ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ.13ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭ: ವಿಜೇತರ ಪಟ್ಟಿ ಇಲ್ಲಿದೆ

|
Google Oneindia Kannada News

ಮೈಸೂರು, ಅಕ್ಟೋಬರ್ 12: ಕೊರೊನಾ ಕಾರಣದಿಂದ ಈ ಬಾರಿ ಮೈಸೂರು ದಸರಾ ಅದ್ಧೂರಿಯಲ್ಲದಿದ್ದರೂ, ಸರಳ ಹಾಗೂ ಸುಂದರವಾಗಿ ಆರಂಭವಾಗಿದೆ. ಮೈಸೂರು ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಕೆಲವೇ ಜನರಿಗೆ ಮಾತ್ರ ನೇರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಉಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಕಣ್ತುಂಬಿಕೊಳ್ಳಬಹುದು.

ಇದೇ ಸಂದರ್ಭದಲ್ಲಿ ಮೊದಲ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 13ರಂದು (ಬುಧವಾರ) ಮೈಸೂರು ಅರಮನೆ ಆವರಣದಲ್ಲಿ ನಡೆಯಲಿದೆ.

ಮೈಸೂರು ಜಿಲ್ಲಾಡಳಿತವು ಜೂನ್ 4 ರಂದು ಮೈಸೂರು ಸಂಸ್ಥಾನದ ಆಡಳಿತಗಾರ ದಿವಂಗತ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಸಂದರ್ಭದಲ್ಲಿ ವಿಜೇತರ ಹೆಸರನ್ನು ಘೋಷಿಸಿದೆ.

Mysuru Dasara 2021: Nalwadi Krishnaraja Wodeyar Award Ceremony on October 13th

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ 12 ವ್ಯಕ್ತಿಗಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಮಾಜಿ ಸಚಿವ ಹಾಗೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಎಸ್.ಎ. ರಾಮದಾಸ್ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಚಿಂತಕ ಹಾಗೂ ಹಾಸ್ಯ ಭಾಷಣಕಾರ ಪ್ರೊ. ಕೃಷ್ಣೇಗೌಡ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ. ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಡಳಿತದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Mysuru Dasara 2021: Nalwadi Krishnaraja Wodeyar Award Ceremony on October 13th

ವಿಜೇತರ ಪಟ್ಟಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ವಿಜೇತರಲ್ಲಿ ಜಿ.ಎಸ್. ಜಯದೇವ (ಶಿಕ್ಷಣ, ಚಾಮರಾಜನಗರ), ಈಚನೂರು ಕುಮಾರ್ (ಆಡಳಿತಗಾರರ ಇತಿಹಾಸ, ಮೈಸೂರು), ಶಂಕರೇ ಗೌಡ (ಔಷಧ, ಮಂಡ್ಯ), ಸುಕನ್ಯಾ ಪ್ರಭಾಕರ್ (ಸಂಗೀತ), ಆಮ್ಶಿ ಪ್ರಸನ್ನ ಕುಮಾರ್ (ಪತ್ರಿಕೋದ್ಯಮ), ಹನಸೋಗೆ ಸೋಮಶೇಖರ್ (ನಾಲ್ವಡಿ ಸಾಹಿತ್ಯ), ಜೇನಹಳ್ಳಿ ಸಿದ್ದಲಿಂಗಪ್ಪ (ಜಾನಪದ), ಕಿರಗನೂರು ರಾಜಪ್ಪ (ರಂಗಭೂಮಿ), ಗುರುರಾಜ್ (ಮಹದೇಶ್ವರ ಮಂಟೇಸ್ವಾಮಿ ಗಾಯಕ), ಅರುಣ್ ಯೋಗಿರಾಜ್ (ಶಿಲ್ಪಕಲೆ), ರಾಜೇಂದ್ರ (ಅನ್ನ ದಾಸೋಹ) ಮತ್ತು ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ಸಂಘಟನೆ).

