ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು–ಕೊಡಗು ಕ್ಷೇತ್ರ:ಮಹಿಳೆಯರಿಗೆ ಟಿಕೆಟ್ ನೀಡಲು ಹಿಂದೇಟೇಕೆ?

|
Google Oneindia Kannada News

ಮೈಸೂರು, ಮಾರ್ಚ್ 28:ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈಗ ಮಹಿಳಾ ಮತದಾರರದ್ದೇ ಪ್ರಾಬಲ್ಯ. ಆದರೆ, ಇದುವರೆಗೆ ಈ ಕ್ಷೇತ್ರ ಕಂಡಿದ್ದು ಏಕೈಕ ಸಂಸದೆ ಎನ್ನುವುದು ಮಾತ್ರ ಬೇಸರ.

1951ರಿಂದ 2014ರವರೆಗೆ ನಡೆದ 16 ಚುನಾವಣೆಗಳಲ್ಲಿ ಮೈಸೂರು ಕ್ಷೇತ್ರದಿಂದ ಒಬ್ಬ ಮಹಿಳೆ ಮಾತ್ರ ಲೋಕಸಭೆಗೆ ಆಯ್ಕೆಯಾಗಿದ್ದಾರೆ.ಸ್ಪರ್ಧಿಸಿದ ಮಹಿಳೆಯರ ಸಂಖ್ಯೆಯೂ ಕಡಿಮೆ. ಕಾಂಗ್ರೆಸ್‌ ಹೊರತುಪಡಿಸಿ ಪ್ರಮುಖ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಿಲ್ಲ.

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರದ್ದೇ ಮೇಲುಗೈಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರದ್ದೇ ಮೇಲುಗೈ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪುತ್ರಿ ಚಂದ್ರಪ್ರಭಾ ಅರಸು 1991ರಲ್ಲಿ ಸ್ಪರ್ಧಿಸಿ ಗೆದ್ದಿದ್ದಲ್ಲದೆ ಬಿಜೆಪಿ ಅಭ್ಯರ್ಥಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ಆಘಾತ ನೀಡಿದ್ದರು. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಂದ್ರಪ್ರಭಾ 2,25,881 ವೋಟು ಪಡೆದಿದ್ದರು. ಒಡೆಯರ್‌ 2,08,991 ಮತ ಗಳಿಸಿದ್ದರು.

ಚಂದ್ರಪ್ರಭಾ 1983ರಲ್ಲಿ ಮೊದಲ ಬಾರಿ ಹುಣಸೂರು ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ರೇಷ್ಮೆ ಸಚಿವೆಯಾಗಿದ್ದರು.ಬಳಿಕ ಅವರು ಅಜೀಜ್ ಸೇಠ್ ಜೊತೆ ಕಾಂಗ್ರೆಸ್‌ ಸೇರಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

1985ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಜನತಾ ಪಕ್ಷದ ಎಚ್‌.ಎಲ್‌.ತಿಮ್ಮೇಗೌಡ ಎದುರು ಪರಾಭವಗೊಂಡರು. 1989ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾದರು. ಮುಂದೆ ಓದಿ...

 ಅಂದು ಸೋಲು ಕಂಡಿದ್ದ ಚಂದ್ರಪ್ರಭಾ

ಅಂದು ಸೋಲು ಕಂಡಿದ್ದ ಚಂದ್ರಪ್ರಭಾ

1991ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿತ್ತು. ಏಕೆಂದರೆ ಕಾಂಗ್ರೆಸ್‌ ಬಿ ಫಾರಂ ಪಡೆದು ಹಿಂದಿನ ಎರಡು ಚುನಾವಣೆಗಳಲ್ಲಿ ಗೆದ್ದಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಆಗ ಬಿಜೆಪಿ ಸೇರಿದರು. ಅದೇ ಪಕ್ಷದಿಂದ ಕಣಕ್ಕಿಳಿದರು. ಹೀಗಾಗಿ, ಆಗಿನ ಶಾಸಕಿ ಚಂದ್ರಪ್ರಭಾ ಅವರನ್ನು ಕಣಕ್ಕಿಳಿಸಲಾಯಿತು. ಅವರ ಲೋಕಸಭಾ ಅವಧಿ ಪೂರ್ಣಗೊಳ್ಳುವಷ್ಟರಲ್ಲಿ ಅಂದರೆ 1994ರಲ್ಲಿ ಮತ್ತೆ ವಿಧಾನಸಭಾ ಚುನಾವಣೆಗೆ ನಿಂತು ಹುಣಸೂರು ಕ್ಷೇತ್ರದಿಂದ ಪರಾಭವಗೊಂಡರು. 1999ರಲ್ಲೂ ಸೋಲು ಕಂಡರು. ‌

