ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ಸರ್ವೇಕ್ಷಣೆ ರಾಯಭಾರಕ್ಕೆ ಪ್ರಮೋದಾ ದೇವಿ ಒಡೆಯರ್ ಗೆ ಮನವಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 27: ಮೈಸೂರು ಈ ಬಾರಿಯೂ ಸ್ವಚ್ಛ ನಗರಿ ಪಟ್ಟಕ್ಕೆ ಟೊಂಕಕಟ್ಟಿ ನಿಂತಿದೆ. ನಗರಪಾಲಿಕೆ ಸ್ವಚ್ಛ ಭಾರತ ಅಭಿಯಾನಕ್ಕೆ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ಮೈಸೂರು ಅರಮನೆಯಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿ ಸ್ವಚ್ಛ ಸರ್ವೇಕ್ಷಣೆ ರಾಯಭಾರಿಗಳಾಗುವಂತೆ ಮನವಿ ಮಾಡಿದೆ.

ಈ ಸಂದರ್ಭ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾತನಾಡಿ ಕೆಲವೇ ದಿನ ಗಳಲ್ಲಿ ಮೈಸೂರಲ್ಲಿ ಸ್ವಚ್ಛ ಸರ್ವೇಕ್ಷಣೆ ಆರಂಭವಾಗಲಿದ್ದು, ಸಾರ್ವಜನಿಕರ ಸಹ ಭಾಗಿತ್ವ ತುಂಬಾ ಮುಖ್ಯವಾಗಿದೆ. ಮೈಸೂರನ್ನು ಮತ್ತೆ ನಂಬರ್ ವನ್ ಸ್ಥಾನಕ್ಕೆ ಕೊಂಡೊಯ್ಯಲು ಸಹರಿಸಬೇಕು ಎಂದು ಮನವಿ ಮಾಡಿದರು.

 ಯಾರಿಗೂ ಕೇರ್ ಮಾಡದೇ ಮೂತ್ರ ಮಾಡಿದ; ಪಾಲಿಕೆ ಕೈಲಿ ಹೀಗೆ ತಗಲಾಕ್ಕೊಂಡ ಯಾರಿಗೂ ಕೇರ್ ಮಾಡದೇ ಮೂತ್ರ ಮಾಡಿದ; ಪಾಲಿಕೆ ಕೈಲಿ ಹೀಗೆ ತಗಲಾಕ್ಕೊಂಡ

ಸ್ವಚ್ಛ ಸರ್ವೇಕ್ಷಣೆ ರಾಯಭಾರಿಯಾಗ ಬೇಕೆಂದು ಕೇಳಿದ್ದು, ನಾನು ಕೆಲವು ದಿನಗಳು ಮೈಸೂರಲ್ಲಿ ಇರುವುದಿಲ್ಲ. ನಾನು ರಾಯ ಭಾರಿ ಆಗಲಿ, ಆಗದಿರಲಿ. ನನಗೆ ಬೇರೆ ಊರುಗಳಿಗಿಂತ ಮೈಸೂರೆಂದರೆ ಹೆಚ್ಚು ಪ್ರೀತಿ. ಹಾಗಾಗಿ ಮೈಸೂರಿನ ಯಾವುದೇ ಕೆಲಸಕ್ಕಾದರೂ ಸಹಕಾರ ನೀಡಲು ಸಿದ್ಧವಿದ್ದೇನೆ ಎಂದು ಹೇಳಿದರು.

Mysuru Municipality Officials Requested Pramoda Devi Wadeyar To Become Sarwa Sarvekshane Ambassador

ನಗರಪಾಲಿಕೆ ಪ್ರತಿ ವರ್ಷವೂ ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೆ, ಪ್ಲಾಸ್ಟಿಕ್ ಬಳಕೆ ಇನ್ನೂ ಕಡಿಮೆಯಾಗಿಲ್ಲ. ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ಬಿಟ್ಟು ಪೇಪರ್, ಬಟ್ಟೆ ಬ್ಯಾಗ್‍ಗಳನ್ನು ಉಪಯೋಗಿಸಬೇಕು ಎಂದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, 2020ರ ಜ.4ರಿಂದ ಸ್ವಚ್ಛ ಸರ್ವೇ ಕ್ಷಣೆ ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ಇಂದು ರಾಜಮಾತೆ ಪ್ರಮೋದಾದೇವಿ ಒಡೆ ಯರ್ ಅವರನ್ನು ಭೇಟಿ ಮಾಡಿ ಸ್ವಚ್ಛ ಸರ್ವೇಕ್ಷಣೆ ರಾಯಭಾರಿಗಳಾಗುವಂತೆ ಮನವಿ ಮಾಡಿದ್ದೇವೆ. ಅವರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಜಿಯೋ ಉದ್ಯೋಗಿಗಳಿಂದ 'ಜಿಯೋ ಸ್ವಚ್ಛ ರೈಲು ಅಭಿಯಾನ'ಜಿಯೋ ಉದ್ಯೋಗಿಗಳಿಂದ 'ಜಿಯೋ ಸ್ವಚ್ಛ ರೈಲು ಅಭಿಯಾನ'

ಮುಂದಿನ ದಿನಗಳಲ್ಲಿ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿ ಕಳೆದ ಬಾರಿಯಂತೆ ಸಹಕಾರ ನೀಡಬೇಕೆಂದು ಮನವಿ ಮಾಡಲಾಗುವುದು. ಕಳೆದ ಬಾರಿ ಸ್ವಚ್ಛತೆಯಲ್ಲಿ 3ನೇ ಸ್ಥಾನದಲ್ಲಿರುವ ಮೈಸೂರನ್ನು ಮೊದಲ ಸ್ಥಾನಕ್ಕೆ ತರಲು ಶ್ರಮಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ (ರಮಣಿ), ಆರೋಗ್ಯಾಧಿಕಾರಿ ಗಳಾದ ಡಾ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

English summary
This time also mysuru trying to stand as Clean City. Municipality officials have already started preparations for the Clean India Campaign and for this reason, they met Rajamathe Pramoda Devi Wadeyar and requested to become Sarwa sarvekshane Ambassador,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X