• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಾಂಗಾ ಏರಿ ಹೋಗುಮಾ ಎಂದು ಮೈಸೂರು ಸುತ್ತಿದ 45 ಜೋಡಿಗಳು; ಪಾರಂಪರಿಕ ಉಡುಗೆಯ ರಂಗು

By (ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್‌, 30: ಮೈಸೂರು ಸಾಂಸ್ಕೃತಿಕ ನಗರಿ ಹೇಗೋ ಹಾಗೆರೇ ಟಾಂಗಾ ನಗರಿ ಕೂಡ ಹೌದು. ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ 45 ದಂಪತಿಗಳು ನಗರದ ಪಾರಂಪರಿಕ ಕಟ್ಟಡಗಳನ್ನು ಕಣ್ತುಂಬಿಕೊಂಡರು. ನಗರದ ಪುರಭವನದ (ಟೌನ್ ಹಾಲ್) ಆವರಣದಲ್ಲಿ ಆಯೋಜಿಸಿದ್ದ ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ಟಾಂಗಾ ಸವಾರಿಗೆ ಪಾರಂಪರಿಕ ದಸರಾ ಉಪ ಸಮಿತಿ ಅಧ್ಯಕ್ಷ ಗೋಪಾಲರಾವ್ ಚಾಲನೆ ನೀಡಿದರು.

ಪುರಭವನದಿಂದ ಆರಂಭಗೊಂಡ ಪಾರಂಪರಿಕ ಟಾಂಗಾ ಸಾವಾರಿ, ಹತ್ತನೆ ಚಾಮರಾಜ ಒಡೆಯರ್ ವೃತ್ತ, ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ ಕಟ್ಟಡ, ಜಗನ್‌ಮೋಹನ ಅರಮನೆ, ಪರಕಾಲ ಮಠ, ವಾಣಿಜ್ಯ ತೆರಿಗೆ ಕಚೇರಿ, ಪದ್ಮಾಲಯ, ಮುಡಾ ವೃತ್ತ, ಪ್ರಾಚ್ಯವಿದ್ಯಾಸೌಧ, ಕ್ರಾರ್ಡ್ ಹಾಲ್, ಜಿಲ್ಲಾಧಿಕಾರಿಗಳ ಕಚೇರಿ, ಮಹಾರಾಜ ಜೂನಿಯರ್ ಕಾಲೇಜು, ಮೆಟ್ರೊಪೋಲ್ ವೃತ್ತ, ರೈಲ್ವೆ ನಿಲ್ದಾಣ, ಮೈಸೂರು ಮೆಡಿಕಲ್ ಕಾಲೇಜು ಮೂಲಕ ಹಾದು ದೊಡ್ಡ ಗಡಿಯಾರದ (ಟೌನ್ ಹಾಲ್) ಹತ್ತಿರ ಮುಕ್ತಾಯವಾಯಿತು.

ದಸರಾ ಕ್ರೀಡಾಕೂಟಕ್ಕೆ ಒಲಿಂಪಿಕ್ಸ್‌ ವಿಜೇತೆಯಿಂದ ಚಾಲನೆ; ಕ್ರೀಡೆಗೆ ಸ್ಫೂರ್ತಿಯಾದ ಸಾಕ್ಷಿದಸರಾ ಕ್ರೀಡಾಕೂಟಕ್ಕೆ ಒಲಿಂಪಿಕ್ಸ್‌ ವಿಜೇತೆಯಿಂದ ಚಾಲನೆ; ಕ್ರೀಡೆಗೆ ಸ್ಫೂರ್ತಿಯಾದ ಸಾಕ್ಷಿ

ಗಮನ ಸೆಳೆಸ ಪಾರಂಪರಿಕ ಉಡುಗೆ

ಮೈಸೂರು ಭಾಗದ ನಾನಾ ಭೌಗೋಳಿಕ ಪ್ರದೇಶಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೊಡವ ಧಿರಿಸು, ಮಹಾರಾಜರ ತೊಡಿಗೆ, ಮೈಸೂರು ಪೇಟಾ, ಪಂಚೆ ಹಾಗೂ ಮೈಸೂರು ರೇಷ್ಮೆ ಸೀರೆ ಸೇರಿದಂತೆ ವಿವಿಧ ರೀತಿಯ ಪಾರಂಪರಿಕ ಉಡುಗೆ ತೊಟ್ಟು ಭಾಗವಹಿಸಿದ್ದ ಜೋಡಿಗಳಿಗೆ ಬಾಗೀನ ನೀಡಿ ಸ್ವಾಗತಿಸಲಾಯಿತು.

