ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

7 ವರ್ಷಗಳಿಂದ ಬಿಲ್ ಕಟ್ಟದ ಜಿಲ್ಲಾಡಳಿತ; ಮೈಸೂರು ಡಿಸಿ ಕಚೇರಿ ಜಪ್ತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 28: ಕಳೆದ 7 ವರ್ಷಗಳಿಂದ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಿವಿಲ್‌ ಕೋರ್ಟ್ ಆದೇಶದಂತೆ ಮೈಸೂರು ಜಿಲ್ಲಾಧಿಕಾರಿ ಕಚೇರಿಯನ್ನು ಕಂಟ್ರಾಕ್ಟರ್ ಜಪ್ತಿ ಮಾಡಿದ್ದಾರೆ.

ಕಂಟ್ರಾಕ್ಟರ್ ಚಿದಂಬರ ಎಂಬುವವರು 2013ರಲ್ಲಿ ಅಟಲ್ ಜಿ. ಜನಸ್ನೇಹಿ ಯೋಜನೆಯಡಿ ಡಿಸಿ ಕಚೇರಿಗೆ ಯುಪಿಎಸ್ ಸಪ್ಲೈ ಮಾಡಿದ್ದರು. ಆದರೆ ಯುಪಿಎಸ್ ಸಪ್ಲೈ ಮಾಡಿ 7 ವರ್ಷ ಕಳೆದರೂ ಮೈಸೂರು ಜಿಲ್ಲಾಡಳಿತ ಬಿಲ್ ಪಾವತಿಸಿರಲಿಲ್ಲ. ಈ ಕುರಿತು ಕಂಟ್ರಾಕ್ಟರ್ ಚಿದಂಬರ ಕೋರ್ಟ್ ಮೊರೆ ಹೋಗಿದ್ದರು.

ದೇವಿಂದರ್ ಸಿಂಗ್ ಬಳಿ ಜಪ್ತಿಯಾಗಿದ್ದು ಟೂತ್ ಬ್ರಷ್, ಅತ್ತರ್, ಎಕೆ47..ದೇವಿಂದರ್ ಸಿಂಗ್ ಬಳಿ ಜಪ್ತಿಯಾಗಿದ್ದು ಟೂತ್ ಬ್ರಷ್, ಅತ್ತರ್, ಎಕೆ47..

ಈ ಸಂಬಂಧ ಬಿಲ್ ಪಾವತಿಸುವಂತೆ ಜಿಲ್ಲಾಡಳಿತಕ್ಕೆ ಕೋರ್ಟ್ ಸೂಚನೆ ನೀಡಿತ್ತು. ಆದರೆ ಜಿಲ್ಲಾಡಳಿತ ಕೋರ್ಟ್ ಆದೇಶ ನಿರ್ಲಕ್ಷ್ಯಿಸಿ ಬಿಲ್ ಪಾವತಿ ಮಾಡಿರಲಿಲ್ಲ. ಕೋರ್ಟ್ ಆದೇಶ ಉಲ್ಲಂಘನೆ ಹಿನ್ನೆಲೆ ಡಿಸಿ ಕಚೇರಿ ಜಪ್ತಿಗೆ ಕೋರ್ಟ್ ಸೂಚಿಸಿತ್ತು. ಕೋರ್ಟ್ ಆದೇಶದಂತೆ ಕಂಟ್ರಾಕ್ಟರ್ ಚಿದಂಬರ ಅವರು ಜಿಲ್ಲಾಧಿಕಾರಿಗಳ ಕಚೇರಿ ಜಪ್ತಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಕಂಪ್ಯೂಟರ್, ಕುರ್ಚಿ, ಸೋಫಾಗಳನ್ನು ಜಪ್ತಿಮಾಡಿದ್ದಾರೆ.

Mysuru Dc Office Confiscated For Not Paying Bill Since 7 Years

ಬಸ್ ನಲ್ಲಿ ಸಿಕ್ಕಿಬಿದ್ದ ಈ ಇಬ್ಬರ ಕೈಲಿ ಅಂಥದ್ದೇನಿತ್ತು?ಬಸ್ ನಲ್ಲಿ ಸಿಕ್ಕಿಬಿದ್ದ ಈ ಇಬ್ಬರ ಕೈಲಿ ಅಂಥದ್ದೇನಿತ್ತು?

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೆದಾರರು, ಕೋರ್ಟ್‌ ಜಪ್ತಿ ಆದೇಶಕ್ಕೆ ಮೇಲಿನ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದ್ದು, ಜಪ್ತಿ ಮಾಡಿದ ವಸ್ತುಗಳನ್ನು ಇಲ್ಲಿಯೇ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

English summary
The Mysuru District Office has been confiscated for not paying Bill since 7 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X