮಹದೇವಪುರದತ್ತ ತೆರಳುತ್ತಾರೆ. ಅಲ್ಲಿ ವಿಶಾಲವಾಗಿ ಹರಡಿ ಹರಿಯುವ ಕಾವೇರಿ ನದಿಯನ್ನು ದಾಟಿ ಹೋಗುವುದು ಅನಿವಾರ್ಯವಾಗುತ್ತದೆ. ಆಗ ಅವರು ಅಲ್ಲಿ ತೆಪ್ಪ ನಡೆಸುತ್ತಿದ್ದ ಗಂಗಮತಸ್ಥರನ್ನು ನನ್ನನ್ನು ನದಿ ಆಚೆಗಿನ ದಡಕ್ಕೆ ಸೇರಿಸುವಂತೆ ಕೇಳಿಕೊಳ್ಳುತ್ತಾರೆ.

kanaka 2

ಒಮ್ಮೆ ದಿಟ್ಟಿಸಿದ ತೆಪ್ಪ ನಡೆಸುವ ಗಂಗಮತಸ್ಥರು ಕೊಳಕಾಗಿದ್ದ ಬಟ್ಟೆ, ಎಣ್ಣೆಕಾಣದ ಉದ್ದದ ತಲೆ ಕೂದಲು, ಗೇಣುದ್ದ ಬೆಳೆದ ಗಡ್ಡ ಹೊಂದಿದ್ದ ಕನಕದಾಸರನ್ನು ನೋಡಿ. ಈತ ಕೀಳು ಜಾತಿಯವನಾಗಿರಬೇಕು. ಈತನನ್ನು ತೆಪ್ಪಕ್ಕೆ ಹತ್ತಿಸಿಕೊಳ್ಳುವುದು ಹೇಗೆಂದು ಯೋಚಿಸುತ್ತಾರೆ. ಅಷ್ಟರಲ್ಲೇ ತೆಪ್ಪದಲ್ಲಿದ್ದ ಮೇಲು ಜಾತಿಯವರು ಹತ್ತಿಸಿಕೊಳ್ಳದಂತೆ ತಾಕೀತು ಮಾಡುತ್ತಾರೆ. ಹೀಗಾಗಿ ತೆಪ್ಪದವನು ಅವರನ್ನು ನದಿದಾಟಿಸಲು ಸಾಧ್ಯವಿಲ್ಲ ಎಂದು ಹೇಳಿ ಅವಮಾನ ಮಾಡಿ ಕಳುಹಿಸುತ್ತಾನೆ.

ಆಗ ಮನದಲ್ಲೇ ದೇವರನ್ನು ಪ್ರಾರ್ಥಿಸಿದ ಕನಕದಾಸರು ಪಕ್ಕದ ತೋಟದವರಿಂದ ಬಾಳೆ ಎಲೆ ಕೇಳುತ್ತಾರೆ. ಅವರು ಕೊಡಲು ಹಿಂಜರಿಯುತ್ತಾರೆ. ಕೊನೆಗೊಬ್ಬ ಅವರಿಗೆ ಬಾಳೆ ಎಲೆ ನೀಡುತ್ತಾನೆ. ಅದನ್ನು ತೆಗೆದುಕೊಂಡು ನದಿ ತೀರಕ್ಕೆ ಬರುತ್ತಾರೆ. ಎಲ್ಲರೂ ಕುತೂಹಲದಿಂದ ಅವರೇನು ಮಾಡುತ್ತಾರೆ ಎಂಬುದನ್ನು ನೋಡುತ್ತಾ ನಿಲ್ಲುತ್ತಾರೆ. ಆಗ ಕನಕದಾಸರು ಬಾಳೆ ಎಲೆಯನ್ನು ನೀರಿನಲ್ಲಿ ತೇಲಿಬಿಟ್ಟು ಅದರ ಮೇಲೆ ಕುಳಿತು ದಡ ಸೇರುತ್ತಾರೆ.[ಸಂತ ಶ್ರೇಷ್ಠ ಕನಕದಾಸರ ಜಯಂತಿ]

ಆಗ ಅಲ್ಲಿದ್ದವರಿಗೆ ಈತ ಸಾಮಾನ್ಯದವನಲ್ಲ ದೇವಸ್ವರೂಪಿ ಎಂಬುದು ಅರಿವಾಗಿ ಬಳಿಗೆ ಬಂದು ನಾವು ಮಾಡಿದ ತಪ್ಪಿಗೆ ಕ್ಷಮೆಯಾಚಿಸುತ್ತಾರೆ. ಅಲ್ಲಿಂದ ಇಲ್ಲಿ ತನಕ ಅಲ್ಲಿನ ಗಂಗಮತಸ್ಥರು ಕನಕದಾಸರನ್ನು ಪೂಜಿಸುತ್ತಾ ಬಂದಿದ್ದಾರೆ. ಕನಕದಾಸರು ಕುಳಿತಿದ್ದ ಬಂಡೆಯನ್ನು ಕನಕ ಬಂಡೆಯೆಂದೇ ಕರೆಯುತ್ತಾರೆ. ಕಳೆದ 13 ವರ್ಷಗಳ ಹಿಂದೆ ಇಲ್ಲೊಂದು ಪುಟ್ಟ ಕನಕ ದೇವಾಲಯವನ್ನು ನಿರ್ಮಿಸಲಾಗಿದೆ. ಅದಕ್ಕೂ ಮೊದಲು ಕನಕದಾಸರು ಆಸೀನರಾಗಿದ್ದರು ಎನ್ನಲಾದ ಬಂಡೆಯನ್ನೇ ಪೂಜಿಸುತ್ತಿದ್ದರು. ಕನಕದಾಸ ಜಯಂತಿಯಂದು ಇಲ್ಲಿನ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

English summary
Mysuru near mahavevapura in this village have kanaka temple everday worship to people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X