ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಗದಿತ ಅವಧಿಗೆ ಮುನ್ನವೇ ಚಾಲನೆ; ದಸರಾ ಮುಹೂರ್ತ ಬದಲಿಸಿದರಾ ಸಿಎಂ ಯಡಿಯೂರಪ್ಪ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 9: ವಿಶ್ವವಿಖ್ಯಾತ ಮೈಸೂರು ದಸರಾ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ನಡೆದಿದೆ. ದಸರಾದಲ್ಲಿ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಅವಧಿಗಿಂತ ಮುನ್ನವೇ ಚಾಲನೆ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಮೈಸೂರು ದಸರಾ 2019; ಕಾರ್ಯಕ್ರಮಗಳ ಸಂಪೂರ್ಣ ವಿವರಮೈಸೂರು ದಸರಾ 2019; ಕಾರ್ಯಕ್ರಮಗಳ ಸಂಪೂರ್ಣ ವಿವರ

ಮೆರವಣಿಗೆಯ ನಂದಿಧ್ವಜ ಪೂಜೆಯಲ್ಲಿ 12 ನಿಮಿಷ ಮುಂಚಿತವಾಗಿಯೇ ಕಾರ್ಯಕ್ರಮ ಆರಂಭಗೊಂಡಿದ್ದು, ಚಾಮುಂಡೇಶ್ವರಿ ಮೂರ್ತಿಗೆ 13 ನಿಮಿಷ ಮುಂಚಿತವಾಗಿ ಪುಷ್ಪಾರ್ಚನೆ ಮಾಡಲಾಗಿದೆ. ಎರಡು ಕಾರ್ಯಕ್ರಮಗಳಿಗೆ ಪೂರ್ವ ನಿಗದಿಯಾಗಿ ಮುಹೂರ್ತ ನಿರ್ಧರಿಸಲಾಗಿತ್ತು.

ದಸರಾ ಪಾಸ್‌ ವಿತರಣೆಯಲ್ಲಿ ತಾರತಮ್ಯದ ಆರೋಪ; ವಿದೇಶಿಗರಿಗೂ ಸಿಗಲಿಲ್ಲ ಗೋಲ್ಡ್ ಪಾಸ್ದಸರಾ ಪಾಸ್‌ ವಿತರಣೆಯಲ್ಲಿ ತಾರತಮ್ಯದ ಆರೋಪ; ವಿದೇಶಿಗರಿಗೂ ಸಿಗಲಿಲ್ಲ ಗೋಲ್ಡ್ ಪಾಸ್

ಆದರೂ ಮೂಹೂರ್ತಕ್ಕಿಂತ ಮುಂಚೆಯೇ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ ನೀಡಿದ್ದಾರೆ. ಅಪಾರ ದೈವಭಕ್ತರಾಗಿರುವ ಸಿಎಂ ಬಿಎಸ್ ‌ವೈ‌ ಅವರಿಂದಲೇ ಮೂಹೂರ್ತವಿಲ್ಲದೆ ಪೂಜೆ ನಡೆದಿದೆ. 2.15ಕ್ಕೆ ನಿಗದಿಯಾಗಿದ್ದ ನಂದಿ ಧ್ವಜಪೂಜೆಯನ್ನು 2.03ಕ್ಕೆ ಸಲ್ಲಿಸಲಾಗಿದೆ. 4.31ಕ್ಕೆ ನಿಗದಿಯಾಗಿದ್ದ ಪುಷ್ಪಾರ್ಚನೆ ಕಾರ್ಯಕ್ರಮವು 4.18ಕ್ಕೆ ನೆರವೇರಿದೆ.

Mysuru Dasara Started Before The Specified Time

ಕಾರಣವೇ ಇಲ್ಲದೆ ಮುಂಚಿತವಾಗಿ ಪೂಜೆ ಪುಷ್ಪಾರ್ಚನೆ ಮಾಡಿದ್ದಾರೆ ಯಡಿಯೂರಪ್ಪ. ನಿಗದಿಯಾಗಿದ್ದ ಲಗ್ನಕ್ಕಿಂತ ಮುಂಚಿತವಾಗಿ ದಸರಾ ಕಾರ್ಯಕ್ರಮಗಳು ನಡೆದಿದ್ದು, ಯಡಿಯೂರಪ್ಪ ಅವರು ಅವಧಿಗಿಂತ ಬೇಗ, ಮುಹೂರ್ತ ಬದಲಿಸಿ ಹೀಗೆ ಬೇಗ ಚಾಲನೆ ನೀಡಿದ್ದರ ಹಿಂದಿನ ಕಾರಣವೇನು ಎಂದು ಸಾರ್ವಜನಿಕರಲ್ಲಿ ಚರ್ಚೆ ಆರಂಭಗೊಂಡಿದೆ.

English summary
The Mysore Dasara started before the specified time. Ahead of schedule the launch of two major programmes of Dasara has become debated issue in people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X