ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡೂ ಕೈಗಳಿಂದ 13 ಭಾಷೆ ಬರೆಯುವ ಅಪರೂಪದ ಪ್ರತಿಭೆ ಶಾಲಿನಿ

|
Google Oneindia Kannada News

ಮೈಸೂರು, ಮೇ 16: ಮೈಸೂರಿನ ಪುಟ್ಟ ಪೋರಿಯೊಬ್ಬಳ ಪ್ರತಿಭೆ ನೋಡುತ್ತಿದ್ದರೆ ಮಕ್ಕಳಿಂದ ಹೀಗೂ ಸಾಧ್ಯವೇ ಎಂದೆನಿಸುತ್ತದೆ.ಹೌದು, ಸಾಮಾನ್ಯವಾಗಿ ನಾವೆಲ್ಲರೂ ಬಲಗೈನಲ್ಲಿ ಬರೆಯುತ್ತೇವೆ. ಹೆಚ್ಚೆಂದರೆ ನಮ್ಮ ಮಾತೃಭಾಷೆಯ ವರ್ಣಮಾಲೆಯನ್ನು ಬರೆಯುವುದರಲ್ಲಿ ನಿಷ್ಠಾಣತರಾಗಿರುತ್ತೇವೆ.

ಆದರೆ ಮೈಸೂರಿನ ಬಾಲಕಿಯೊಬ್ಬಳು ಇಂಗ್ಲಿಷ್ , ಹಿಂದಿ, ಕನ್ನಡ ಸೇರಿದಂತೆ 13 ಭಾಷೆಗಳ ವರ್ಣಮಾಲೆಯನ್ನು ಏಕಕಾಲದಲ್ಲಿ ಎರಡು ಕೈಗಳಲ್ಲಿ ಬರೆಯುವುದರ ಜೊತೆಗೆ 8 ಶೈಲಿಯಲ್ಲಿ ಚಿತ್ರಗಳನ್ನು ಬಿಡಿಸುವ ಪರಿಣಿತಿ ಹೊಂದಿದ್ದಾಳೆ.

ಮಳವಳ್ಳಿಯ ಮಗ ಮುಟ್ಟಿದ ಎತ್ತರ, ಮಾಡಿದ ಸಾಧನೆ ಅಸಾಮಾನ್ಯಮಳವಳ್ಳಿಯ ಮಗ ಮುಟ್ಟಿದ ಎತ್ತರ, ಮಾಡಿದ ಸಾಧನೆ ಅಸಾಮಾನ್ಯ

ನಗರದ ಸುಣ್ಣದಕೇರಿ ನಿವಾಸಿ ಮಂಜುನಾಥ್ ಮತ್ತು ಲತಾ ದಂಪತಿಯ ಮಗಳಾದ ಎಂ. ಶಾಲಿನಿ ಹೀಗೆ ಎರಡೂ ಕೈಗಳಲ್ಲಿ ಅಕ್ಷರವನ್ನು ಹಾಗೂ ಚಿತ್ರವನ್ನು ಬಿಡಿಸುತ್ತಾಳೆ. ತನ್ನ ಚಿಕ್ಕ ವಯಸ್ಸಿನಿಂದಲೇ ಅಕ್ಷರಗಳನ್ನು ಬರೆಯುವ ಕಲೆಯನ್ನು ಕರಗತ ಮಾಡಿಕೊಂಡ ಶಾಲಿನಿ, ಸರಸ್ವತಿ ಗಣಪತಿ ಹಾಗೂ ಇತರ ದೇವರ ಚಿತ್ರವನ್ನು ತಲೆ ಕೆಳಗಾಗಿ ಬಿಡಿಸಿ ಅಚ್ಚರಿ ಮೂಡಿಸುತ್ತಾಳೆ.

