ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾದಲ್ಲಿ ಕುಶಾಲತೋಪು ಸಿಡಿಸೋದು ಸುಲಭದ ಕೆಲಸವಲ್ಲ!

|
Google Oneindia Kannada News

ಮೈಸೂರು, ಅಕ್ಟೋಬರ್ 16: ಮೈಸೂರು ರಾಜರ ಕಾಲದಲ್ಲಿ ರಾಜ್ಯದ ಭದ್ರತೆ ಮತ್ತು ಯುದ್ಧಕ್ಕಾಗಿ ಬಳಸಲಾಗುತ್ತಿದ್ದ ಫಿರಂಗಿಗಳು ಮೈಸೂರು ದಸರಾದಲ್ಲಿ ಕುಶಾಲತೋಪು ಸಿಡಿಸಲು ಬಳಸಲಾಗುತ್ತಿದೆ. ಆದರೆ ಈ ಫಿರಂಗಿಗಳನ್ನು ಸಿಡಿಸುವುದು ಸಲೀಸಲ್ಲ. ಈಗಾಗಲೇ ಸಿಡಿಸುವಾಗ ಹಲವು ದುರ್ಘಟನೆಗಳು ನಡೆದಿರುವುದನ್ನು ನಾವು ಕಾಣಬಹುದಾಗಿದೆ.

ಇತರೆ ದಿನಗಳಲ್ಲಿ ಮ್ಯೂಸಿಯಂನಲ್ಲಿರುವ ಫಿರಂಗಿಗಳನ್ನು ಪ್ರತಿ ವರ್ಷವೂ ದಸರಾ ವೇಳೆ ಹೊರ ತೆಗೆದು ಶುಚಿಗೊಳಿಸಿ ಕುಶಾಲತೋಪು ಸಿಡಿಸಲಾಗುತ್ತದೆ. ನಾವು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಫಿರಂಗಿಯ ಮಹತ್ವಗಳು ಅರಿವಾಗುತ್ತವೆ. ಇಂತಹ ಫಿರಂಗಿಗಳು ಮೈಸೂರು ಅರಮನೆಯಲ್ಲಿವೆ ಎನ್ನುವುದೇ ಸಂತಸದ ವಿಷಯವಾಗಿದೆ.

1260 ರಲ್ಲಿ ಚೀನಿಯರು ಆವಿಷ್ಕರಿಸಿದರು

1260 ರಲ್ಲಿ ಚೀನಿಯರು ಆವಿಷ್ಕರಿಸಿದರು

ಸುಮಾರು 12ನೇ ಶತಮಾನದಿಂದ ಆರಂಭವಾದ ಬಗ್ಗೆ ಮಾಹಿತಿ ಸಿಗುತ್ತದೆ. ಇದನ್ನು ಮೊಟ್ಟ ಮೊದಲಿಗೆ 1260 ರಲ್ಲಿ ಚೀನಿಯರು ಆವಿಷ್ಕರಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಿದರು ಎನ್ನಲಾಗುತ್ತದೆ. ಅದಾದ ನಂತರ 13ನೇ ಶತಮಾನದಲ್ಲಿ ಲಿಬಿಯಾ ದೇಶವು ಸ್ಪೇನ್ ದೇಶದ ವಿರುದ್ಧದ ಯುದ್ಧದಲ್ಲಿ ಪ್ರಪ್ರಥಮವಾಗಿ ಫಿರಂಗಿಯನ್ನು ಬಳಸಿತು ಎಂಬ ಮಾಹಿತಿಗಳಿವೆ. ಇದಾದ ಬಳಿಕ 16ನೇ ಶತಮಾನದಲ್ಲಿ ಸುಧಾರಿತ ಫಿರಂಗಿಗಳ ನಿರ್ಮಾಣ ನಡೆದುದನ್ನು ಕಾಣಬಹುದಾಗಿದೆ.

ಅರಮನೆಯ ಆವರಣದಲ್ಲಿ ಘರ್ಜಿಸುವ ಕಂಚಿನ ಹುಲಿಗಳು!ಅರಮನೆಯ ಆವರಣದಲ್ಲಿ ಘರ್ಜಿಸುವ ಕಂಚಿನ ಹುಲಿಗಳು!

