• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಪ್ರವಾಸಿ ತಾಣಗಳ ಪುನರಾರಂಭ: ಉಸ್ತುವಾರಿ ಸಚಿವರ ಮಾತು

By ಮೈಸೂರು ಪ್ರತಿನಿಧಿ
|

ಮೈಸೂರು, ಮೇ 30: ಮೈಸೂರು ಅರಮನೆ, ಚಾಮುಂಡಿಬೆಟ್ಟ, ದೇವಾಲಯ ಸೇರಿದಂತೆ ಪ್ರವಾಸಿ ತಾಣಗಳ ಪುನರಾರಂಭದ ಬಗ್ಗೆ ಇನ್ನು ಯಾವುದೇ ಮಾಹಿತಿ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

   ಕೊರೊನ ಶಂಕಿತರ ರಕ್ತದ ಸ್ಯಾಂಪಲ್ ಕದ್ದೊಯ್ದ ಕೋತಿಗಳು | Oneindia Kannada

   ಪ್ರವಾಸಿ ತಾಣಗಳನ್ನು ಮತ್ತೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಆದರೆ ಪುನರಾರಂಭಕ್ಕೆ ಕೇಂದ್ರ ಸರ್ಕಾರದ ಆದೇಶ ಬರಬೇಕು. ಇಂದು ಅಥವಾ ನಾಳೆ ಕೇಂದ್ರ ಸರ್ಕಾರವು ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದರು.

   ಪಕ್ಷದಲ್ಲಿ ಒಂದೇ ಒಂದು ಪರ್ಸೆಂಟ್ ಒಡಕಿಲ್ಲ; ಎಸ್.ಟಿ.ಸೋಮಶೇಖರ್

   ಎಲ್ಲ ಸ್ಥಳಗಳನ್ನು ಒಮ್ಮೆ ಪುನರಾರಂಭ ಮಾಡಿದರೆ ಮತ್ತೆ ಮುಚ್ಚುವುದಿಲ್ಲ. ಇದಕ್ಕಾಗಿ ಮೈಸೂರು ಜಿಲ್ಲಾಡಳಿತ ಎಲ್ಲದಕ್ಕೂ ಸಜ್ಜಾಗಿದೆ ಎಂದು ಸಚಿವ ಎಸ್‌.ಟಿ‌ ಸೋಮಶೇಖರ್ ತಿಳಿಸಿದರು.

   ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕರ ರಹಸ್ಯ ಸಭೆ ವಿಚಾರವಾಗಿ ಮಾತನಾಡಿದ ಸೋಮಶೇಖರ್, ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲಾಗಿದೆ ಹೊರತು ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

   ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೊರೊನಾ ವೈರಸ್ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

   SSLC ಪರೀಕ್ಷೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳುವುದೇನು?

   ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.

   ರಾಜ್ಯಸಭೆಯ 4 ಸ್ಥಾನಗಳಲ್ಲಿ 2 ಸ್ಥಾನಗಳು ಬಿಜೆಪಿ ಪಕ್ಷಕ್ಕೆ ಸಿಗಲಿವೆ. ವಿಧಾನ ಪರಿಷತ್ತಿನ 16 ಸ್ಥಾನಗಳು ಖಾಲಿಯಾಗುತ್ತವೆ. ಈ ಪೈಕಿ 9 ಸ್ಥಾನ ನಮಗೆ ಸಿಗುತ್ತವೆ ಎಂದು ಮಾಹಿತಿ ನೀಡಿದರು.

   ನಮ್ಮ ಜಿಲ್ಲೆ, ಸಮುದಾಯಕ್ಕೆ ಸ್ಥಾನಮಾನ ಹಾಗೂ ಅಧಿಕಾರ ಕೊಡಿ ಎಂದು ಎಲ್ಲರೂ ಕೇಳುತ್ತಿದ್ದಾರೆ. ಉಮೇಶ್ ಕತ್ತಿ ಅವರೂ ಅದನ್ನೇ ಕೇಳುತ್ತಿದ್ದಾರೆ. ಅದನ್ನೇ ಬೇರೆ ರೀತಿಯಲ್ಲಿ ಅರ್ಥೈಸುವ ಅಗತ್ಯವಿಲ್ಲವೆಂದು ಮೈಸೂರಿನಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಪಕ್ಷದ ಆಂತರಿಕ ಚಟುವಟಿಕೆಗಳ ಬಗ್ಗೆ ಸ್ಪಷ್ಟಪಡಿಸಿದರು.

   English summary
   There is no information on the reopening of tourist Spots, said Mysuru District Incharge Minister ST Somashekhar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X