ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಪಾಲಿಕೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು, ಜೆಡಿಎಸ್ ಮುಖಭಂಗ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 6: ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ.36ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಗೆಲುವು ಸಾಧಿಸಿದ್ದಾರೆ. ರಜನಿಯವರು 1,997 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಅವರು ಒಟ್ಟು 4,113 ಮತಗಳನ್ನು ಪಡೆದಿದ್ದಾರೆ.

ಇನ್ನು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್ ಅಭ್ಯರ್ಥಿ ಎಸ್‌. ಲೀಲಾವತಿ 2,116 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಈ ವಾರ್ಡ್‌ನಲ್ಲಿ ಪ್ರಾಬಲ್ಯವಿಲ್ಲದ ಬಿಜೆಪಿ ಅಭ್ಯರ್ಥಿ ಶೋಭಾ 601 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ.

ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದಾದ ಕಾರಣ 36ರ ವಾರ್ಡ್‌ಗೆ ಉಪ ಚುನಾವಣೆ ನಡೆದಿತ್ತು. ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಈ ಬಾರಿ ಹೀನಾಯ ಸೋಲಾಗಿದೆ.

Mysuru Municipal Corporation 36th Ward By-election: Congress candidate Rajini Annaiah wins

ಶಾಸಕ ಸಾ.ರಾ. ಮಹೇಶ್ ಸೇರಿದಂತೆ ಜೆಡಿಎಸ್‌ನ ನಾಯಕರಿಗೆ ಭಾರೀ ಮುಖಭಂಗವಾಗಿದೆ. ಜೆಡಿಎಸ್‌ನ ಬಂಡಾಯ ಶಾಸಕ ಜಿ.ಟಿ. ದೇವೇಗೌಡರ ಕೃಪಾಕಟಾಕ್ಷದಿಂದ ಕಾಂಗ್ರೆಸ್ ಅಭ್ಯರ್ಥಿ ರಜನಿ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್‌ನಿಂದ ದೂರಾದ ಬಳಿಕ ತನ್ನ ಶಕ್ತಿ ಏನೆಂಬುದನ್ನು ಶಾಸಕ ಜಿ.ಟಿ. ದೇವೇಗೌಡರು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಪೈಪೋಟಿಯ ನಡುವೆ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಳೆದ ಬಾರಿ‌ ಕೇವಲ 300 ಮತಗಳ ಆಸುಪಾಸಿನಲ್ಲಿ ಸೋತಿದ್ದ ರಜನಿ ಅಣ್ಣಯ್ಯ ಈ ಬಾರಿಯು ಅಭ್ಯರ್ಥಿಯಾಗಿದ್ದರು.

ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯರೇ ರಜನಿ ಅಣ್ಣಯ್ಯ ನಮ್ಮ ಅಭ್ಯರ್ಥಿ, ಅವರಿಗೆ ಮತ ಹಾಕಿ ಎಂದಿದ್ದರು. ಅಲ್ಲದೆ ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದಾದ ಕಾರಣ ಈ‌ ಉಪ ಚುನಾವಣೆ ನಡೆದಿತ್ತು. ಇದೀಗ ಉಪ‌ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಈ ಮೂಲಕ ತವರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಕೂಡ ಗೆದ್ದಿದೆ.

Mysuru Municipal Corporation 36th Ward By-election: Congress candidate Rajini Annaiah wins

ಗೆದ್ದ ತನ್ವಿರ್, ಸಾರಾಗೆ ಮುಖಭಂಗ!
ಉಪ ಚುನಾವಣೆ ಘೋಷಣೆ ಆದಾಗಿನಿಂದಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಹರಸಾಹಸ ಪಟ್ಟಿದ್ದ ಸಾ.ರಾ. ಮಹೇಶ್‌ಗೆ ಫಲಿತಾಂಶ ಮುಖಭಂಗ ತಂದಿದೆ. ತೆರೆಮರೆಯಲ್ಲೇ ಮಾಸ್ಟರ್ ಪ್ಲಾನ್ ಹೆಣೆದಿದ್ದ ತನ್ವಿರ್ ತಂತ್ರ ಸಕ್ಸಸ್ ಆಗಿದೆ. ಮೈಸೂರು ಮೇಯರ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್- ಬಿಜೆಪಿಗೆ ಕಾಂಗ್ರೆಸ್ ಬೈ ಎಲೆಕ್ಷನ್‌ನಲ್ಲಿ ಸೆಡ್ಡು ಹೊಡೆದಿದೆ.

Mysuru Municipal Corporation 36th Ward By-election: Congress candidate Rajini Annaiah wins

Recommended Video

ಕತ್ತರಿ ಬದಲಿಗೆ ಹಲ್ಲಿನಿಂದ ಟೇಪ್ ಕಟ್ ಮಾಡಿದ ಪಾಕ್ ಮಂತ್ರಿಯ ಹಲ್ಲಿನ ಪವರ್ ನೋಡಿ | Oneindia Kannada

ಸತ್ಯಕ್ಕೆ ಸಂದ ಜಯ
ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜೇತ ಅಭ್ಯರ್ಥಿ ರಜನಿ ಅಣ್ಣಯ್ಯ, ಇದು ಸತ್ಯಕ್ಕೆ ಸಂದ ಜಯ. ಸತ್ಯಕ್ಕೆ ಯಾವತ್ತಿದ್ದರೂ ಗೆಲವು ಸಿಗಲಿದೆ. ಮೂರು ವರ್ಷದ ಕಾನೂನು ಹೋರಾಟ ಮಾಡಿದ್ದೆ. ಸಾಕಷ್ಟು ಹೋರಾಟದಿಂದ ನಾನು ಗೆಲುವು ಸಾಧಿಸಿದ್ದೇನೆ. ಹೀಗಾಗಿ ಎಲ್ಲಾ ಮತದಾರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಕಾಂಗ್ರೆಸ್ ಮುಖಂಡರು, ನಾಯಕರು ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ರಜಿನಿ ಅಣ್ಣಯ್ಯ ಹೇಳಿದರು.

English summary
Congress candidate Rajni Annayya wins in Mysuru Municipal Corporation 36th ward by-election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X