ಇತಿಹಾಸ ಮತ್ತು ಪುರಾತತ್ವ ತಜ್ಞ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಪಾರಂಪರಿಕ ಉಡುಗೆಯಲ್ಲಿ ಟಾಂಗಾ ಸವಾರಿಯಲ್ಲಿದ್ದ ದಂಪತಿಗಳಿಗೆ ಪಾರಂಪರಿಕ ಕಟ್ಟಡಗಳು ಕುರಿತು ಮಾಹಿತಿ ನೀಡಿದರು. ಹಾಗೆಯೇ ಮೈಸೂರು ಪಾರಂಪರಿಕ ಕಟ್ಟಗಳ ಐತಿಹಾಸಿಕ ಹಿನ್ನೆಲೆಯನ್ನು ತಿಳಿಸಿಕೊಟ್ಟರು. ಬೆಂಗಳೂರಿನ ಹೇಮಲತಾ-ಪ್ರಭು ಜೋಡಿ ಮಾತನಾಡಿ, ''ದಸರಾ ಕಾರ್ಯಕ್ರಮಕ್ಕಾಗಿಯೇ ಮೈಸೂರಿಗೆ ಬಂದಿದ್ದೇವೆ. ಪಾರಂಪರಿಕ ಟಾಂಗಾ ಸವಾರಿಯಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷ ಉಂಟುಮಾಡಿದೆ. ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದೇ ರೀತಿ ಜಂಬೂ ಸವಾರಿ ವೀಕ್ಷಿಸಲು ಕಾತುರರಾಗಿದ್ದೇವೆ,'' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಎನ್.ಎಸ್.ರಂಗರಾಜು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ರೈತ ದಸರಾದಲ್ಲಿ ಹಳ್ಳಿ ಸೊಬಗು

ಇನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ಕೃಷಿ ಸಚಿವರಾದ ಬಿ‌.ಸಿ.ಪಾಟೀಲ್ ಅವರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರೈತ ದಸರಾಗೆ ಚಾಲನೆ ನೀಡಿದ್ದರು. ನಂದಿ ಪೂಜೆ ನೆರವೇರಿಸಿ, ನಗಾರಿ ಬಾರಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಸಚಿವ ಸೋಮಶೇಖರ್ ಅವರು, ಪ್ರತಿ ತಾಲೂಕಿನಲ್ಲಿ ರೈತ ದಸರಾ ಆಚರಿಸಲಾಗುತ್ತಿದೆ ಎಂದು ಹೇಳಿದರು.

Mysuru dasara 2022: 45 couples Mysure rounds in Tonga

ಕೃಷಿಕರ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುವ ಸಚಿವ ಬಿ‌.ಸಿ.ಪಾಟೀಲ್ ಅವರು, "ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ಮೂಲಕ ರೈತರ ಕಷ್ಟಸುಖಗಳನ್ನು ಆಲಿಸಲಿದ್ದಾರೆ. ಇದರ ಜೊತೆಗೆ ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ," ಎಂದರು.

ನಂತರ ಸಚಿವರು ಎತ್ತಿನಗಾಡಿಯಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು, ಪೂರ್ಣಕುಂಭ, ಗಿರಿಜನ ನೃತ್ಯ, ಕೀಲುಗೊಂಬೆ, ಮಂಗಳವಾದ್ಯ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಪ್ರಕಾರದ ಜಾನಪದ ಕಲಾತಂಡಗಳು ಭವ್ಯ ಮೆರವಣಿಗೆಯಲ್ಲಿ ಸಾಗಿದವು.

ಗ್ರಾಮೀಣ ದಸರಾ ಕಾರ್ಯಕ್ರಮದ ಮೆರಗು

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದಲ್ಲಿ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮವು ಸಂಭ್ರಮ, ಸಡಗರದಿಂದ ನೆರವೇರಿತ್ತು. ಗ್ರಾಮೀಣ ದಸರಾಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದ್ದರು. ದಾರಿಪುರ ಗ್ರಾಮದ ಕರೂರು ಬಸವೇಶ್ವರ ದೇವಸ್ಥಾನದ ಬಳಿ ದೇವರ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದರು‌. ಬಳಿಕ ಮಾತನಾಡಿದ್ದ ಅವರು, ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಗ್ರಾಮೀಣ ದಸರಾ ಅಚರಣೆ ಮಾಡಲಾಗುತ್ತಿದೆ‌. ಕೋವಿಡ್ ಕಾರಣದಿಂದಾಗಿ ಕಳೆದ‌ ಎರಡು ವರ್ಷದಿಂದ ದಸರಾ ಆಚರಣೆಗೆ‌ ತೊಡಕಾಗಿದ್ದು, ಈ ಬಾರಿ ಅದ್ಧೂರಿ‌ ದಸರಾ‌ ಮಾಡಲಾಗುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ತಿಳಿಸಿದ್ದರು.

English summary
Mysure dasara 2022: 45 couples in traditional attire visited heritage buildings of Mysuru in Tonga, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X