ಟಿಪ್ಪು ಸುಲ್ತಾನ್ ಕಾಲದಲ್ಲಿ ಫಿರಂಗಿಗಳು ಇನ್ನಷ್ಟು ಸುಧಾರಣೆ ಕಂಡು ಸುಮಾರು 10 ಅಡಿ ಉದ್ದ, 9,100 ಕೆ.ಜಿ ತೂಕದ ಉಕ್ಕಿನ ಫಿರಂಗಿಗಳನ್ನು ತಮ್ಮ ಆಡಳಿತಾವಧಿಯಲ್ಲಿ ಯುದ್ಧದಲ್ಲಿ ಬಳಸಲಾಯಿತು. ಅವತ್ತಿನ ಫಿರಂಗಿ ಇವತ್ತಿಗೂ ಈಗಲೂ ಶ್ರೀರಂಗಟ್ಟಣದ ದರಿಯಾ ದೌಲತ್ ಅರಮನೆಯ ಮುಂಭಾಗದಲ್ಲಿದೆ.

ಫಿರಂಗಿಯಿಂದ 21 ಬಾರಿ ಕುಶಾಲತೋಪು

ಫಿರಂಗಿಯಿಂದ 21 ಬಾರಿ ಕುಶಾಲತೋಪು

ಅಂದು ಮೈಸೂರು ರಾಜರ ಶಕ್ತಿಯಾಗಿ ಹೋರಾಟದಲ್ಲಿ ಗಮನಸೆಳೆದಿದ್ದ ಫಿರಂಗಿಗಳು ಈಗ ಮ್ಯೂಸಿಯಂ ಸೇರಿವೆ. ದಸರಾ ಸಂದರ್ಭದಲ್ಲಿ ಹೊರತೆಗೆದು ಸ್ವಚ್ಛಗೊಳಿಸಿ ವಿಜಯ ಗಣಪತಿ ಪೂಜೆ ಸಲ್ಲಿಸುವ ಮೂಲಕ ಕುಶಾಲ ತೋಪು ಸಿಡಿಸಲು ಮತ್ತು ಮೆರವಣಿಗೆಗೆ ಅದಕ್ಕೂ ಮೊದಲು ಗಜಪಡೆ ಮತ್ತು ಕುದುರೆಗಳು ಬೆದರದಂತೆ ಸಿಡಿಮದ್ದು ತಾಲೀಮಿಗೆ ಬಳಸಿಕೊಳ್ಳಲಾಗುತ್ತಿದೆ. ಇನ್ನು ದಸರಾ ಜಂಬೂಸವಾರಿ ಹೊರಡುವ ಸಂದರ್ಭ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಆರಂಭಿಸಿ ಅದು ಮುಗಿಯುವುದರೊಳಗಾಗಿ 21 ಬಾರಿ ಕುಶಾಲ ತೋಪುಗಳನ್ನು ಇದೇ ಫಿರಂಗಿಯಿಂದ ಸಿಡಿಸಲಾಗುತ್ತದೆ. ಫಿರಂಗಿ ಮೂಲಕ ಕುಶಾಲತೋಪು ಸಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ತರಬೇತಿ ಬೇಕಾಗುತ್ತದೆ.

ಕುಶಾಲತೋಪು ಸಿಡಿಸಲು ಜಾಣ್ಮೆ ಬೇಕು

ಕುಶಾಲತೋಪು ಸಿಡಿಸಲು ಜಾಣ್ಮೆ ಬೇಕು

ಫಿರಂಗಿ ಸಿಡಿಸುವಾಗ ಬಹಳಷ್ಟು ಅವಘಡ ಸಂಭವಿಸಿದೆ. ಹೀಗಾಗಿ ಸಿಬ್ಬಂದಿಗೆ ವಿಮೆ ಮಾಡಿಸುವ ಯೋಜನೆ ಜಾರಿಗೆ ಬಂದಿದೆ. ಇಷ್ಟಕ್ಕೂ ಫಿರಂಗಿಯಲ್ಲಿ ಕುಶಾಲತೋಪು ಸಿಡಿಸುವುದಾದರೂ ಹೇಗೆ ಎನ್ನುವುದನ್ನು ನೋಡುವುದಾದರೆ ಸುಮಾರು ಮೂರೂವರೆ ಅಡಿ ಉದ್ದದ ಫಿರಂಗಿ ಕೊಳವೆಗೆ ಹದಮಾಡಿದ ಸುಮಾರು ಮೂರು ಕಿಲೋಗ್ರಾಂ ನಷ್ಟು ರಂಜಕದ ಪುಡಿಯನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಆಯತಕಾರದ ಪೊಟ್ಟಣದಂತೆ ಮಾಡಲಾಗುತ್ತದೆ. ಅದನ್ನು ಕೊಳವೆಗೆ ಹಾಕಿ ನಂತರ ಕಬ್ಬಿಣದ ಸಾಧನವೊಂದರ ಮೂಲಕ ತಳ್ಳಿ ಗಟ್ಟಿಗೊಳಿಸಲಾಗುತ್ತದೆ. ನಂತರ ಅದಕ್ಕೆ ಬೆಂಕಿ ಹಚ್ಚಿದಾಗ ಅದು ಭಾರೀ ಶಬ್ಧದೊಂದಿಗೆ ಸ್ಫೋಟಗೊಳ್ಳುತ್ತದೆ.

