ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಕಳುವಾದ ವಾಹನ ಪತ್ತೆಗೆ ಬಂತು ಆಪ್

By Kiran B Hegde
|
Google Oneindia Kannada News

ಮೈಸೂರು, ಫೆ. 20: ಸ್ಮಾರ್ಟ್ ಫೋನ್ ಆವಿಷ್ಕಾರವಾದ ಮೇಲೆ ಹಲವು ಸೌಲಭ್ಯಗಳು ಅಂಗೈಗೆ ಬಂದಂತಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೂ ಸ್ಮಾರ್ಟ್ ಫೋನ್ ಮೂಲಕ ಸೌಲಭ್ಯಗಳನ್ನು ಜನರಿಗೆ ಒದಗಿಸಲಾರಂಭಿಸಿವೆ.

ಇದೀಗ ಮೈಸೂರು ಪೊಲೀಸ್ ಕೂಡ ಸ್ಮಾರ್ಟ್ ಫೋನ್ ಸೌಲಭ್ಯ ಬಳಸಿಕೊಳ್ಳಲು ಮುಂದಾಗಿದ್ದಾರೆ. ಕಳುವಾದ ವಾಹನಗಳ ಪತ್ತೆಗೆ ವಿಶೇಷ ಆಪ್ ಅಭಿವೃದ್ಧಿಪಡಿಸಿಕೊಂಡು ಕಳ್ಳರನ್ನು ಸುಲಭವಾಗಿ ಹುಡುಕುತ್ತಿದ್ದಾರೆ. ಸುಮಾರು 30 ವಾಹನ ಕಳವು ಪ್ರಕರಣಗಳಲ್ಲಿ 12ನ್ನು ಸ್ಮಾರ್ಟ್ ಫೋನ್ ಮೊಬೈಲ್ ಆಪ್ ಮೂಲಕ ಪತ್ತೆ ಹಚ್ಚಿದ್ದಾರೆ. [ನಾಟಕವಾಡಲು ಹೋಗಿ ಹೆಣವಾದ]

ಮುಂದೆ ರಾಜ್ಯಕ್ಕೂ ವಿಸ್ತರಿಸುತ್ತೆ : ಈ ಆಪ್ ಹೆಸರು 'Thefted Vehicles' ಎಂದು. ಮೂಲತಃ ಮಂಡ್ಯ ಪೊಲೀಸರು ತಮ್ಮ ಜಿಲ್ಲೆಗೋಸ್ಕರ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದರು. ಅದನ್ನು ಇನ್ನಷ್ಟು ಸುಧಾರಿಸಿ ಮೈಸೂರಿನಲ್ಲಿ ಉಪಯೋಗಿಸಲಾಗುತ್ತಿದೆ. ಇದರ ಉಪಯೋಗವನ್ನು ಸಂಪೂರ್ಣ ರಾಜ್ಯಕ್ಕೂ ವಿಸ್ತರಿಸಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಅಶೋಕ ಖರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

apps

ಈ ಆಪ್‌ಗೆ ಪೂರಕವಾಗಿ ಕಳುವಾದ ವಾಹನಗಳ ಡಾಟಾಬೇಸ್ ತಯಾರಿಸಿ, ಸೇರಿಸಲಾಗಿದೆ. ಇದೇ ಆಪ್ ಮೂಲಕ ಅಪರಿಚಿತ ವಾಹನಗಳ ಮಾಲೀಕರನ್ನು ಪತ್ತೆ ಹಚ್ಚಲು ಕೂಡ ಉಪಯೋಗಿಸಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. [ಪ್ರೊ. ಭಗವಾನ್ ವಿರುದ್ಧ ದೂರು]

ಈ ಆಪ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಎಎಸ್‌ಪಿ (ನಂಜನಗುಡ್ಡ ಉಪ-ವಿಭಾಗ) ನಿಕಮ್ ಪ್ರಕಾಶ್ ಅಮೃತ್ ವಿವರಿಸಿದ್ದಾರೆ. ಕಳುವಾದ ವಾಹನ ಕುರಿತು ದಾಖಲಾದ ಎಫ್ಐಆರ್ ಅನ್ನು ಮುಖ್ಯ ನಿಯಂತ್ರಕಕ್ಕೆ ಅಪ್‌ಲೋಡ್ ಮಾಡಿದ ಮೇಲೆ ಈ ಆಪ್ ಉಪಯೋಗಿಸುತ್ತಿರುವ ಪೊಲೀಸರಿಗೆ ಪ್ರಕರಣದ ಮಾಹಿತಿ ಲಭ್ಯವಾಗುತ್ತದೆ. ವಾಹನ ನಿರ್ಮಾಣ, ಚೆಸ್, ಇಂಜಿನ್ ಹಾಗೂ ನೋಂದಣಿ ಸಂಖ್ಯೆಗಳೂ ಸಿಗುತ್ತವೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಎಸ್‌ಪಿ, ಡಿವೈಎಸ್‌ಪಿ (ಮೈಸೂರು ದಕ್ಷಿಣ) ಮತ್ತು ನಂಜನಗುಡ್ಡ ಉಪ ವಿಭಾಗದ ಸಹಾಯಕ ಎಸ್‌ಪಿ ಬಿಟ್ಟು ಇತರ ಪೊಲೀಸರಿಗೆ ಆಪ್ ಸೌಲಭ್ಯ ನೀಡಲಾಗಿಲ್ಲ. ಕ್ರಮೇಣ ಅವರಿಗೂ ನೀಡಲಾಗುವುದು ಎಂದು ಎಸ್‌ಪಿ ಅಭಿನವ್ ಖರೆ ತಿಳಿಸಿದ್ದಾರೆ. [ಜೈಲು ಕಟ್ಟಲು ಜಾಗ ಬೇಕು]

ದಾಖಲೆ ಸರಿಯಿಲ್ಲದೆ ಇಲ್ಲದೆ ಖರೀದಿಸಬೇಡಿ : ಬೇರೊಬ್ಬರಿಂದ ವಾಹನ ಖರೀದಿಸುವಾಗ ಸರಿಯಾದ ದಾಖಲೆಗಳಿಲ್ಲದೆ ಖರೀದಿ ಮಾಡಬಾರದು. ವಾಹನ ಖರೀದಿಸುವ ಮೊದಲೇ ದಾಖಲೆಗಳನ್ನು ಸ್ಪಷ್ಟವಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಗ್ರಾಮಸ್ಥರಿಗೆ ಮಾರುತ್ತಿರುವ ಮಾಹಿತಿ ಬಂದಿದೆ. ವಾಹನಗಳನ್ನು ಗ್ರಾಮಸ್ಥರಿಗೆ ಕೊಟ್ಟು ಅವರಿಂದ ಮುಂಗಡ ಹಣ ಪಡೆದು ದಾಖಲಾತಿಗಳನ್ನು ತರುವುದಾಗಿ ಹೇಳಿ ಹೋಗಿಬಿಡುತ್ತಾರೆ ಎಂದು ಅಭಿನವ್ ಖರೆ ಎಚ್ಚರಿಕೆ ನೀಡಿದರು.

English summary
Mysuru district Police have developed a mobile application to crack vehicle theft cases. The app also came in use in identifying the owners of 12 of the total 30 two-wheelers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X