ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೇಯರ್ ಚುನಾವಣೆ: ದಳಪತಿಗಳೇ ಕಿಂಗ್ ಮೇಕರ್!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 22: ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 24ಕ್ಕೆ ಚುನಾವಣೆ ನಡೆಯಲಿದ್ದು, ಪಾಲಿಕೆಯಲ್ಲಿ ಜೆಡಿಎಸ್ ಮೈತ್ರಿ ಯಾರ ಜೊತೆಗೆ ಅನ್ನುವ ತೀರ್ಮಾನ ಇಂದು ಪ್ರಕಟವಾಗಲಿದೆ.

ಜೆಡಿಎಸ್‌ ನಾಯಕರ ದೊಡ್ಡ ಪಾಳಯವೇ ಮೈಸೂರಲ್ಲಿ ಠಿಕಾಣಿ ಹೂಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಖಾಸಗಿ ರೆಸಾರ್ಟ್‌ನಲ್ಲಿ ಜೆಡಿಎಸ್ ಪಾಲಿಕೆ ಸದಸ್ಯರ ಸಭೆ ನಡೆಯಲಿದೆ. ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಈ ಸಭೆಯನ್ನು ನಡೆಸಲಿದ್ದಾರೆ.

ಮೈಸೂರು ಮೇಯರ್ ಚುನಾವಣೆ; ಕಾಂಗ್ರೆಸ್, ಜೆಡಿಎಸ್ ಮೈತ್ರಿ? ಮೈಸೂರು ಮೇಯರ್ ಚುನಾವಣೆ; ಕಾಂಗ್ರೆಸ್, ಜೆಡಿಎಸ್ ಮೈತ್ರಿ?

ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ವಿವರವಾದ ಚರ್ಚೆಗಳು ನಡೆಯಲಿವೆ. ಸ್ಥಳೀಯ ನಾಯಕರ ಜೊತೆಗಿನ ಸಭೆಯಲ್ಲಿ ಯಾರಿಗೆ ಮೇಯರ್ ಸ್ಥಾನ ನೀಡಬೇಕು? ಎನ್ನುವುದು ಖಚಿತವಾಗಲಿದೆ.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್

Mysuru Mayor Election Deve Gowda To Chair Meeting

ಜೆಡಿಎಸ್ ಸಭೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಕುತೂಹಲದಿಂದ ಕಾದು ನೋಡುತ್ತಿದೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ದೋಸ್ತಿಗಾಗಿ ತಂತ್ರಗಳನ್ನು ಹಣೆಯಲಾಗುತ್ತಿದೆ.

ಮೈಸೂರು ಮೇಯರ್ ಚುನಾವಣೆ: ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ? ಮೈಸೂರು ಮೇಯರ್ ಚುನಾವಣೆ: ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ?

ಮೈಸೂರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಆಗಮಿಸಿದ್ದಾರೆ. ಸಂಜೆ ವೇಳೆಗೆ ಪಾಲಿಕೆ ರಾಜಕೀಯಕ್ಕೆ ಸೋಮಶೇಖರ್ ಪ್ರವೇಶ ಮಾಡಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ತರುವ ಜವಾಬ್ದಾರಿ ಹೊತ್ತಿರುವ ಉಸ್ತುವಾರಿ ಸಚಿವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ರಣತಂತ್ರ ರೂಪಿಸುತ್ತಿದ್ದಾರೆ.

ಕಮಲಪಾಳಯವನ್ನು ಅಧಿಕಾರದಿಂದ ದೂರ ಇಡಲು ಪಣತೊಟ್ಟಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಶಾಸಕ ಸಾ. ರಾ. ಮಹೇಶ್ ಜೊತೆ ಇಂದು ಎಲ್ಲವನ್ನೂ ಅಂತಿಮಗೊಳಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಜೆಡಿಎಸ್ ಪಕ್ಷದ ನಡೆ ಕುತೂಹಲಕ್ಕೆ ಕಾರಣವಾಗಿದೆ.

English summary
H. D. Deve Gowda and H. D. Kumaraswamy to chair meeting of JD(S) members of Mysuru city corporation on the issue of mayor and deputy mayor election. Election will be held on February 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X