ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಷಯ ಮುಕ್ತ ಜಿಲ್ಲೆ ಯೋಜನೆಗೆ ಸಾಂಸ್ಕೃತಿಕ ನಗರಿ ಮೈಸೂರು ಆಯ್ಕೆ

|
Google Oneindia Kannada News

ಮೈಸೂರು, ಮೇ. 14:ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಭಾರತದ ಹತ್ತು ಜಿಲ್ಲೆಗಳನ್ನು ಕ್ಷಯ ಮುಕ್ತ ಜಿಲ್ಲೆ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಮೈಸೂರು ಜಿಲ್ಲೆಯೂ ಕೂಡ ಆಯ್ಕೆಯಾಗಿದೆ.

2035ರೊಳಗ ದೇಶವನ್ನು ಕ್ಷಯ ಮುಕ್ತ ಮಾಡಲು ಕೇಂದ್ರ ಸರ್ಕಾರ ಹಲವು ಕ್ರಮಕೈಗೊಂಡಿದ್ದು, ಹತ್ತು ಜಿಲ್ಲೆಗಳು ಪ್ರಯೋಗಾಲಯ ಮಾದರಿಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2025ರ ಹೊತ್ತಿಗೆ ಭಾರತದಿಂದ ಕ್ಷಯ ರೋಗ ನಿರ್ಮೂಲನೆ: ನರೇಂದ್ರ ಮೋದಿ2025ರ ಹೊತ್ತಿಗೆ ಭಾರತದಿಂದ ಕ್ಷಯ ರೋಗ ನಿರ್ಮೂಲನೆ: ನರೇಂದ್ರ ಮೋದಿ

ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಕ್ಷಯ ಪರೀಕ್ಷೆ ಮಾಡಲಾಗುವುದು. ರೋಗಿಗಳಿಂದ ಮಾದರಿ ಸಂಗ್ರಹಿಸಿ ನಿಖರ ಕಾರಣ ಪತ್ತೆ ಹಚ್ಚಲಾಗುವುದು. ಜೊತೆಗೆ ರೋಗಿಗಳಿಗೆ ಮಾಸಿಕ 500 ಸಹಾಯಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

Mysuru has been selected for tuberculosis free district scheme

ಕ್ಷಯದ ಬಗ್ಗೆ ಜಾಗೃತಿ ಮೂಡಿಸಲು ಮೇ.18ರಿಂದ 20 ರವರೆಗೆ 3ನೇ ಆವೃತ್ತಿಯ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಈ ಟೂರ್ನಿ ನಡೆಯುವುದು. ನಗರದ ಜೆ.ಕೆ.ಮೈದಾನದಲ್ಲಿ 10 ಜಿಲ್ಲೆಗಳ 12 ತಂಡಗಳು ಭಾಗವಹಿಸಲಿವೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹಾಸನ, ಉಡುಪಿ, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಚಾಮರಾಜನಗರ ಜಿಲ್ಲಾ ತಂಡ, ಬಿಬಿಎಂಪಿ ಆರ್‌ಎನ್‌ಟಿಸಿಪಿ ಬೆಂಗಳೂರು ತಂಡ, ಎನ್‌ಯುಎಚ್‌ಎಂ ಬೆಂಗಳೂರು ತಂಡ, ಮೈಸೂರು ಆರ್‌ಎನ್‌ಟಿಸಿಪಿ ತಂಡ, ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ತಂಡ, ನಂಜನಗೂಡು ತಾಲ್ಲೂಕು ತಂಡ ಹಾಗೂ ಎಚ್.ಡಿ.ಕೋಟೆ ತಾಲ್ಲೂಕು ತಂಡ ಭಾಗವಹಿಸಲಿವೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕ್ಷಯ ರೋಗಕ್ಕೆ ಔಷಧಿ ದೊರೆಯುತ್ತಿದೆ. ಪಿಕೆಟಿಬಿ ಮತ್ತು ಕೆಆರ್‍ಎಸ್ ಆಸ್ಪತ್ರೆಯಲ್ಲಿ ಉಚಿವಾಗಿ ಕಫ ಪರೀಕ್ಷೆ ಮತ್ತು ಎಕ್ಸ್ ರೇ ಮಾಡಲಾಗುತ್ತದೆ. 2 ವಾರಕ್ಕಿಂತ ಹೆಚ್ಚು ಕೆಮ್ಮು ಇದ್ದವರು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಮೂಲಕ ಕ್ಷಯ ಮುಕ್ತ ಜಿಲ್ಲೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

English summary
Including Mysuru district, 10 districts of India have been selected for the Tuberculosis Free District Scheme under the National Tuberculosis Control Program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X