ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇರುನಟರ ಹೆಸರಲ್ಲಿ ಪ್ರಾಣಿ ದತ್ತು ಸ್ವೀಕಾರದೊಂದಿಗೆ ತೆರೆದ ಮೈಸೂರು ಝೂ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 08: ಮೂರು ತಿಂಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ಇಂದು ಸಾರ್ವಜನಿಕರಿಗೆ ಮುಕ್ತವಾಗಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಮೇರು ನಟರಾದ ವರನಟ ಡಾ.ರಾಜ್ ಕುಮಾರ್, ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಎರಡು ಆನೆ ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯುವ ಮೂಲಕ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಧ್ರುವತಾರೆಯರಿಗೆ ಗೌರವ ಸೂಚಿಸಿ ಮೃಗಾಲಯಕ್ಕೆ ಚಾಲನೆ ನೀಡಿದರು.

Recommended Video

ಚಿರು ಜಾತಕದಲ್ಲಿದ್ದ ದೋಷದ ಬಗ್ಗೆ ನಟ ಜಗ್ಗೇಶ್ ಹೇಳಿದ್ದೇನು? | Chiranjeevi Sarja's Horoscope

ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ ಲಾಕ್ ಡೌನ್ ಆಗಿದ್ದರಿಂದ ಮೃಗಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಇಲ್ಲದೆ ಮೃಗಾಲಯಕ್ಕೆ ಆದಾಯ ಇರಲಿಲ್ಲ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯನ್ವಯ ಇಂದಿನಿಂದ ಮೃಗಾಲಯವನ್ನು ಪುನರಾರಂಭಿಸಲಾಗಿದೆ. ಸಚಿವ ಎಸ್ ಟಿ ಸೋಮಶೇಖರ್ ಅವರೊಂದಿಗೆ ಸಂಸದೆ ಸುಮಲತಾ, ಶಾಸಕರಾದ ಜಿಟಿಡಿ, ರಾಮದಾಸ್, ನಾಗೇಂದ್ರ, ಹರ್ಷವರ್ಧನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 ಜೂನ್ 8ಕ್ಕೆ ತೆರೆಯಲು ಸಜ್ಜಾಗುತ್ತಿದೆ ಮೈಸೂರು ಮೃಗಾಲಯ ಜೂನ್ 8ಕ್ಕೆ ತೆರೆಯಲು ಸಜ್ಜಾಗುತ್ತಿದೆ ಮೈಸೂರು ಮೃಗಾಲಯ

 ಎರಡು ಆನೆ, ಒಂದು ಸಿಂಹ ದತ್ತು ಸ್ವೀಕಾರ

ಎರಡು ಆನೆ, ಒಂದು ಸಿಂಹ ದತ್ತು ಸ್ವೀಕಾರ

ವರನಟ ಡಾ. ರಾಜ್ ಕುಮಾರ್ ಅವರ ಹೆಸರಿನಲ್ಲಿ ಆನೆ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹೆಸರಿನಲ್ಲಿ ಆಫ್ರಿಕನ್ ಆನೆ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಒಂದು ಸಿಂಹವನ್ನು ಸಹಕಾರ ಸಚಿವರು ದತ್ತು ಪಡೆದಿದ್ದಾರೆ.

ಕೊರೊನಾ ಹರಡದಂತೆ ಝೂನಲ್ಲಿ ಮುಂಜಾಗೃತಾ ಕ್ರಮಗಳ ಪಾಲನೆ ಮಾಡಲಾಗಿದೆ. ಬೆಳಗ್ಗೆ 8.30 ರಿಂದ ಸಂಜೆ 5 ಗಂಟಯವರೆಗೆ ಝೂ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಮೃಗಾಲಯದ ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಇದೆ. 1 ಗಂಟೆ ಅವಧಿಯಲ್ಲಿ 1 ಸಾವಿರ ಮಂದಿ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮೊದಲ ಮೃಗಾಲಯಕ್ಕೆ ಬಂದವರಿಗೆ ಗುಲಾಬಿ ಹೂ ನೀಡಿ ಸ್ವಾಗತ ಕೋರಲಾಯಿತು.
 ಸಚಿವ ಎಸ್ ಟಿ ಎಸ್ ಹೆಸರಲ್ಲಿ ಫಲಕ

ಸಚಿವ ಎಸ್ ಟಿ ಎಸ್ ಹೆಸರಲ್ಲಿ ಫಲಕ

ಅಮೆರಿಕದ ಅಕ್ಕ ಸಂಸ್ಥೆಯಿಂದ ಮೃಗಾಲಯದ ನಿರ್ವಹಣೆಗೆಂದು 40 ಲಕ್ಷ ರೂಪಾಯಿ ಚೆಕ್ ಅನ್ನು ಇದೇ ವೇಳೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಅಕ್ಕ ಸಂಘಟನೆಯ ಮಾಜಿ ಅಧ್ಯಕ್ಷರಾದ ಶಿವಮೂರ್ತಿ ಕಿಲಾರ ಅವರು ಮೃಗಾಲಯಕ್ಕೆ ಹಸ್ತಾಂತರಿಸಿದರು. ಸಂಕಷ್ಟದ ಕಾಲದಲ್ಲಿ ಮೃಗಾಲಯಕ್ಕೆ 3.23 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿಕೊಟ್ಟಂತಹ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಗೌರವಾರ್ಥವಾಗಿ ಅವರ ಹೆಸರಿನಲ್ಲಿ ಮೃಗಾಲಯದ ಮುಖ್ಯ ಪ್ರವೇಶದ್ವಾರದ ಎದುರು ಫಲಕವೊಂದನ್ನು ನಿರ್ಮಾಣ ಮಾಡಲಾಗಿದೆ. ಅದನ್ನು ಮೃಗಾಲಯದ ಪುನರಾರಂಭಗೊಳಿಸುವ ಸಂದರ್ಭದಲ್ಲಿ ಅನಾವರಣ ಮಾಡಲಾಯಿತು.