ಜಂಬೂಸವಾರಿ ಮೆರವಣಿಗೆಗೆ ದಿನಗಣನೆ
ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ನಾಡಹಬ್ಬ ದಸರೆಯ ಸಂಭ್ರಮ ಕಳೆಕಟ್ಟಿದ್ದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ದಸರಾ ಜಂಬೂಸವಾರಿ ಮೆರವಣಿಗೆಯ ತಾಲೀಮು ನಡೆಸಲಾಯಿತು.

ಅ.15ರಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆಯ ಪೂರ್ವಭಾಗಿಯಾಗಿ ಅರಮನೆ ಅಂಗಳದಲ್ಲಿ ಸೋಮವಾರ ಬೆಳಗ್ಗೆ ನಡೆದ ಜಂಬೂಸವಾರಿ ತಾಲೀಮಿನಲ್ಲಿ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸದೆ ರಿಹರ್ಸಲ್ ನಡೆಸಲಾಯಿತು.

ಸದ್ಯ ದಸರಾ ಸಂಭ್ರಮ ವಿದ್ಯುದ್ದೀಪದ ಬೆಳಕಿಗೆ ಸೀಮಿತವಾಗಿರುವುದರಿಂದ ಸಂಜೆಯಾಗುತ್ತಿದ್ದಂತೆಯೇ ಮನೆ ಮಂದಿಯೆಲ್ಲಾ ಒಟ್ಟಾಗಿ ನಗರ ಪ್ರದಕ್ಷಿಣೆ ಹೊರಡುವುದು ಕಾಣಿಸುತ್ತಿದೆ. ಮನೆಗಳು, ಕಟ್ಟಡಗಳು, ವೃತ್ತಗಳು ರಸ್ತೆಗಳು ವಿದ್ಯುದ್ದೀಪಗಳಿಂದ ಮಿಂಚುವುದನ್ನು ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

ಅರಮನೆ ಆವರಣಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ
ಅರಮನೆ ಆವರಣಕ್ಕಷ್ಟೇ ಈ ಬಾರಿ ಜಂಬೂಸವಾರಿ ಸೀಮಿತವಾಗಿರುವುದರಿಂದ ಮತ್ತು ಅರಮನೆ ಆವರಣಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಕಾರಣದಿಂದ ಅಲ್ಲಿ ನಾಡಹಬ್ಬದ ರಂಗು ಯಾವ ರೀತಿಯಲ್ಲಿ ಕಳೆಕಟ್ಟಿದೆ. ಏನೆಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬುದೇ ಗೊತ್ತಾಗದಂತಾಗಿದೆ. ಈ ಹಿಂದೆ ಕೊರೊನಾ ಬರುವುದಕ್ಕಿಂತ ಮೊದಲು ಸುಮಾರು ಹದಿನೈದಕ್ಕೂ ಹೆಚ್ಚು ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದವು. ಅವುಗಳನ್ನು ಪ್ರತಿದಿನ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸುಮಾರು ಐದು ಕಿ.ಮೀ.ನಷ್ಟು ದೂರ ನಡೆಸಿಕೊಂಡು ಬರುವ ಮೂಲಕ ತಾಲೀಮು ನಡೆಸಲಾಗುತ್ತಿತ್ತು. ಈ ದೃಶ್ಯಗಳನ್ನು ನೋಡಲು ಜನ ರಸ್ತೆಗಳಲ್ಲಿ ನೆರೆಯುತ್ತಿದ್ದರು. ಆದರೆ ಕಳೆದ ವರ್ಷದಿಂದ ಗಜಪಡೆಯನ್ನು ನೋಡುವ ಭಾಗ್ಯ ಸಾರ್ವಜನಿಕರಿಗೆ ಇಲ್ಲದಾಗಿದೆ.

English summary
Mysuru Dasara 2021: The first Nawladi Krishnaraja Wodeyar Award Ceremony will be held at the Mysuru Palace premises on October 13 (Wednesday).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X