ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವನಾಥ್ ರಿಂದಲೇ ಮೈಸೂರು ಮೈತ್ರಿ ಅಭ್ಯರ್ಥಿಯ ಸೋಲು: ತನ್ವೀರ್ ಸೇಠ್

|
Google Oneindia Kannada News

ಮೈಸೂರು, ಜೂನ್ 5 : ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ರವರೇ ನೇರ ಹೊಣೆ ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ವಾಗ್ದಾಳಿ ನಡೆಸಿದ್ದಾರೆ.

ಹೆಚ್.ಡಿ.ದೇವೇಗೌಡರ ಸೋಲಿಗೆ ಸಿದ್ದರಾಮಯ್ಯನೇ ಕಾರಣ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ಶಾಸಕ ವಿಶ್ವನಾಥ್ ಅವರ ಹೇಳಿಕೆ ಬಗ್ಗೆ ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಮೈತ್ರಿ ಅಭ್ಯರ್ಥಿ ಸೋಲಿಗೆ ಹೆಚ್.ವಿಶ್ವನಾಥ್ ಹೊಣೆ. ಅವರು ಹುಣಸೂರು, ಕೆ.ಆರ್ ನಗರದಲ್ಲಿ ಲೀಡ್ ಕೊಡಿಸಲಿಲ್ಲ. ಹಾಗಾಗಿ ಮೈತ್ರಿ ಅಭ್ಯರ್ಥಿ ಸೋಲುಂಡಿದ್ದಾರೆ ಎಂದರು.

'ಮೋದಿ ವಿದೇಶಿ ಪ್ರವಾಸಕ್ಕೆ 2 ಸಾವಿರ ಕೋಟಿ ಖರ್ಚು ಮಾಡಿರುವುದೇ ಸಾಧನೆ'
ಸಿದ್ದರಾಮಯ್ಯ ಬಾದಮಿ ಕ್ಷೇತ್ರದ ಶಾಸಕರು, ಅವರ ಒಂದು ಓಟಿನಿಂದ ಏನು ಮಾಡಲು ಆಗಲ್ಲ. ವಿಶ್ವನಾಥ್ ರವರು ಹುಣಸೂರು, ಕೆ.ಆರ್.ನಗರದಲ್ಲಿ ಲೀಡ್ ಕೊಡಿಸಬೇಕಿತ್ತು. ಆದರೆ ಅವರು ಲೀಡ್ ಕೊಡಿಸಲಿಲ್ಲ. ಇದರಲ್ಲೇ ಗೊತ್ತಾಗುತ್ತದೆ ಮೈತ್ರಿ ಪಾಲನೆ ಮಾಡಿಲ್ಲ ಅಂತ. ದೇವೆಗೌಡರು ಹಾಗೂ ನಿಖಿಲ್ ಸೋಲಿಗೆ ಸಿದ್ದರಾಮಯ್ಯ ಕಾರಣರಲ್ಲ ಎಂದು ವಿಶ್ವನಾಥ್ ರಿಗೆ ಟಾಂಗ್ ನೀಡಿದ್ದಾರೆ.

Mysuru MP candidate of congress lost because of H Vishwanath: Siddaramaiah

ಲೋಕಸಭಾ ಚುನಾವಣೆಯಲ್ಲಿ ನಾಯಕರಾಗಲಿ, ಕಾರ್ಯಕರ್ತರಾಗಲಿ ಮೈತ್ರಿ ಪಾಲನೆ ಸರಿಯಾಗಿ ಮಾಡಲಿಲ್ಲ. ಅದಕ್ಕಾಗಿ ನಮಗೆ ಈ ಗತಿ ಬಂತು. ನಾವು ಮೈತ್ರಿ ಮಾಡಿಕೊಳ್ಳುವ ಒಂದು ವರ್ಷ ಮೊದಲೇ ಎಲ್ಲರೂ ಒಂದಾಗಬೇಕಿತ್ತು. ಮೈತ್ರಿ ನಂತರ ನಾವು ಒಂದಾಗಲೂ ಹೋದೆವು. ಅದು ಸರಿಯಾಗಿ ಆಗಲಿಲ್ಲ. ಅದಕ್ಕಾಗಿ ಮೈತ್ರಿಗೆ ಹಿನ್ನಡೆ ಉಂಟಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಂಚೆ ಮತದಾನದ ವೇಳೆ ಪ್ರತಾಪ್ ಸಿಂಹರಿಂದ ಹಣ ಹಂಚಿಕೆ:ತನ್ವೀರ್ ಸೇಠ್ ಆರೋಪ
ನಮ್ಮ ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ನಮ್ಮ ಪಕ್ಷದ ಸಿದ್ದಾಂತವನ್ನ ಒಪ್ಪಿ ಬರುವವರನ್ನು ನಾವು ಸ್ವೀಕರಿಸುತ್ತೇವೆ. ನಾವು ಅವರನ್ನು ವಲಸಿಗರೆಂದು ಪರಿಗಣಿಸುವುದಿಲ್ಲ. ಪಕ್ಷಕ್ಕೆ ಯಾರು ಮುಜುಗರ ತರುತಾರೋ ಅಂತವರಿಗೆ ಸರ್ಕಾರದಲ್ಲಿ ಮಣೆ ಹಾಕುತ್ತಾರೆ. ನಮ್ಮ‌ ಪಕ್ಷ‌ದ ರಾಮಲಿಂಗಾರೆಡ್ಡಿ ಇತರೇ ನಾಯಕರು ಹೇಳುವ ಮಾತನ್ನು ನಾವು ತಿಳಿಯಬೇಕಿದೆ ಎಂದರು.

ಕಾಂಗ್ರೆಸ್​ ಬಗ್ಗೆ ರಾಮಲಿಂಗಾ ರೆಡ್ಡಿ ಮತ್ತು ರೋಷನ್​ ಬೇಗ್​ ಸೇರಿದಂತೆ ಹಲವು ಹಿರಿಯರು ಅಸಮಾಧಾನ ಹೊರಹಾಕಿದ್ದಾರೆ. ಅವರ ಮಾತುಗಳಲ್ಲಿ ಸತ್ಯಾಂಶವಿದೆ. ಹಿರಿಯರು ಮತ್ತು ಪ್ರಾಮಾಣಿಕರಿಗೆ ಪಕ್ಷದಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಂ, ಎಚ್ ಡಿಕೆ ವಿರುದ್ಧ ಮೈಸೂರಲ್ಲಿ ಕಿಡಿ ಕಾರಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ಪರಂ, ಎಚ್ ಡಿಕೆ ವಿರುದ್ಧ ಮೈಸೂರಲ್ಲಿ ಕಿಡಿ ಕಾರಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್

ಸಚಿವ ಸ್ಥಾನದ ಕುರಿತು ಪ್ರತಿಕ್ರಿಯಿಸಿ ನಾನು ರಾಜಕಾರಣಿ, ಸನ್ಯಾಸಿ ಅಲ್ಲ. ಆಡಳಿತ ಪಕ್ಷದಲ್ಲಿದ್ದೇನೆ. ನಮ್ಮ ಸಮುದಾಯ ನನ್ನನ್ನು ಗೆಲ್ಲಿಸಿ ಕಳುಹಿಸಿದೆ. ಹಾಗಾಗಿ ಸಹಜವಾಗಿಯೇ ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದರು.

English summary
MLA Tanveer Sait Reacts on Political Development. He said that H Vishwanath is the main reason for Mysuru coalition candidate Vijay Shankar defeat. I am also a Minister aspirant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X