 ಅಭ್ಯರ್ಥಿಯಾಗಿ ಮಾತ್ರ ಬೇಡ

ಅಭ್ಯರ್ಥಿಯಾಗಿ ಮಾತ್ರ ಬೇಡ

2009ರಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಡಾ.ಇ.ಕೇಶವಮ್ಮ, ಲೀಲಾವತಿ, 2014ರಲ್ಲಿ ಎಂ.ವಿ.ಪದ್ಮಮ್ಮ, ರತಿ ಪೂವಯ್ಯ ಕಣಕ್ಕಿಳಿದು ಸೋಲು ಕಂಡಿದ್ದರು. ಇನ್ನು ಕೆಲವರು ಪಕ್ಷೇತರರಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ. ಅಂಕಿಅಂಶಗಳ ಮೇಲೆ ಕಣ್ಣಾಡಿಸಿದರೆ ಟಿಕೆಟ್ ಹಂಚಿಕೆಯಲ್ಲೂ ಪುರುಷರಿಗೇ ಹೆಚ್ಚಿನ ಆದ್ಯತೆ ನೀಡಿರುವುದು ಗೊತ್ತಾಗುತ್ತದೆ. ಮತ ಹಾಕಲು ಮಹಿಳೆಯರು ಬೇಕು. ಆದರೆ, ಅಭ್ಯರ್ಥಿಯಾಗಿ ಮಾತ್ರ ಬೇಡ ಎಂಬ ದೂರು ಈ ಬಾರಿಯೂ ಕೇಳಿಬರುತ್ತಿದೆ.

 ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಬಳಿ ಇರುವ ಒಟ್ಟು ಆಸ್ತಿ ಮೌಲ್ಯವೆಷ್ಟು? ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಬಳಿ ಇರುವ ಒಟ್ಟು ಆಸ್ತಿ ಮೌಲ್ಯವೆಷ್ಟು?

 ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ

ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಮೈಸೂರು ಜಿಲ್ಲೆಯ ಆರು ಹಾಗೂ ಕೊಡಗು ಜಿಲ್ಲೆಯ ಎರಡು ಕ್ಷೇತ್ರ ಸೇರಿ ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ‌9.29 ಲಕ್ಷ ಪುರುಷರು ಹಾಗೂ 9.30 ಲಕ್ಷ ಮಹಿಳೆಯರು ಇದ್ದಾರೆ. ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಗಳಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

 ಈ ಬಾರಿಯೂ ಪ್ರಾತಿನಿಧ್ಯ ಕಲ್ಪಿಸಿಲ್ಲ

ಈ ಬಾರಿಯೂ ಪ್ರಾತಿನಿಧ್ಯ ಕಲ್ಪಿಸಿಲ್ಲ

ಈ ಬಾರಿಯೂ ಪ್ರಮುಖ ಪಕ್ಷಗಳು ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವಂತೆ ಕಾಣುತ್ತಿಲ್ಲ. 2014ರ ಚುನಾವಣೆಯಲ್ಲಿ 17.21 ಲಕ್ಷ ಮತದಾರರು ಇದ್ದರು. ಶೇ 50.37ರಷ್ಟು ಪುರುಷರು ಹಾಗೂ ಶೇ 49.62 ಮಹಿಳೆಯರಿದ್ದರು. ಈ ಪೈಕಿ 11.60 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

 ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: 30 ಅಭ್ಯರ್ಥಿಗಳು ಕಣದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: 30 ಅಭ್ಯರ್ಥಿಗಳು ಕಣದಲ್ಲಿ

English summary
Mysuru-Kodagu Lok Sabha constituency is now dominated by women's electorate. But in this constituency women candidates are not going to contest in Election. Here's a detailed description of this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X