"ಅಂಬರೀಷ್ ಅವರಿಗೆ ಮೃಗಾಲಯದ ಮೇಲೆ ತುಂಬಾ ಪ್ರೀತಿ"

ಮೃಗಾಲಯದಲ್ಲಿ ಈಚೆಗೆ ಜನಿಸಿದ ಜಿರಾಫೆ ಮರಿಗಳಿಗೆ ಇದೇ ವೇಳೆ ಆದ್ಯಯಧುವೀರ ಹಾಗೂ ಬಾಲಾಜಿ ಎಂದು ನಾಮಕರಣ ಮಾಡಲಾಯಿತು. ನಾಮಫಲಕವನ್ನು ಸಚಿವರಾದ ಸೋಮಶೇಖರ್ ಹಾಗೂ ಸಂಸದರಾದ ಸುಮಲತಾ ಅಂಬರೀಷ್ ಪ್ರದರ್ಶನ ಮಾಡಿದರು. ಇದೇ ಸಂದರ್ಭ ಅಪರೂಪದ ತಳಿಯಾಗಿರುವ ಬಿಳಿ ಹುಲಿ ಸಂಚರಿಸಲು ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾಗಿರುವ ಎನ್ಕ್ಲೂಶರ್ ಅನ್ನು ಸಚಿವರು ಹಸಿರು ಬಾವುಟ ತೋರ್ಪಡಿಸುವ ಮೂಲಕ ಅನಾವರಣಗೊಳಿಸಿದರು. ಇಲ್ಲಿ ಪ್ರಸ್ತುತ ಸಾರಾ ಎಂಬ ಹೆಣ್ಣು ಬಿಳಿ ಹುಲಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶಾಸಕರಾದ ಎಸ್.ಎ. ರಾಮದಾಸ್, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಉಪಸ್ಥಿತರಿದ್ದು, "ಮೈಸೂರು ಮೃಗಾಲಯ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು" ಎಂದು ಮನವಿ ಮಾಡಿದರು. ಸಂಸದರಾದ ಸುಮಲತಾ ಅಂಬರೀಷ್ ಮಾತನಾಡಿ, ಮೈಸೂರು ಮೃಗಾಲಯ ಬಗ್ಗೆ ಅಂಬರೀಷ್ ಅವರಿಗೆ ತುಂಬಾ ಪ್ರೀತಿ ಇದೆ. ಅವರು ಇಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದು, ಮೃಗಾಲಯ ಸಿನಿಮಾದ ಸಂದರ್ಭದಲ್ಲೂ ಇಲ್ಲಿ ನಂಟು ಹೊಂದಿದ್ದಾರೆ. ಅವರಿಗೆ ಇಲ್ಲಿನ ಪ್ರಾಣಿಗಳು ಸ್ನೇಹಿತರಂತೆ ಇದ್ದವು" ಎಂದು ಸ್ಮರಿಸಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ಹರ್ಷವರ್ಧನ್, ಡಿಸಿಪಿ ಪ್ರಕಾಶ್ ಗೌಡ, ಮೇಯರ್ ತಸ್ನಿಂ, ಜಿಪಂ ಸಿಇಒ ಪ್ರಶಾಂತ್ ಕುಮಾರ್, ಅಕ್ಕ ಸಂಘಟನೆಯ ಮಾಜಿ ಅಧ್ಯಕ್ಷರಾದ ಶಿವಮೂರ್ತಿ ಕಿಲಾರ್ ಸೇರಿ ಅಧಿಕಾರಿಗಳು ಇದ್ದರು.

 ಮೈಸೂರು ಮೃಗಾಲಯಕ್ಕೆ ಟಿಕೆಟ್ ಪಡೆದು ಚಾಲನೆ

ಮೈಸೂರು ಮೃಗಾಲಯಕ್ಕೆ ಟಿಕೆಟ್ ಪಡೆದು ಚಾಲನೆ

11 ವಾರದ ಬಳಿಕ ಮೈಸೂರು ಮೃಗಾಲಯ ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾವೇ ನಮ್ಮ ಜೊತೆಗೆ ಬಂದ 50 ಮಂದಿಗೆ ಟಿಕೆಟ್ ಪಡೆಯುವ ಮೂಲಕ ಪ್ರವೇಶಕ್ಕೆ ಚಾಲನೆ ನೀಡಿದ್ದೇವೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು. ಪ್ರತಿ ದಿನಕ್ಕೆ 10 ಸಾವಿರ ಪ್ರವಾಸಿಗರು ಭೇಟಿ ಕೊಡಲು ಸದ್ಯದ ಪರಿಸ್ಥಿತಿಯಲ್ಲಿ ಆಗಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ವೀಕ್ಷಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುತ್ತಿರುವುದು ಅದರ ಉಳಿಕೆ ಉದ್ದೇಶದಿಂದಲೇ ವಿನಃ ಬೇರೆ ಯಾವುದೇ ಕಾರಣವೂ ಇಲ್ಲಿಲ್ಲ. ಸಕ್ಕರೆ ಕಾರ್ಖಾನೆಗಳು ಉಳಿದು, ಬೆಳೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.

English summary
Mysuru Jayachamarajendra Zoo reopened today after 3 months. District incharge minister ST Somashekhar has inauguarated zoo today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X