ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತಿಗೋಡು ಶಿಬಿರದಲ್ಲಿ ಮೈಸೂರು ದಸರಾ ಆನೆ ದ್ರೋಣ ಸಾವು

|
Google Oneindia Kannada News

ಮೈಸೂರು, ಏಪ್ರಿಲ್ 26: ವಿಶ್ವ ವಿಖ್ಯಾತ ದಸರಾದಲ್ಲಿ ಪಾಲ್ಗೊಂಡಿದ್ದ ದ್ರೋಣ ಆನೆ ಸಾವನ್ನಪ್ಪಿದೆ. ಕೊಡಗು ಜಿಲ್ಲೆಯ ತಿತಿಮತಿ ವಲಯದಲ್ಲಿ ಇರುವ ಆನೆ ಶಿಬಿರ ಮತ್ತಿಗೋಡುನಲ್ಲಿ ಸಾಕಾನೆ ದ್ರೋಣಾ ನೀರು ಕುಡಿಯಲು ಹೋಗಿ ಟ್ಯಾಂಕ್ ಬಳಿ ಕುಸಿದು ಬದ್ದಿದೆ.

ಏಕಾಏಕಿ ನಡುಗಿ ಕುಸಿದು ಬಿದ್ದ ದ್ರೋಣಾ ಆನೆಯನ್ನು ಕಂಡು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದಾರೆ. ವೈದ್ಯ ಮುಜೀಬ್ ರೆಹಮಾನ್ ರೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆನೆಯನ್ನು ಪರೀಕ್ಷಿಸಿದಾಗ ಸಾವನ್ನಪ್ಪಿರುವುದು ತಿಳಿದು ಬಂದಿದೆ.

2018ರಲ್ಲಿ ದ್ರೋಣಾ ಮೊದಲ ಬಾರಿಗೆ ದಸಾರದಲ್ಲಿ ಪಾಲ್ಗೊಂಡಿತ್ತು.

ನಾಪತ್ತೆಯಾಗಿದ್ದ ದಸರಾ ಆನೆ ಅಶೋಕ ಡಿ.ಬಿ. ಕುಪ್ಪೆಯಲ್ಲಿ ಪತ್ತೆನಾಪತ್ತೆಯಾಗಿದ್ದ ದಸರಾ ಆನೆ ಅಶೋಕ ಡಿ.ಬಿ. ಕುಪ್ಪೆಯಲ್ಲಿ ಪತ್ತೆ

2018ರಲ್ಲಿ ದ್ರೋಣಾ ಮೊದಲ ಬಾರಿಗೆ ದಸಾರದಲ್ಲಿ ಪಾಲ್ಗೊಂಡಿತ್ತು. ವಿಶ್ವವಿಖ್ಯಾತ ದಸರಾ ಜಂಬೂಸವಾರಿಯನ್ನು ಮೂರು ಬಾರಿ ನಿರಾಯಸಾವಾಗಿ ಮುನ್ನಡೆಸಿದ್ದ ದ್ರೋಣ ಆನೆ ಹೃದಯಾಘಾತದಿಂದ ಇಂದು ಶುಕ್ರವಾರ ಮೃತಪಟ್ಟಿದೆ.

Mysuru Dasara Elephant Drona died in Mathigodu elephant camp

ಸೌಮ್ಯ ಸ್ವಭಾವದವನಾಗಿದ್ದ ದ್ರೋಣ ಅರ್ಜುನನ ನಿವೃತ್ತಿಯ ನಂತರ ಈತನೇ ಅಂಬಾರಿ ಹೊರಲು ಸೂಕ್ತ ಎಂದು ಅಧಿಕಾರಿಗಳು ಚಿಂತಿಸಿದ್ದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ ದ್ರೋಣ ಕೆಲ ತಿಂಗಳ ಹಿಂದೆ ಕಾಡಾನೆ ದಾಳಿಯಿಂದ ಸೊಂಟ ಮುರಿದುಕೊಂಡು ಚೇತರಿಸಿಕೊಂಡಿದ್ದ. ಆದರೆ ಇಂದು ಹೃದಯಾಘಾತದಿಂದ ಅಸುನೀಗಿದ್ದಾನೆ.

ಈ ಹಿಂದೆ ದಸರಾ ಆನೆಗಳ ಬಳಗದ ಹಿರಿ ಆನೆಗೂ ಸಹ ದ್ರೋಣ ಎಂದು ಹೆಸರಿಡಲಾಗಿತ್ತು.ಆ ಆನೆಯೂ ಸಹ 18 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ದಾಖಲೆ ಮಾಡಿತ್ತು. ಅದಾದ ಬಳಿಕ 1998ರಲ್ಲಿ ಮೇಯಲು ಹೋಗಿದ್ದಾಗ ವಿದ್ಯುತ್ ತಗುಲಿ ಸಾವಿಗೀಡಾಗಿದ್ದ.ಆ ದ್ರೋಣನ ಸಾವಿನ ಬಳಿಕ ಮತ್ತೊಂದು ಕಿರಿಯ ಆನೆಗೆ ದ್ರೋಣ ಎಂದು ನಾಮಕರಣ ಮಾಡಿ ದಸರೆ ಆನೆ ತಂಡಕ್ಕೆ ಸೇರಿಸಿದ್ದ ಗಜ ಇದಾಗಿತ್ತು.

English summary
Mysuru Dasara Elephant Drona died in Mathigodu elephant camp.Elephant died while drinking water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X