ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆಗೆ ಗಜಪಡೆ ಬಂದಾಯ್ತು; ಇನ್ನೂ ನಿದ್ದೆಯಲ್ಲಿದೆ ಸರ್ಕಾರದ ವೆಬ್ ಸೈಟ್

|
Google Oneindia Kannada News

ಮೈಸೂರು, ಆಗಸ್ಟ್ 26: ದಸರಾ ಮಹೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದೆ. ಈ ನಾಡಹಬ್ಬಕ್ಕೆ ಬಾಕಿ ಉಳಿದಿರುವುದು 33 ದಿನಗಳು ಮಾತ್ರ. ಆದರೆ, ಇನ್ನೂ ದಸರಾ ಹಾಗೂ ಮೈಸೂರು ಅರಮನೆ ವೆಬ್‌ಸೈಟ್‌ಗಳು ನಿದ್ರಾವಸ್ಥೆಯಲ್ಲಿಯೇ ಇವೆ.

ಇಂದು ಮೈಸೂರು ಅರಮನೆ ತಲುಪಲಿದೆ ಜಂಜೂಸವಾರಿ ಆನೆಗಳುಇಂದು ಮೈಸೂರು ಅರಮನೆ ತಲುಪಲಿದೆ ಜಂಜೂಸವಾರಿ ಆನೆಗಳು

Recommended Video

ದಸರಾ ಗಜಪಯಣಕ್ಕೆ ವಿದ್ಯುಕ್ತ ಚಾಲನೆ: ಎರಡೆರಡು ಬಾರಿ ಪೂಜೆ ನಡೆಸಿ ಗೊಂದಲ | Oneindia Kannada

ಅರಮನೆ ಮಂಡಳಿಯ ಅಧಿಕೃತ ವೆಬ್‌ಸೈಟ್ www.mysorepalace.gov.in ನಲ್ಲಿ ಟಿಕೆಟ್ ಕಾಯ್ದಿರಿಸುವ ಪ್ರವಾಸಿಗರಿಗೆ ತೊಂದರೆಯಾಗಿದೆ. ಪ್ರತಿ ವರ್ಷ ಸುಮಾರು 35 ಲಕ್ಷ ಪ್ರವಾಸಿಗರು ಅರಮನೆಗೆ ಭೇಟಿ ನೀಡುತ್ತಾರೆ. ಹೊರರಾಜ್ಯ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರು ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುತ್ತಾರೆ. ಅವರೀಗ ಸರತಿ ಸಾಲಿನಲ್ಲೇ ನಿಂತು ಟಿಕೆಟ್ ಖರೀದಿಸಬೇಕಿದೆ.

Mysuru Dassara website not giving proper information

ದಸರಾ ಬಗ್ಗೆ ಮಾಹಿತಿ ನೀಡಲು ರೂಪಿಸಿರುವ www.mysoredasara.gov.in ವೆಬ್‌ಸೈಟ್ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಈ ವೆಬ್‌ಸೈಟ್ ತೆರೆದರೆ ದಸರಾ ಲಾಂಛನ ಮಾತ್ರ ಕಾಣಿಸುತ್ತದೆ. ಹೀಗಾಗಿ, ನಾಡಹಬ್ಬದ ಮಾಹಿತಿ ಪಡೆಯಲು ಪ್ರವಾಸಿಗರಿಗೆ ಈಗ ಯಾವುದೇ ಮಾರ್ಗ ಇಲ್ಲದಂತಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಮಾಹಿತಿ ಒಂದೆಡೆ ಸಿಗುವ ವೆಬ್‌ಸೈಟ್ ಕೂಡ ಇಲ್ಲ. ಪ್ರವಾಸಿಗರ ಆಕರ್ಷಣೆಗಾಗಿ ವೆಬ್‌ಸೈಟ್ ಮರುವಿನ್ಯಾಸಗೊಳಿಸುತ್ತಿದ್ದು, ಸದ್ಯದಲ್ಲೇ ಮಾಹಿತಿ ಅಪ್‌ಲೋಡ್ ಮಾಡಲಾಗುವುದು' ಎಂದು ವೆಬ್‌ಸೈಟ್ ಉಸ್ತುವಾರಿ ಸಿಬ್ಬಂದಿ ಹೇಳುತ್ತಾರೆ.

Mysuru Dassara website not giving proper information

ನಾಡಹಬ್ಬವನ್ನು ವಿಶ್ವಮಟ್ಟದಲ್ಲಿ ಪ್ರಚಾರ ಮಾಡಲಾಗುವುದೆಂದು ಜಿಲ್ಲಾಡಳಿತ ಹೇಳುತ್ತಿದ್ದರೂ, ಸ್ಥಗಿತಗೊಂಡಿರುವ ವೆಬ್ ಸೈಟ್ ನತ್ತ ಗಮನ ಹರಿಸದಿರುವುದಕ್ಕೆ ಪ್ರವಾಸೋದ್ಯಮ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದಸರೆಗೆ ಪ್ರವಾಸಿಗರನ್ನು ಸೆಳೆಯುವ ಕಾರ್ಯವೂ ನಡೆಯುತ್ತಿಲ್ಲ. ದಸರೆಯ ಅಥವಾ ಸದ್ಯದ ಮಾಹಿತಿ ಪಡೆಯಲು ಪ್ರವಾಸಿಗರಿಗೆ ಈಗ ಯಾವುದೇ ಮಾರ್ಗ ಇಲ್ಲ. ವಿದೇಶಿ ಪ್ರವಾಸಿಗರು ಮಾಹಿತಿಗಾಗಿ ವೆಬ್‌ಸೈಟ್ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಇದ್ಯಾವುದೂ ಸಾಧ್ಯವಾಗುತ್ತಿಲ್ಲ.

ಇಲ್ಲಿದೆ ನಾಡಹಬ್ಬ ಮೈಸೂರು ದಸರೆಯ ಸಂಪೂರ್ಣ ಮಾಹಿತಿಇಲ್ಲಿದೆ ನಾಡಹಬ್ಬ ಮೈಸೂರು ದಸರೆಯ ಸಂಪೂರ್ಣ ಮಾಹಿತಿ

ನಿಧಾನಗತಿಯ ದಸರೆಯ ಸಿದ್ಧತೆ ಗಮನಿಸಿದರೆ ಪ್ರವಾಸೋದ್ಯಮಕ್ಕೂ ಬರೆ ಬೀಳುವ ಲಕ್ಷಣವಿದೆ. ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಣ್ಣರವರು ಇತ್ತ ಗಮನಹರಿಸಿ ಕೆಲಸ ಚುರುಕಾಗುವಂತೆ ಮಾಡಬೇಕಿದೆ.

English summary
Mysuru Dassara website not giving proper information. September 29th to October 8th World famous Dassara program will commence at Mysuru. District minister should take fast action for that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X