ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: MSIL ಮದ್ಯದಂಗಡಿ ತೆರೆಯಲು ಸ್ಥಳೀಯರ ವಿರೋಧ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 16: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 43ನೇ ವಾರ್ಡ್ ನ ಮುಖ್ಯ ರಸ್ತೆಯಲ್ಲಿ ಎಂಎಸ್ಐಎಲ್ ಮದ್ಯದಂಗಡಿಯನ್ನು ತೆರೆಯಲು ಸ್ಥಳ ವೀಕ್ಷಣೆಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

Recommended Video

Plasma ದಾನ ಮಾಡಿದರೆ 5000 ಕೊಡ್ತೀವಿ - Karnataka Government | Oneindia Kannada

ಅಬಕಾರಿ ವಲಯಾಧಿಕಾರಿ ಲತಾ ಅವರು ಸ್ಥಳ ಪರಿಶೀಲನೆಗೆ ಬಂದ ವೇಳೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸದಸ್ಯ ಗೋಪಿ ಹಾಗೂ ಸ್ಥಳೀಯ ನಿವಾಸಿಗಳು ಈಗಾಗಲೇ ಇಲ್ಲಿ ಮದ್ಯದಂಗಡಿಗಳಿವೆ. ಮತ್ತೆ ಎಂಎಸ್ಐಎಲ್ ಮದ್ಯದಂಗಡಿಯನ್ನು ತೆರೆಯುವ ಅವಶ್ಯಕತೆಯಿಲ್ಲ ಎಂದು ಆಗ್ರಹಿಸಿದರು.

ಕೋವಿಡ್-19 ಹರಡುತ್ತಿರುವ ಸಂದರ್ಭದಲ್ಲಿ ಎಂಎಸ್ಐಎಲ್ ಮದ್ಯದಂಗಡಿಯನ್ನು ತೆರೆಯಲು ಅನುಮತಿ ನೀಡಿ ಅವಾಂತರ ಸೃಷ್ಟಿಸಬೇಡಿ. ಇಲ್ಲಿ ಮದ್ಯದಂಗಡಿಯನ್ನು ತೆರೆದರೆ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

Mysuru: Locals Opposition To Open MSIL Liquor Shop

ಬಳಿಕ ಅಲ್ಲಿಯೇ ಇದ್ದ ಕಟ್ಟಡದ ಮಾಲೀಕರಿಗೆ ಇಲ್ಲಿ ಮದ್ಯದಂಗಡಿ ತೆರೆಯಲು ನಮ್ಮ ವಿರೋಧವಿದೆ. ಬೇರೆ ಯಾವುದಾದರೂ ಮಳಿಗೆ ತೆರೆಯಲು ಬಾಡಿಗೆಗೆ ನೀಡಿ, ಆದರೆ ಇಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಬೇಡಿ ಎಂದರು. ವಲಯಾಧಿಕಾರಿ ಲತಾ ಅವರು ಸ್ಥಳೀಯರ ಹೇಳಿಕೆಗಳನ್ನು ಪಡೆದು ಅಲ್ಲಿಂದ ನಿರ್ಗಮಿಸಿದರು.

English summary
Villagers obstructed the officers who came to the site to open the MSIL Liquor Store on 43rd Ward Main Road in Mysuru Mahanagara Palike Area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X