ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಲ್ಲಾಧಿಕಾರಿಯಿಂದ ರಾಜ್ಯ -ಕೇರಳ ಗಡಿ ಚೆಕ್‌ ಪೋಸ್ಟ್‌ ಪರಿಶೀಲನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 12: ಹೊರ ರಾಜ್ಯದ ಪ್ರಯಾಣಿಕರ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ಸೋಮವಾರ ಸಂಜೆ ಕೇರಳ -ಕರ್ನಾಟಕ ಅಂತಾರಾಜ್ಯ ಗಡಿ ಚೆಕ್ ‌ಪೋಸ್ಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

Recommended Video

ಚಿಕ್ಕಮಗಳೂರು ಜನರಿಗೆ ಖಡಕ್ ಎಚ್ಚರಿಕೆ ಕೊಟ್ಟ DC | Oneindia Kannada

ರಾಜ್ಯದ ಗಡಿ ಭಾಗದಲ್ಲಿರುವ ಎಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ‌ಪೋಸ್ಟ್‌ಗೆ ತೆರಳಿದ ಜಿಲ್ಲಾಧಿಕಾರಿಗಳು, ಅಂತಾರಾಜ್ಯ ಪ್ರಯಾಣಿಕರನ್ನು ತಪಾಸಣೆ ಮಾಡುವ ಸಿಬ್ಬಂದಿ ಜತೆ ಚರ್ಚೆ ನಡೆಸಿದರು.

ಚೆಕ್ ಪೋಸ್ಟ್ ಕಣ್ತಪ್ಪಿಸಿ ಶಿಕಾರಿಪುರಕ್ಕೆ ಬಂದ ಬೈಕ್ ಗಳ ವಶಚೆಕ್ ಪೋಸ್ಟ್ ಕಣ್ತಪ್ಪಿಸಿ ಶಿಕಾರಿಪುರಕ್ಕೆ ಬಂದ ಬೈಕ್ ಗಳ ವಶ

Mysuru Dc Visited Kerala Karnataka Inter State Border Check posts

ನಂತರ ಅಂತರಸಂತೆ ಬಳಿ ಇರುವ ಅಂತಾರಾಜ್ಯ ಪ್ರಯಾಣಿಕರ ಸ್ಕ್ರೀನಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು. ಇದಕ್ಕೂ ಮುನ್ನ ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಪಂ ಸಿಇಒ ಪಿ.ಕೆ.ಮಿಶ್ರಾ ಹಾಗೂ ಅಧಿಕಾರಿಗಳು ಹಾಜರಿದ್ದರು.

English summary
DC Abhiram Shankar visited Kerala-Karnataka Inter State Border Check posts on Monday evening,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X