ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1 ರೂ ಹಾಲು ಖರೀದಿ ದರ ಹೆಚ್ಚಿಸಿದ ಮೈಸೂರು ಒಕ್ಕೂಟ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 02: ಬೇಸಿಗೆಯಲ್ಲಿ ಹಾಲು ಉತ್ಪಾದಕರಿಗೆ ಹೆಚ್ಚಿನ ಉತ್ತೇಜನ ನೀಡಲು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಹಾಲಿನ ಖರೀದಿ ದರವನ್ನು ಪ್ರತಿ ಲೀ. 1 ರೂ. 10 ಪೈಸೆ ಹೆಚ್ಚಿಸಿದೆ.

ಒಕ್ಕೂಟವು ಸಂಘಗಳಿಂದ ಖರೀದಿಸುವ ಶೇ.3.5 ಜಿಡ್ಡಿನಂಶ ಹಾಗೂ ಶೇ.8.5 ಎಸ್‌ಎನ್‌ಎಫ್‌ ಇರುವ ಪ್ರತಿ ಲೀಟರ್ ಹಾಲಿಗೆ 32 ರೂ.25 ಪೈಸೆ ಆಗಲಿದೆ. ಸಂಘಗಳಿಂದ ಉತ್ಪಾದಕರಿಗೆ ಪಾವತಿಸುವ ಶೇ.3.5 ಜಿಡ್ಡಿನಂಶ ಹಾಗೂ ಶೇ.8.5 ಎಸ್‌ಎನ್‌ಎಫ್‌ ಇರುವ ಪ್ರತಿ ಲೀಟರ್ ಹಾಲಿಗೆ 30 ರೂ. ದರ ನಿಗದಿಪಡಿಸಲಾಗಿದೆ. ಹಾಲು ಉತ್ಪಾದಕರ ಸಂಘಗಳಿಗೆ ಹಾಗೂ ಸಂಘಗಳಿಂದ ಉತ್ಪಾದಕರಿಗೆ ನೀಡುವ ದರ ವ್ಯತ್ಯಾಸವು ಪ್ರತಿ ಲೀಟರ್ ಗೆ 2.25 ರೂ.ಇದೆ. ಇದರಲ್ಲಿ ಸಂಘಗಳ ಮಾರ್ಜಿನ್ 70 ಪೈಸೆ ನಿಗದಿಪಡಿಸಲಾಗಿದೆ.

ರೈತರು, ಹೈನುಗಾರರಿಗೆ ಕೋಚಿಮುಲ್​ ನಿಂದ ಬಂತು ಭರ್ಜರಿ ಆಫರ್​ರೈತರು, ಹೈನುಗಾರರಿಗೆ ಕೋಚಿಮುಲ್​ ನಿಂದ ಬಂತು ಭರ್ಜರಿ ಆಫರ್​

Mysuru District Co Operative Increased Milk Purchase Rate

ಸಂಘದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವೇತನ ಪರಿಷ್ಕರಿಸಲು ಈ ಹಿಂದೆ ಇದ್ದ ಮಾರ್ಜಿನ್ ಹಣವನ್ನು 60 ಪೈಸೆಯಿಂದ 70 ಪೈಸೆಗೆ ಹೆಚ್ಚಿಸಲು ಒಕ್ಕೂಟ ತೀರ್ಮಾನಿಸಿದೆ. ಒಕ್ಕೂಟದ ಅಧ್ಯಕ್ಷ ಎಸ್‌. ಸಿದ್ದೇಗೌಡ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.

ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಏರಿಕೆಯಾಗಿಲ್ಲ.

English summary
Mysure District Co-operative Milk Producers' Union has increased 1rs. 10 paise Milk Purchase Rate per Litre,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X