ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಮದುವೆ ಇಷ್ಟವಿಲ್ಲ" ಎಂದು ಪೊಲೀಸರಿಗೆ ಫೇಸ್ಬುಕ್ ನಲ್ಲಿ ಟ್ಯಾಗ್ ಮಾಡಿದ ಮೈಸೂರು ಬಾಲಕಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 28: ತನಗೆ ಈ ಮದುವೆ ಇಷ್ಟ ಇಲ್ಲ, ಅಪ್ಪ ಅಮ್ಮ ಬಲವಂತವಾಗಿ ಮದುವೆ ಮಾಡಿಸುತ್ತಿದ್ದಾರೆ ಎಂದು ತನ್ನ ಗೆಳತಿಯ ಫೇಸ್ ಬುಕ್ ಪುಟದಲ್ಲಿ ಬರೆದು ಬೆಂಗಳೂರು ಸಿಟಿ ಪೊಲೀಸ್ (ಬಿಸಿಪಿ) ಪೇಜ್ ಗೆ ಟ್ಯಾಗ್ ಮಾಡಿ ಕಷ್ಟ ಹೇಳಿಕೊಂಡಿದ್ದ ಬಾಲಕಿಗೆ ತಕ್ಷಣ ಸ್ಪಂದಿಸಿ ಬಾಲ್ಯ ವಿವಾಹ ನಡೆಯದಂತೆ ತಡೆದಿದ್ದಾರೆ ಪೊಲೀಸರು.

ಮೈಸೂರು ಜಿಲ್ಲೆಯ ಜಯಪುರದಲ್ಲಿನ ಅಪ್ರಾಪ್ತೆಗೆ ಮನೆಯಲ್ಲಿ ಮದುವೆ ನಿಶ್ಚಯ ಮಾಡಿದ್ದರು. ಇದೇ ಜನವರಿ 30ರಂದು ಮದುವೆ ಮಾಡಲು ನಿರ್ಧರಿಸಿ ತಯಾರಿ ಮಾಡುತ್ತಿದ್ದರು. ಈ ಬೆಳವಣಿಗೆಯಿಂದ ಬೇಸರಗೊಂಡಿದ್ದ ಬಾಲಕಿ ಫೇಸ್ ಬುಕ್ ನಲ್ಲಿ ವಿಚಾರವನ್ನು ಪೊಲೀಸರಿಗೆ ಮುಟ್ಟುವಂತೆ ಮಾಡಿದ್ದಾಳೆ.

 ಜನವರಿ 30ರಂದು ನಿಶ್ಚಯವಾಗಿದ್ದ ಮದುವೆ

ಜನವರಿ 30ರಂದು ನಿಶ್ಚಯವಾಗಿದ್ದ ಮದುವೆ

ಮೈಸೂರು ಜಿಲ್ಲೆಯ ಜಯಪುರದಲ್ಲಿ 9ನೇ ತರಗತಿ ಓದುತ್ತಿರುವ 15 ವರ್ಷದ ಬಾಲಕಿಗೆ ಮನೆಯಲ್ಲಿ ಮದುವೆ ಮಾಡಲು ಮುಂದಾಗಿದ್ದರು. ಕುಟುಂಬಸ್ಥರ ಸಂಬಂಧದಲ್ಲೇ ಮದುವೆ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಜ.30 ರಂದು ಮದುವೆ ನಿಶ್ಚಯ ಮಾಡಲು ಮಾತುಕತೆಗೆ ಎರಡು ಕುಟುಂಬಗಳು ಸಜ್ಜಾಗಿದ್ದವು ಎಂದು ತಿಳಿದುಬಂದಿದೆ.

ಚನ್ನಪಟ್ಟಣದ ಇಲ್ಲಿಗರ ದೊಡ್ಡಿಯಲ್ಲಿ 16 ತುಂಬುವಷ್ಟರಲ್ಲೇ ತುಂಬುತ್ತಿದೆ ಹೆಣ್ಣುಮಕ್ಕಳ ಮಡಿಲುಚನ್ನಪಟ್ಟಣದ ಇಲ್ಲಿಗರ ದೊಡ್ಡಿಯಲ್ಲಿ 16 ತುಂಬುವಷ್ಟರಲ್ಲೇ ತುಂಬುತ್ತಿದೆ ಹೆಣ್ಣುಮಕ್ಕಳ ಮಡಿಲು

ಆದರೆ ಆ ಬಾಲಕಿ, ತನಗೆ ಮದುವೆ ಇಷ್ಟವಿಲ್ಲವೆಂದು ಬೆಂಗಳೂರು ಸಿಟಿ ಪೊಲೀಸರಿಗೆ ಸ್ನೇಹಿತೆಯ ಫೇಸ್ ಬುಕ್ ಪೋಸ್ಟ್ ಮೂಲಕ ತನ್ನ ಕಷ್ಟ ತೋಡಿಕೊಂಡಿದ್ದಳು. ಬಾಲಕಿಯ ಪೋಸ್ಟ್ ಆಧಾರದ ಮೇಲೆ ಬೆಂಗಳೂರು ಪೊಲೀಸರು ಮೈಸೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.

