• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೇಕರಿಯಲ್ಲಿ ಅವಧಿ ಮುಗಿದ ತಿಂಡಿ ಮಾರಾಟ: ಪಾಲಿಕೆಯಿಂದ ಬಿತ್ತು ದಂಡ

By ಮೈಸೂರು ಪ್ರತಿನಿಧಿ
|

ಮೈಸೂರು, ಫೆಬ್ರವರಿ 12: ಅವಧಿ ಮುಗಿದ ತಿಂಡಿ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಬೇಕರಿ ಮಾಲೀಕನಿಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು 20 ಸಾವಿರ ರೂ. ದಂಡ ವಿಧಿಸಿದ್ದಾರೆ.

ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಆರೋಮ ಬೇಕರಿಗೆ ಮೈಸೂರು ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅವಧಿ ಮುಗಿದ ಪದಾರ್ಥಗಳು ಸಿಕ್ಕಿಬಿದ್ದಿವೆ. ಅವಧಿ ಮುಗಿದಿದ್ದ ಬಿಸ್ಕೆಟ್, ಫಂಗಸ್ ಬಂದಿರುವ ಬ್ರೇಡ್, ಡಬ್ಬಿಯಲ್ಲಿ ಇಟ್ಟಿದ್ದ ಸಿಹಿ ತಿನಿಸುಗಳನ್ನು ಬೇಕರಿ ಸಿಬ್ಬಂದಿ ಮಾರಾಟ ಮಾಡುತ್ತಿದ್ದರು, ಹೀಗಾಗಿ ಅಧಿಕಾರಿಗಳು ದಂಡ ಹಾಕಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ 18ನೇ ವಾರ್ಡ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜಯ

ಈ ಸಂಬಂಧ ಸಾರ್ವಜನಿಕರೊಬ್ಬರ ದೂರಿನ ಅನ್ವಯ ದಾಳಿ ನಡೆಸಿದ ಪಾಲಿಕೆ ಸಹಾಯಕ ಆಯುಕ್ತೆ ಗೀತಾ ಮತ್ತು ತಂಡ ನಿನ್ನೆ ಕಾರ್ಯಾಚರಣೆ ನಡೆಸಿ, ಬೇಕರಿ ಮಾಲೀಕನಿಗೆ 20 ಸಾವಿರ ರುಪಾಯಿ ದಂಡ ವಿಧಿಸಿ ನೋಟೀಸ್ ನೀಡಿದ್ದಾರೆ. ಜತೆಗೆ ಅವಧಿ ಮುಗಿದ ತಿಂಡಿ ಪದಾರ್ಥಗಳನ್ನು ಸ್ಥಳದಲ್ಲೇ ನಾಶ ಮಾಡಿದ್ದಾರೆ.

English summary
The bakery owner selling expired snacks was paid Rs.20 thousand Have been fined by Mysuru Muncipality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X