• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: ಕರವೇ ಜಿಲ್ಲಾಧ್ಯಕ್ಷ ಸೇರಿ ಮೂವರು ಗಡಿಪಾರು

By ಮೈಸೂರು ಪ್ರತಿನಿಧಿ
|

ಮೈಸೂರು, ಡಿಸೆಂಬರ್, 18: ರೌಡಿ ಶೀಟರ್ ಪಟ್ಟಿಯಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸೇರಿದಂತೆ ಮೂವರನ್ನು ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಮೈಸೂರು ನಗರದಿಂದ ಗಡಿಪಾರು ಮಾಡಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಮೈಸೂರು ಉಪ ಪೊಲೀಸ್ ಆಯುಕ್ತ ಡಾ.ಹೆಚ್.ಟಿ.ಶೇಖರ್ ಅವಧಿ ಮುಗಿಯುವವರೆಗೂ ನಗರ ಪ್ರವೇಶಿಸಲು ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಗಾಂಧಿನಗರದ ಕಿರಣ್, ರಾಜೇಂದ್ರನಗರದ ಅಹಮದ್ ಮುದಾಸಿರ್ ಗಡಿಪಾರು ಶಿಕ್ಷೆಗೆ ಗುರಿಯಾದವರು ಎಂದು ಉಪ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು. [ಮೈಸೂರಿಗರೇ,, ನೀವು ಹುಡುಕುತ್ತಿದ್ದ ದಂಪತಿ ಇವರೇನಾ..?]

ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಉಪ ಪೊಲೀಸ್ ಆಯುಕ್ತರು ಮುಂದಿನ ದಿನಗಳಲ್ಲಿ ಇತರರಿಗೂ ಇದೇ ಕ್ರಮ ಜರುಗಿಸಲಾಗುವುದು. ಅಕ್ರಮವಾಗಿ ನಗರ ಪ್ರವೇಶಿಸಿದ್ದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.[ಮೊಬೈಲ್ ಕರೆಗೆ ಓಗೊಟ್ಟು ಬ್ಯಾಂಕ್ ಮಾಹಿತಿ ಕೊಟ್ಟೀರಾ ಜೋಕೆ!]

ಗಡಿಪಾರು ಮಾಡಿದ್ದೇಕೆ?

ಕರ್ನಾಟಕ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲೆಯ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಹೋರಾಟಗಾರ ಎಂಬಂತೆ ಬಿಂಬಿಸಿಕೊಂಡು ಕನ್ನಡ ಭಾಷೆ, ರಕ್ಷಣೆ ಎಂದು ಸಾರ್ವಜನಿಕ ಅಂಗಡಿ ಮೇಲೆ, ಕೇಂದ್ರ ಸರ್ಕಾರದ ಕಚೇರಿಗಳಿಗೆ ತನ್ನ ಸಹಚರರೊಂದಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದನು. ಈತನ ವಿರುದ್ಧ 2013 ರಿಂದ 2015ರವರೆಗೆ ಒಟ್ಟು 4 ಪ್ರಕರಣಗಳು ದಾಖಲಾಗಿದ್ದವು. ಪ್ರವೀಣ್ ಕುಮಾರ್ ಅವರನ್ನು ಮೈಸೂರು ನಗರದಿಂದ ಒಂದು ವರ್ಷ ಕಾಲ ಗಡಿಪಾರು ಮಾಡಲಾಗಿದೆ.

ಅಹಮ್ಮದ್ ಮುದಾಸಿರ್ ಅಕ್ರಮವಾಗಿ ಗೃಹಬಳಕೆ ಸಿಲಿಂಡರ್ ಗಳನ್ನು ಸಂಗ್ರಹಿಸಿಕೊಂಡು ಗ್ಯಾಸ್ ರಿಫಿಲ್ಲಿಂಗ್ ದಂಧೆಯಲ್ಲಿ ತೊಡಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದನು. ಈತನ ಮೇಲೆ 4 ಪ್ರಕರಣಗಳು ದಾಖಲಾಗಿದ್ದವು. ಆದ್ದರಿಂದ ಈತನನ್ನು 6 ತಿಂಗಳ ಕಾಲ ಗಡಿಪಾರು ಮಾಡಲಾಗಿದೆ.[ಆನ್ ಲೈನ್ ನಲ್ಲೇ ಹೊಸ ಗ್ಯಾಸ್ ಸಂಪರ್ಕ ಪಡೆಯಿರಿ]

ಕಿರಣ್ ವಿರುದ್ದ ಹಲ್ಲೆ, ಕೊಲೆ ಬೆದರಿಕೆ, ದೊಂಬಿ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾದ ಮೂರು ಪ್ರಕರಣ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸಾರ್ವಜನಿಕರಿಗೆ ತೊದರೆ ಕೊಡುತ್ತಿದ್ದನು. ಹಾಗಾಗಿ ಈತನನ್ನು 4 ತಿಂಗಳವರೆಗೆ ಗಡಿಪಾರು ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru deputy commissioner H.T Shekar evictioned 3 persons Kiran, Praveen Kumar, Ahmed Mudaseer on Friday, December 18th. Praveen Kumar is the president of Karnataka Rakshana Vedike, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more