 ತಂದೆ ನಂಬರ್ ಹಾಕಿದ್ದ ಬಾಲಕಿ

ತಂದೆ ನಂಬರ್ ಹಾಕಿದ್ದ ಬಾಲಕಿ

ನನಗೆ ಮದುವೆ ಇಷ್ಟ ಇಲ್ಲ. ಆದರೆ ಮನೆಯಲ್ಲಿ ಬಲವಂತವಾಗಿ ಮದುವೆ ನಿಶ್ಚಯಿಸುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಯುವಂತೆ ತನ್ನ ಗೆಳತಿ ಪೇಜ್ ನಲ್ಲಿ ಪೋಸ್ಟ್ ಮಾಡಿ ಹೇಳಿಕೊಂಡಿದ್ದ ಬಾಲಕಿ, ತನ್ನ ತಂದೆಯ ನಂಬರ್ ಅನ್ನೂ ಪೋಸ್ಟ್ ಮಾಡಿ, ಈ ವಿಷಯದಲ್ಲಿ ಅವರಿಗೆ ತಿಳಿ ಹೇಳಿ ಎಂದು ಕೇಳಿಕೊಂಡಿದ್ದಾಳೆ.

 ಬಾಲ್ಯ ವಿವಾಹ ತಡೆದ ಮೈಸೂರು ಪೊಲೀಸರು

ಬಾಲ್ಯ ವಿವಾಹ ತಡೆದ ಮೈಸೂರು ಪೊಲೀಸರು

ಅಪ್ರಾಪ್ತ ಬಾಲಕಿಗೆ ನಿಶ್ಚಯವಾಗಿದ್ದ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಮೈಸೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಲಕಿಯ ಪೋಸ್ಟ್ ಗೆ ಸ್ಪಂದಿಸಿದ ಬೆಂಗಳೂರು ಪೊಲೀಸರು ಮೈಸೂರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಿನ್ನ ಗ್ರಾಮಕ್ಕೆ ಭೇಟಿ ನೀಡಿದ ಜಯಪುರ ಠಾಣಾ ಪೊಲೀಸರು ಮನೆಯಲ್ಲಿ ಮದುವೆ ಮಾತುಕತೆ ತಡೆದಿದ್ದಾರೆ.

ಬಂಟ್ವಾಳದಲ್ಲಿ ಅಪ್ರಾಪ್ತೆಯ ನಿಶ್ಚಿತಾರ್ಥ ತಡೆದ ಅಧಿಕಾರಿಗಳುಬಂಟ್ವಾಳದಲ್ಲಿ ಅಪ್ರಾಪ್ತೆಯ ನಿಶ್ಚಿತಾರ್ಥ ತಡೆದ ಅಧಿಕಾರಿಗಳು

 ಮುಚ್ಚಳಿಕೆ ಬರೆದುಕೊಡಲು ಸೂಚಿಸಿದ ಪೊಲೀಸರು

ಮುಚ್ಚಳಿಕೆ ಬರೆದುಕೊಡಲು ಸೂಚಿಸಿದ ಪೊಲೀಸರು

ನಿನ್ನೆ ಅಪ್ರಾಪ್ತೆ ಮನೆಗೆ ತೆರಳಿದ ಜಯಪುರ ಠಾಣೆ ಇನ್ಸ್ ಪೆಕ್ಟರ್, ಆಕೆಯ ತಂದೆಗೆ ಹಾಗೂ ಕುಟುಂಬಸ್ಥರಿಗೆ ತಿಳಿ ಹೇಳಿ ಮದುವೆ ಮಾಡದಂತೆ, 18 ವರ್ಷ ತುಂಬುವವರೆಗೂ ಮದುವೆ ಪ್ರಸ್ತಾಪ ಮಾಡದಂತೆ ಸೂಚನೆ ನೀಡಿದ್ದಾರೆ. ಜತೆಗೆ ಎರಡು ದಿನದ ಒಳಗಾಗಿ ಠಾಣೆಗೆ ಬಂದು ಮುಚ್ಚಳಿಕೆ ಬರೆದು ಕೊಡಬೇಕಾಗಿಯೂ ಇನ್ಸ್ ಪೆಕ್ಟರ್ ಸೂಚನೆ ನೀಡಿದ್ದಾರೆ.

English summary
A mysuru minor girl requested police Through Facebook Post To Stop Her Marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X