ಹಲವು ದುರ್ಘಟನೆ ನಡೆದಿವೆ

ಹಲವು ದುರ್ಘಟನೆ ನಡೆದಿವೆ

ಇದಾದ ನಂತರ ಮತ್ತೆ ಆ ಬಿಸಿಯಿರುವ ಕೊಳವೆಯನ್ನು ಸಿಂಬ ಎಂಬ ಸಾಧನದಿಂದ ಸ್ವಚ್ಛಗೊಳಿಸುತ್ತಾರೆ. ಇದು ಸುಲಭದ ಕೆಲಸವಲ್ಲ. ಏಕೆಂದರೆ ಇಲ್ಲಿ ಒಂದೇ ಚಿಕ್ಕ ಕಿಡಿಯಿದ್ದರೂ ಮತ್ತೆ ಮದ್ದು ತುಂಬಿಸುವಾಗ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈಗಾಗಲೇ ಕುಶಾಲ ತೋಪು ಸಿಡಿಸುವಾಗ ಅವಘಡಗಳು ಸಂಭವಿಸಿ ಅದನ್ನು ಸಿಡಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆಗಳೂ ಹಲವಷ್ಟು ನಡೆದಿರುವುದನ್ನು ನಾವು ಕಾಣಬಹುದಾಗಿದೆ. 2013 ರಲ್ಲಿ ಹಾಗೂ 2014 ರಲ್ಲೂ ಅವಘಡಗಳು ಸಂಭವಿಸಿ, ಕುಶಾಲು ತೋಪು ಸಿಡಿಸುತ್ತಿದ್ದ ಸಿಬ್ಬಂದಿ ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸಿಬ್ಬಂದಿಗಳಿಗೆ ಅಗ್ನಿ ನಿರೋಧಕ ಜಾಕೆಟ್

ಸಿಬ್ಬಂದಿಗಳಿಗೆ ಅಗ್ನಿ ನಿರೋಧಕ ಜಾಕೆಟ್

ದಶಕಗಳ ಹಿಂದೆ ಸಿಎಆರ್ ಪೊಲೀಸ್ ಸಿಬ್ಬಂದಿ ಪರಶುರಾಮ್ ಎಂಬುವರು ಕುಶಾಲ ತೋಪು ಸಿಡಿಸುವ ಸಂದರ್ಭ ಅವರ ಇಡೀ ಮೈಸುಟ್ಟಿತ್ತಂತೆ. 2014 ರಲ್ಲಿ ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದ ಸಂದರ್ಭ ಕುಶಾಲ ತೋಪು ಸಿಡಿಸಿದಾಗ ಸಿಎಆರ್ ಪೊಲೀಸ್ ರಾಜು ಎಂಬುವರಿಗೆ ಗಾಯವಾಗಿತ್ತು. ಇದನ್ನು ತಪ್ಪಿಸುವ ಸಲುವಾಗಿ ಸಿಬ್ಬಂದಿಗಳಿಗೆ ಅಗ್ನಿ ನಿರೋಧಕ ಜಾಕೆಟ್ ಗಳನ್ನು ನೀಡಲಾಗುತ್ತದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಶತಮಾನಗಳಷ್ಟು ಹಳೆಯದಾಗಿರುವ ಫಿರಂಗಿಗಳನ್ನು ಜತನದಿಂದ ಕಾಯ್ದುಕೊಂಡು ಅವುಗಳನ್ನು ಇವತ್ತಿಗೂ ಬಳಕೆ ಮಾಡುತ್ತಿರುವುದು ನಿಜಕ್ಕೂ ಮೆಚ್ಚತಕ್ಕ ಕೆಲಸವಾಗಿದೆ.

English summary
The Kushala Topu that were used for the security and war of the state during the Mysuru kings are being used in the Mysuru Dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X