ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಇನ್ಫೋಸಿಸ್ ಬಿಲ್ಡಿಂಗ್ ಗೆ ಪಾರಂಪರಿಕ ಕಟ್ಟಡದ ಗರಿ

|
Google Oneindia Kannada News

ಮೈಸೂರು, ಮೇ 21 : ಮೈಸೂರು ಪಾರಂಪರಿಕ ನಗರ ಎಂದೇ ಹೆಸರು ಪಡೆದಿದೆ. ಈ ಹೆಸರಿಗೆ ಮತ್ತೊಂದು ಪಾರಂಪರಿಕ ಗರಿ ಸಿಗಲಿದೆ. ಹೌದು, ನಗರದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಇನ್ಫೋಸಿಸ್ ಕಟ್ಟಡವನ್ನು ಮಾಡರ್ನ್ ಹೆರಿಟೇಜ್ ಎಂದು ಗುರುತಿಸಲು ಈಗಾಗಲೇ ಪುರಾತತ್ವ ಹಾಗೂ ಸಂಗ್ರಹಾಲಯ ಇಲಾಖೆ ಮುಂದಾಗಿದೆ. ಕಟ್ಟಡದ ವಾಸ್ತು ಶಿಲ್ಪದ ಶೈಲಿ, ಭಾರತದ ಪಾರ್ಲಿಮೆಂಟ್ ಮಾದರಿಯಲ್ಲಿದ್ದು ಈ ಮಾನದಂಡವನ್ನಿಟ್ಟುಕೊಂಡು ಪುರಾತತ್ವ ಮತ್ತು ಸಂಗ್ರಹಾಲಯ ಇಲಾಖೆ ಆಧುನಿಕ ಪಾರಂಪರಿಕ ಕಟ್ಟಡ ಎಂಬ ಸ್ಥಾನ ನೀಡಿ ಗೌರವಿಸಲು ಸಜ್ಜಾಗಿದೆ.

ಈ ಕುರಿತಾಗಿ ಏಪ್ರಿಲ್ ಮೊದಲ ವಾರದಲ್ಲಿ ತಂಡವು ಸಮೀಕ್ಷೆ ನಡೆಸಿದ್ದು, ತಾಂತ್ರಿಕ ತಜ್ಞರು ಈ ಕುರಿತಾಗಿ ಹೆಚ್ಚುವರಿ ಪರಿಶೀಲನೆ ನಡೆಸುತ್ತಿದ್ದಾರೆ. ನಂತರ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ನೇತೃತ್ವದ ಸಮಿತಿ ಇದನ್ನು ಪುನರ್ ಪರಿಶೀಲಿಸಿ ಆಯ್ಕೆ ಮಾಡಲಿದೆ. ಇನ್ಫೋಸಿಸ್ ಕಟ್ಟಡವನ್ನು ಪಾರಂಪರಿಕ ಕಟ್ಟಡವೆಂದು ಘೋಷಣೆ ಮಾಡಿದಲ್ಲಿ ಪುರಾತತ್ವ ಮತ್ತು ಸಂಗ್ರಹಾಲಯ ಇಲಾಖೆಯ ವತಿಯಿಂದ ನಡೆಯುವ ಅನೇಕ ಕಾರ್ಯಕ್ರಮಗಳು ಈ ವ್ಯಾಪ್ತಿಗೆ ಬರಲಿದೆ.

ಇನ್ಫೋಸಿಸ್ ಸಿಬ್ಬಂದಿಗೆ ಸಿಹಿ ಸುದ್ದಿ; ವೇತನವಷ್ಟೇ ಅಲ್ಲ, ಷೇರು ಸಹ ಸಿಗಲಿದೆಇನ್ಫೋಸಿಸ್ ಸಿಬ್ಬಂದಿಗೆ ಸಿಹಿ ಸುದ್ದಿ; ವೇತನವಷ್ಟೇ ಅಲ್ಲ, ಷೇರು ಸಹ ಸಿಗಲಿದೆ

ಪಾರಂಪರಿಕ ನಡಿಗೆ ಹಾಗೂ ದಸರೆಯ ಕೆಲವು ಕಾರ್ಯಕ್ರಮಗಳನ್ನು ಕೂಡ ಇಲ್ಲಿ ಮುಂದಿನ ದಿನಗಳಲ್ಲಿ ನಡೆಸಬಹುದಾಗಿದೆ. ಅಲ್ಲದೆ ನಗರದ ಎಲ್ಲ ವಾರ್ಡ್ ಗಳಲ್ಲಿ ಸಹ ಪಾರಂಪರಿಕ ಕಟ್ಟಡ ಗುರುತಿಸುವ ಸಮೀಕ್ಷೆಯನ್ನು ಇಲಾಖೆ ಕೈಗೊಂಡಿದ್ದು, 450 ಕಟ್ಟಡಗಳನ್ನು ಈಗಾಗಲೇ ಗುರುತಿಸಿದೆ .ಪುರಾತತ್ತ್ವ ಮತ್ತು ಸಂಗ್ರಹಾಲಯ, ಪಾರಂಪರಿಕ ಇಲಾಖೆ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಈಚನೂರು ಕುಮಾರ್‌ ಸೇರಿದಂತೆ ತಜ್ಞರ ಸಮಿತಿಯು ಸಮೀಕ್ಷೆ ನಡೆಸುತ್ತಿದೆ.

Mysuru Infosys building is now called as a heritage building

ಮೈಸೂರಿನ 45 ವಾರ್ಡ್ ಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದ್ದು, 450 ಕಟ್ಟಡಗಳನ್ನು ಗುರುತಿಸಿದೆ. ಅದರಲ್ಲೂ 500 ವರ್ಷ ಪೂರೈಸಿರುವ ಅರಳಿಕಟ್ಟೆ, ಕೊಳಗಳನ್ನು, ವಸ್ತುಗಳನ್ನು ಗುರುತಿಸಿ ಅವುಗಳಿಗೆ ವಿಶೇಷ ಸ್ಥಾನಮಾನ ನೀಡಲು ಮುಂದಾಗಿದೆ.

English summary
Archaeological department has Consider Infosys as one of the Mysuru city's Modern Heritage building. Know some of government programme will held at this building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X