ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗುವಿಗೆ ಚಿಕಿತ್ಸೆ ನೀಡದ ಕೆ.ಆರ್.ಆಸ್ಪತ್ರೆ ವೈದ್ಯರ ವಿಡಿಯೋ ವೈರಲ್

|
Google Oneindia Kannada News

Recommended Video

ಮಗುವಿಗೆ ಚಿಕಿತ್ಸೆ ನೀಡದ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಕುಟುಂಬಸ್ಥರು | Oneindia Kannada

ಮೈಸೂರು, ಜುಲೈ 1: ಸುಟ್ಟ ಗಾಯದಿಂದ ಆಸ್ಪತ್ರೆಗೆ ಬಂದಿದ್ದ ಮಗುವಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ ವೈದ್ಯರನ್ನು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನಡೆದಿದೆ.

ನಿನ್ನೆ ಭಾನುವಾರ ಸುಟ್ಟ ಗಾಯವಾದ ಕಾರಣ ಮಗುವನ್ನು ತಾಯಿಯೊಬ್ಬರು ಆಸ್ಪತ್ರೆಗೆ ಕರೆತಂದಿದ್ದಾರೆ. ಇದೇ ಸಂದರ್ಭ, ವೈದ್ಯರು ಚಿಕಿತ್ಸೆ ಕೊಡಲು ನಿರಾಕರಿಸಿದ್ದಾರೆ. 2 ಗಂಟೆಗಳ ಕಾಲ ರೋಗಿಗೆ ಯಾವುದೇ ಚಿಕಿತ್ಸೆ ನೀಡದೆ ಕೆ.ಆರ್.ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದುದನ್ನು ಮಗುವಿನ ಸಂಬಂಧಿಕರು ತಕ್ಷಣವೇ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಬಿಟ್ಟ ಮಗುವಿನ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಮೈಸೂರಿನ ದೊಡ್ಡಾಸ್ಪತ್ರೆಯಲ್ಲಿ ಕಾಡುತ್ತಿದೆ ಸಿಬ್ಬಂದಿ ಕೊರತೆ ಮೈಸೂರಿನ ದೊಡ್ಡಾಸ್ಪತ್ರೆಯಲ್ಲಿ ಕಾಡುತ್ತಿದೆ ಸಿಬ್ಬಂದಿ ಕೊರತೆ

ಈ ವಿಡಿಯೋದಲ್ಲಿ ಮಗುವನ್ನು ತಾಯಿ ಎತ್ತುಕೊಂಡು ಚಿಕಿತ್ಸೆ ಕೊಡದ ವೈದ್ಯರ ನಡೆಗೆ ಪರದಾಡುತ್ತಿದ್ದಾರೆ. ವೈದ್ಯರು, ನಾವು ಚಿಕಿತ್ಸೆ ನೀಡುವುದಿಲ್ಲ, ಹೊರಗಡೆ ಹೋಗಿ ಎಂದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆಗ, ಯಾಕೆ ನಾವು ಹೋಗಬೇಕು? ಚಿಕಿತ್ಸೆ ನೀಡಲು ಆಗುವುದಿಲ್ಲವೆಂದು ಬರೆದು ಕೊಡಿ ಎಂದು ಮಗುವಿನ ಸಂಬಂಧಿಕರು ವೈದ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಯನ್ನು ಕರೆಸಿ ಅವರನ್ನು ಹೊರಗೆ ಕಳುಹಿಸುವಂತೆ ವೈದ್ಯರು ಹೇಳಿದ್ದಾರೆ.

Mysuru KR Hospital Doctor refused to treat boy

ವೈದ್ಯರ ನಿರ್ಲಕ್ಷ್ಯದ ಬಗ್ಗೆ ಸೆರೆ ಹಿಡಿದಿರುವ ಈ ವಿಡಿಯೋ‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಗ್ಯ ಸಚಿವರು ಕೆ.ಆರ್.ಆಸ್ಪತ್ರೆಯತ್ತ ಗಮನ ನೀಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

English summary
Mysuru KR Hospital Doctors refused to treat a boy. A boys relative recorded the video in hospital and uploaded it to social media. This video gone viral in Social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X