ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸಂಚರಿಸುವವರಿಗೆ ಗೂಗಲ್ ನಲ್ಲಿ ಬಸ್ ಮಾಹಿತಿ

|
Google Oneindia Kannada News

ಮೈಸೂರು, ಜುಲೈ 18: ಸಾಂಸ್ಕೃತಿಕ ನಗರಿ ಹಾಗೂ ಪ್ರವಾಸಿಗರ ಸ್ವರ್ಗ ಎಂದೇ ಹೆಸರಾದ ಮೈಸೂರಿನಲ್ಲಿ ಸಂಚರಿಸುವವರಿಗೆ ಹೊಸ ಸುದ್ದಿಯೊಂದು ಇಲ್ಲಿದೆ. ಇನ್ನು ಮುಂದೆ ತಾವು ಪ್ರಯಾಣಿಸುವ ಬಸ್ ಎಷ್ಟು ಹೊತ್ತಿಗೆ, ಎಲ್ಲಿಗೆ ತಲುಪಲಿದೆ? ಎಷ್ಟು ಗಂಟೆಗೆ ಬರಲಿದೆ ಎಂಬ ನಿಖರವಾದ ಮಾಹಿತಿ ಅಂಗೈಯಲ್ಲೇ ಸಿಗಲಿದೆ.

ಹೌದು, ಗೂಗಲ್ ಇಂತಹ ಸೇವೆಯನ್ನು ನೀಡಲು ಮುಂದಾಗುತ್ತಿದ್ದು, ಸ್ಮಾರ್ಟ್ ಫೋನ್ ಗಳಲ್ಲಿ ಗೂಗಲ್ ಮ್ಯಾಪ್ ಅನ್ನು ಆನ್ ಮಾಡಿಕೊಂಡರೆ ಸಾಕು, ಕಾಯುತ್ತಿರುವ ಸಿಟಿ ಬಸ್ ಯಾವ ನಿಲ್ದಾಣಕ್ಕೆ, ಯಾವ ಸಮಯಕ್ಕೆ ಬಂದು ಸೇರಲಿದೆ ಎಂಬುದನ್ನು ತಿಳಿಸುತ್ತದೆ.

 ಸರ್ಕಾರಿ ಬಸ್ ದರ ಏರಿಕೆ : ಹೊಸ ಪ್ರಸ್ತಾವನೆ ಸಲ್ಲಿಸಲು ಸಿಎಂ ಸೂಚನೆ ಸರ್ಕಾರಿ ಬಸ್ ದರ ಏರಿಕೆ : ಹೊಸ ಪ್ರಸ್ತಾವನೆ ಸಲ್ಲಿಸಲು ಸಿಎಂ ಸೂಚನೆ

ಕೆಎಸ್ ಆರ್ ಟಿಸಿ ಈ ವ್ಯವಸ್ಥೆಯನ್ನು ನಗರದ ನಾಗರಿಕರಿಗೆ ಈಗಾಗಲೇ ಕಲ್ಪಿಸಿಕೊಟ್ಟಿದೆ. ಈ ಮೂಲಕ ತಮ್ಮ ಪ್ರಯಾಣವನ್ನು ಸುಲಭವಾಗಿ ಪ್ಲಾನ್ ಮಾಡಿಕೊಳ್ಳಬಹುದಾಗಿದೆ. ಸಾರ್ವಜನಿಕರು ಬಸ್ ಆಗಮನದ ಮಾಹಿತಿಯನ್ನು ಪಡೆಯುವ ಮೂಲಕ ಪ್ರಯಾಣದ ಸಮಯವನ್ನು ನಿಗದಿ ಮಾಡಿಕೊಳ್ಳಬಹುದಾಗಿದೆ.

Mysuru local buses information in Google

ಉದಾಹರಣೆಗೆ, ಬಲ್ಲಾಳ್ ವೃತ್ತದಿಂದ, ಆಂದೋಲನ ವೃತ್ತದವರೆಗೆ ಪ್ರಯಾಣ ಮಾಡಬೇಕಾದರೆ ಗೂಗಲ್ ಮ್ಯಾಪ್ ನಲ್ಲಿ ಎರಡೂ ಸ್ಥಳಗಳನ್ನು ಟೈಪ್ ಮಾಡಿ, ಬಸ್ ಬರುವ ನಿಖರವಾದ ಸಮಯವನ್ನು ತಿಳಿದುಕೊಳ್ಳಬಹುದು.

ಕೆಎಸ್ಆರ್‌ಟಿಸಿ ನೇಮಕಾತಿ : ಚಾಲಕ, ನಿರ್ವಾಹಕ ಸೇರಿ 1500 ಹುದ್ದೆ ಭರ್ತಿಕೆಎಸ್ಆರ್‌ಟಿಸಿ ನೇಮಕಾತಿ : ಚಾಲಕ, ನಿರ್ವಾಹಕ ಸೇರಿ 1500 ಹುದ್ದೆ ಭರ್ತಿ

ಈ ವಿಚಾರಕ್ಕೆ ಕೆಎಸ್ಆರ್ ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಪ್ರತಿಕ್ರಿಯಿಸಿ, "ಗೂಗಲ್ ಮ್ಯಾಪ್ ನೊಂದಿಗೆ ರಿಯಲ್ ಟೈಂ ಟ್ರಾನ್ಸಿಟ್ ಇನ್ಫರ್ಮೇಷನ್ ಅನ್ನು ಹಂಚಿಕೊಳ್ಳುವ ಮೂಲಕ ಪ್ರಯಾಣಿಕರಿಗೆ ಉನ್ನತ ಮಟ್ಟದ ಪ್ರಯಾಣದ ಅನುಭವ ನೀಡಲು ಕೆಎಸ್ ಆರ್ ಟಿಸಿ ಬಯಸಿದೆ. ಈ ವ್ಯವಸ್ಥೆಯಿಂದ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅನುಕೂಲಕ್ಕೆ ತಕ್ಕಂತೆ ಯೋಜಿಸಿಕೊಳ್ಳಬಹುದಾಗಿದೆ" ಎಂದರು.

English summary
Here is some new news for those travel in Mysuru. how long and where will they travel to reach? and some other Periodic information will be in your palm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X