ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಒಡೆಯರ್ ಉತ್ತರಾಧಿಕಾರಿ ನೇಮಕಕ್ಕೆ ತೆರೆ?

|
Google Oneindia Kannada News

ಮೈಸೂರು, ಜ, 18: ಮೈಸೂರು ಒಡೆಯರ್ ಉತ್ತರಾಧಿಕಾರಿ ನೇಮಕ ಗೊಂದಲಕ್ಕೆ ತೆರೆ ಬೀಳುವ ಕಾಲ ಹತ್ತಿರವಾಗಿದೆ. ಸಂಸ್ಥಾನದ ಮುಂದಿನ ಉತ್ತರಾಧಿಕಾರಿಯಾಗಿ ಯದುವರ್‌ರಾಜ್ ಅರಸ್ ನೇಮಕವಾಗುವುದು ಖಚಿತವಾಗಿದೆ. ಇದಕ್ಕೆ ರಾಣಿ ಪ್ರಮೋದಾದೇವಿ ಸಹ ಅಸ್ತು ಎಂದಿದ್ದಾರೆ.

ಈಗಾಗಲೇ ಈ ಸಂಬಂಧ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪತ್ನಿ ಪ್ರಮೋದಾದೇವಿ ತಮ್ಮ ಕುಟುಂಬದ ಸಂಬಂಧಿಕರು,ಆತ್ಮೀಯರು, ಸ್ನೇಹಿತರು ಹಾಗೂ ಪುರೋಹಿತರ ಜತೆ ಚರ್ಚಿಸಿ ಯದುವರ್‌ರಾಜ್ ಅವರನ್ನೇ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲು ತೀರ್ಮಾನಿಸಿದ್ದಾರೆ. ಉತ್ತರಾಧಿಕಾರಿ ನೇಮಕ ಫೆಬ್ರವರಿ 21ರಂದು ಅಧಿಕೃತವಾಗಿ ಘೋಷಣೆಯಾಗಲಿದೆ.[ಶ್ರೀಕಂಠದತ್ತ ಒಡೆಯರ್ ಉತ್ತರಾಧಿಕಾರಿ ಯಾರು?]

mysuru

ಯದುವರ್ ರಾಜ್ ಅರಸ್ ಹಿನ್ನೆಲೆಯೇನು?
ಯದುವರ್‌ರಾಜ್ ಅರಸ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕಿರಿಯ ಸಹೋದರಿ ಗಾಯತ್ರಿದೇವಿ ಪುತ್ರ. ಬೋಸ್ಟಾನ್ ವಿವಿಯಲ್ಲಿ ವ್ಯಾಸಂಗ ಮಾಡಿರುವ ಯದುವರ್‌ರಾಜ್ ಅರಸ್ ಗೆ ಉತ್ತರಾಧಿಕಾರಿ ಗಾದಿ ಒದಗಿ ಬಂದಿದೆ. ಹಿಂದೆ ಇವರ ಹೆಸರು ಕೇಳಿಬಂದಿತ್ತಾದರೂ ಕೆಲ ಗೊಂದಲಗಳಿಂದ ನೇಮಕ ವಿಳಂಬವಾಗಿತ್ತು.[ಸೂತಕದ ನಡುವೆ ಎದ್ದಿದೆ ಒಡೆಯರ್ ಆಸ್ತಿ ಪ್ರಶ್ನೆ]

ಉತ್ತರಾಧಿಕಾರಿಯನ್ನು ನೇಮಕ ಸಂಬಂಧ ರಾಣಿ ಪ್ರಮೋದಾದೇವಿ ಯದುವರ್‌ರಾಜ್ ಅರಸ್ ಜತೆ ಶೃಂಗೇರಿಗೆ ಭೇಟಿ ನೀಡಿ ಸ್ವಾಮೀಜಿಗಳ ಜತೆ ಚರ್ಚಿಸಿದ್ದರು. ಯದುವರ್‌ರಾಜ್ ನೇಮಕಕ್ಕೆ ಸ್ವಾಮೀಜಿ ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

English summary
It has been one year after the death of death of Srikantadatta Narasimharaja Wadiyar Mysuru is getting ready for new Prince. Yaduvaraj aras is may elect as next prince of Mysuru Wadiyar family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X