ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಕೃಷ್ಣರಾಜ ಅಭ್ಯರ್ಥಿ ಕೆವಿ ಮಲ್ಲೇಶ್ ಆಸ್ತಿ 37,956 ರುಪಾಯಿ

|
Google Oneindia Kannada News

ಮೈಸೂರು, ಏಪ್ರಿಲ್ 20: ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ರಾಜಕಾರಣಿ ಆಸ್ತಿ ವಿವರ ಇದು. ಇವರ ಹೆಸರು ಕೆ.ವಿ.ಮಲ್ಲೇಶ್. ವಯಸ್ಸು 51 ವರ್ಷ. ಮೈಸೂರು ಜಿಲ್ಲೆಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಇವರ ಅಫಿಡವಿಟ್ ನಲ್ಲಿ ಏನಿದೆ ಅಂತ ನೋಡಿದರೆ ಆಸ್ತಿ-ಇಲ್ಲ, ವಾಹನ- ಇಲ್ಲ, ಸ್ವಂತ ಮನೆ- ಇಲ್ಲ...

ಕೈಯಲ್ಲಿರುವ ನಗದು, ಠೇವಣಿ ಅಂತೆಲ್ಲ ಸೇರಿ ಇರುವುದು 37,956 ರುಪಾಯಿ ಮಾತ್ರ. ಹೌದು, ನೀವು ಸರಿಯಾಗಿಯೇ ಓದುತ್ತಿದ್ದೀರಿ. ಇಲ್ಲಿ ಯಾವುದೇ ಸೊನ್ನೆಗಳು ಬಿಟ್ಟುಹೋಗಿಲ್ಲ. ಕೆ.ವಿ.ಮಲ್ಲೇಶ್ ಅವರು ಮೈಸೂರು ಪಾಲಿಕೆಯ ಹದಿನೆಂಟನೇ ವಾರ್ಡ್ ನ ಸದಸ್ಯರು. ಈ ಸಲ ಜೆಡಿಎಸ್ ನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

ಕರ್ನಾಟಕ ಚುನಾವಣೆ : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿಕರ್ನಾಟಕ ಚುನಾವಣೆ : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ

ತಾಯಿ ಹಾಗೂ ಅಣ್ಣನ ಜತೆ ವಾಸವಿರುವ ಅವರು, ಅವಿವಾಹಿತರು. ಅಣ್ಣ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರು ನಿವೃತ್ತರಾಗಿದ್ದಾರೆ. ತಾಯಿಗೆ ಒಂದಿಷ್ಟು ಪಿಂಚಣಿ ಬರುತ್ತದೆ. ಇನ್ನು ಪಾಲಿಕೆ ಸದಸ್ಯರು ಎಂಬ ಕಾರಣಕ್ಕೆ ಮಲ್ಲೇಶ್ ಅವರಿಗೆ ಆರು ಸಾವಿರ ರುಪಾಯಿ ಗೌರವ ಧನ ಬರುತ್ತಿದೆ. ಅಣ್ಣನ ಮನೆಯಲ್ಲೇ ವಾಸವಿರುವ ಮಲ್ಲೇಶ್ ಅವರ ಆಸ್ತಿ ವಿವರ ಒಂದು ಪುಟಕ್ಕೆ, ಒಂದೆರಡು ಸಾಲಿಗೆ ಮುಗಿದು ಹೋಗುತ್ತದೆ.

KV Mallesh

ಅವರ ಮೊಬೈಲ್ ಫೋನ್ ಗೆ ಕರೆ ಮಾಡಿದಾಗ ಚುನಾವಣೆ ಪ್ರಚಾರದಲ್ಲಿ ಬಹಳ ಬಿಜಿಯಾಗಿದ್ದ ಕೆ.ವಿ.ಮಲ್ಲೇಶ್, "ಈ ಸಲ ನನ್ನ ಪಾಲಿಗೆ ಕೃಷ್ಣರಾಜ ಕ್ಷೇತ್ರದಲ್ಲಿ ರಾಜಕೀಯ ಎದುರಾಳಿ ಅಂದರೆ ಬಿಜೆಪಿ" ಎಂದು ಒನ್ಇಂಡಿಯಾ ಕನ್ನಡಕ್ಕೆ ಹೇಳಿದರು. ಅದರ ಹೊರತುಪಡಿಸಿ, ತಾವೊಬ್ಬ ಸಮಾಜ ಸೇವಕ. ವಾರ್ಡ್ ನ ಕಾರ್ಪೊರೇಟರ್ ಎಂದಷ್ಟೇ ಪರಿಚಯಿಸಿಕೊಂಡರು.

ದ್ವಿತೀಯ ಪಿಯುಸಿ ಅಪೂರ್ಣ ಆಗಿರುವ ಕೆ.ವಿ.ಮಲ್ಲೇಶ್ ರ ಆದಾಯ ಮೂಲ ನಗರಪಾಲಿಕೆ ಸದಸ್ಯರಾಗಿ ಬರುತ್ತಿರುವ ಗೌರವಧನ ಮಾತ್ರ. ಅವರ ಅಫಿಡವಿಟ್ ಅನ್ನು ಒಂದಕ್ಕೆರಡು ಬಾರಿ ಕಣ್ಣುಜ್ಜಿಕೊಂಡು ನೋಡಬೇಕಾಯಿತು. ಕೋಟಿಗಟ್ಟಲೆ ಹಣ ಇರುವವರು ಮಧ್ಯೆ ನೋಡಿ, ಹೀಗೊಬ್ಬರಿದ್ದಾರೆ ಖಾಲಿ ಕೈ ಫಕೀರ ಮಲ್ಲೇಶ್.

English summary
Karnataka Assembly Elections 2018: Mysuru district Krishnaraja constituency JDS candidate KV Mallesh has only 38000 cash. This is his total net worth. His source of income only 6000 per month, that is what his honorarium from Mysuru city corporation, because he is the corporator of Mysuru 18th ward.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X