• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Dasara 2022: ಯುವ ದಸರಾಗೆ ಸುದೀಪ್‌ ಚಾಲನೆ, ಒಂದು ದಿನ ಅಪ್ಪು ನಮನಕ್ಕೆ ಸೀಮಿತ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 22 : ಯೋಜನೆಯಂತೆ ಈ ಬಾರಿಯ ಮೈಸೂರು ದಸರಾ ಎಲ್ಲಾ ವಿಭಾಗದಲ್ಲೂ ಅದ್ದೂರಿಯಾಗಿಯೇ ನಡೆಯಲಿದೆ, ಯುವ ಸಮೂಹದಿಂದ ಸದಾ ಕಂಗೊಳಿಸುವ ಯುವ ದಸರಾವನ್ನು ಈ ಬಾರಿ ಕಿಚ್ಚ ಸುದೀಪ್ ಚಾಲನೆ ನೀಡಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3ರವರೆಗೆ 7 ದಿನ ಕಾಲ ನಡೆಯಲಿದ್ದು, ಸ್ಥಳೀಯ ಕಲಾವಿದರೊಂದಿಗೆ ಸ್ಯಾಂಡಲ್‌ವುಡ್, ಬಾಲಿವುಡ್ ಗಾಯಕರೊಂದಿಗೆ ತಾರೆಯರು ನೃತ್ಯ ಮತ್ತು ಗಾಯನದ ಮೂಲಕ ಮೋಡಿ ಮಾಡಲಿದ್ದಾರೆ.

ಯುವ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದು ದಿನ ಪೂರ್ತಿ ಅಪ್ಪು ನಮನ ಕಾರ್ಯಕ್ರಮಕ್ಕೆ ಮೀಸಲಿಡಲಾಗುವುದು. ಮತ್ತೊಂದು ದಿನವನ್ನು ಮಹಿಳಾ ಕಲಾವಿದರ ನಾನಾ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿದರು.

ಮೈಸೂರು ದಸರಾ 2022; ಇದೇ ಮೊದಲ ಬಾರಿಗೆ ಕೈಗಾರಿಕಾ ದಸರಾ ಉತ್ಸವಮೈಸೂರು ದಸರಾ 2022; ಇದೇ ಮೊದಲ ಬಾರಿಗೆ ಕೈಗಾರಿಕಾ ದಸರಾ ಉತ್ಸವ

ಎರಡು ವರ್ಷಗಳ ಬಳಿಕ ಯುವ ದಸರಾ ನಡೆಯುತ್ತಿದ್ದು, ಸೆ.27ರಂದು ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದು, ನಟ ಸುದೀಪ್ ಭಾಗವಹಿಸುವ ಮೂಲಕ ತಾರಾ ಮೆರುಗು ನೀಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ನಟ ಸುದೀಪ್‌ಗೆ ಯಾವುದೇ ಸಂಭಾವನೆ ನೀಡುತ್ತಿಲ್ಲ. ಉಳಿದ ಕಲಾವಿದರಿಗೆ ಸಂಭಾವನೆ ನೀಡಲಾಗುತ್ತಿದ್ದು, ದಸರಾ ಬಳಿಕ ಯಾವ್ಯಾವ ಕಲಾವಿದರಿಗೆ ಎಷ್ಟು ಸಂಭಾವನೆ ನೀಡಲಾಗಿದೆ ಎಂದು ತಿಳಿಸಲಾಗುವುದು ಎಂದರು.

ಯಾವ ದಿನ ಯಾರ ಕಾರ್ಯಕ್ರಮ
ಸೆಪ್ಟೆಂಬರ್ 27ರಂದು ಶ್ರೀಧರ್ ಜೈನ್ ನೃತ್ಯ ತಂಡದಿಂದ ಕಾರ್ಯಕ್ರಮ, ಗಾಯಕರಾದ ರಘು ಧೀಕ್ಷಿತ್ ಹಾಗೂ ಗಾಯಕಿ ಮಂಗ್ಲಿ ಅವರಿಂದ ಗಾಯನ ನಡೆಯಲಿದೆ. ಸೆಪ್ಟೆಂಬರ್‌ 28ರಂದು ಯುವ ದಸರಾ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್‌ಕುಮಾರ್‌ಗೆ ಗೌರವ ಸಲ್ಲಿಸಲಾಗುತ್ತಿದ್ದು, ಗಾಯಕರಾದ ಗುರುಕಿರಣ್, ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ ಗಾಯನದ ಮೂಲಕ ಅಪ್ಪು ಅವರಿಗೆ ನಮನ ಸಲ್ಲಿಸಲಿದ್ದಾರೆ.

ಸೆಪ್ಟೆಂಬರ್ 29ರಂದು ಲೇಸರ್ ಶೋ, ಸಿಗ್ನೇಚರ್ ಗ್ರೂಪ್ ನೃತ್ಯ ತಂಡ, ಕನ್ನಿಕಾ ಕಪೂರ್ ಮತ್ತು ಅಸೆಂಟ್ ತಂಡದಿಂದ ಕಾರ್ಯಕ್ರಮ ನಡೆಯಲಿದೆ. ಸೆಪ್ಟೆಂಬರ್ 30 ರಂದು ಸ್ಯಾಂಡಲ್‌ವುಡ್ ನೈಟ್ ಇರಲಿದ್ದು, ಕನ್ನಡ ಚಿತ್ರರಂಗದ ನಟಿ ನಟಿಯರು ಭಾಗವಹಿಸಲಿದ್ದಾರೆ. ಅಕ್ಟೋಬರ್ 1ರಂದು ಗಾಯಕಿ ಡಾ.ಶಮಿತ ಮಲ್ನಾಡ್ ತಮ್ಮ ಗಾಯನದ ಮೂಲಕ ರಂಜಿಸಲಿದ್ದಾರೆ. ಅಕ್ಟೋಬರ್ 2ರಂದು ಪವನ್ ಡ್ಯಾನ್ಸರ್, ನಟಿ ಹರ್ಷಿಕಾ ಪೂಣಚ್ಚ, ನಟ ವಿಜಯ ರಾಘವೇಂದ್ರ, ಅಮಿತ್ ತ್ರಿವೇದಿಯಿಂದ ಕಾರ್ಯಕ್ರಮ ಇರಲಿದೆ. ಅಕ್ಟೋಬರ್ 3ರಂದು ಸುಪ್ರಿಯಾ ರಾಮ್ ಮತ್ತು ಮಹಿಳಾ ಬ್ಯಾಂಡ್ ತಂಡ ಕಾರ್ಯಕ್ರಮ ನಡೆಸಿಕೊಡಲಿದೆ, ನಂತರ ಪ್ಯಾಷನ್ ಶೋ ನಡೆಯಲಿದೆ.

English summary
sandalwood Actor Kichcha Sudeep will be Inaugurate Yuva Dasara,This program will be held for 7 days from 27th September to 3rd October, with local artistes, Sandalwood, Bollywood singers and stars will be mesmerizing through dance and singing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X