Mysuru girl Shalini wrote 13 languages in her both hands at a time

ಇದುವರೆಗೂ 145 ಕಡೆಯಲ್ಲಿ ತನ್ನ ಪ್ರತಿಭೆಯನ್ನು ಪ್ರಸ್ತುತ ಪಡಿಸಿರುವ ಶಾಲಿನಿ ಹಲವಾರು ಪ್ರತಿಭಾ ಪುರಸ್ಕಾರಗಳನ್ನು ಪಡೆದಿದ್ದು, ವಿಶ್ವ ದಾಖಲೆ ಮಾಡಬೇಕೆಂಬ ಹಂಬಲದಲ್ಲಿದ್ದಾಳೆ . ಹದಿಮೂರು ವರ್ಷದ ಶಾಲಿನಿ ನಗರ ರೋಟರಿ ಜಾವಾ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದು, ತಂದೆಯ ಪ್ರೋತ್ಸಾಹದೊಂದಿಗೆ ನಿರಂತರ ಚಿತ್ರವನ್ನು ಬಿಡಿಸುವ ಅಭ್ಯಾಸ ಮಾಡುತ್ತಿದ್ದಾಳೆ.

ಯೋಗಾಸನದಲ್ಲಿ 3 ನೇ ಬಾರಿ ವಿಶ್ವದಾಖಲೆ ಬರೆದ ಉಡುಪಿಯ ತನುಶ್ರೀ ಪಿತ್ರೋಡಿಯೋಗಾಸನದಲ್ಲಿ 3 ನೇ ಬಾರಿ ವಿಶ್ವದಾಖಲೆ ಬರೆದ ಉಡುಪಿಯ ತನುಶ್ರೀ ಪಿತ್ರೋಡಿ

2010ರಲ್ಲಿ ರಾಜ್ಯ ಸರ್ಕಾರ ನೀಡುವ ಕಲಾಶ್ರೀ ಪ್ರಶಸ್ತಿ, ಜೀ ಕನ್ನಡ ವಾಹಿನಿಯ ಶಹಬ್ಬಾಷ್ ಇಂಡಿಯಾ ಹಾಗೂ ತಮಿಳು ಭಾಷೆಯ ಜಯಾ ವಾಹಿನಿಯ ಮಕ್ಕಳ್ ರಂಗಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯ ಗಳಿಸಿದ್ದಾರೆ.

Mysuru girl Shalini wrote 13 languages in her both hands at a time

"ಇನ್ನು ಶಾಲಿನಿಗೆ ಎರಡೂವರೆ ವರ್ಷವಿದ್ದಾಗ ತನ್ನ ಸ್ಲೇಟ್ ಮೇಲೆ ಎರಡೂ ಕೈಯಿಂದ ಬರೆಯುತ್ತಿರುವುದನ್ನು ಕಂಡು ಗಾಬರಿಯಿಂದ ನಾವು ಡಾಕ್ಟರಿಗೆ ತೋರಿಸಿದ್ದೆವು. ಎಲ್ಲಾ ಪರೀಕ್ಷೆ ನಡೆಸಿದ ವೈದ್ಯರು ಯಾವುದೇ ಸಮಸ್ಯೆ ಇಲ್ಲವೆಂದು ತಿಳಿಸಿದರು. ಅಲ್ಲದೇ ವೈದ್ಯರು ಇದನ್ನು ಮತ್ತಷ್ಟು ಪೋಷಿಸಿ, ಅವಳು ವಿಶೇಷ ಪ್ರತಿಭೆ ಹೊಂದುತ್ತಾಳೆ ಎಂದು ಹೇಳಿದರು. ಇದನ್ನು ಕೇಳಿದ ನಾವು ಬಹಳ ಸಂತೋಷದಿಂದ ಅವಳನ್ನು ಬೆಂಬಲಿಸಿದೆವು. ನಮ್ಮ ಮಗಳಿಗೆ ವಿಶ್ವ ದಾಖಲೆ ಮಾಡಬೇಕೆಂಬ ಹಂಬಲವಿದೆ. ಅದು ನನ್ನ ಬಯಕೆ ಕೂಡ" ಎಂದು ಶಾಲಿನಿ ತಂದೆ ಎ ಮಂಜುನಾಥ್ ಹೆಮ್ಮೆಯಿಂದಲೇ ನುಡಿಯುತ್ತಾರೆ.

English summary
13 Year old girl M. Shalini daughter of A. Manjunath and Latha, who can write 13 language alphabets with both hands at a time and also draw figures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X