ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ; ಕ.ರಾ.ರ.ಸಾ. ನಿಗಮದ ಪ್ರವಾಸಿ ಪ್ಯಾಕೇಜ್

|
Google Oneindia Kannada News

ಮೈಸೂರು, ಅಕ್ಟೋಬರ್ 07; 2021ರ ದಸರಾ ಮಹೋತ್ಸವಕ್ಕೆ ಗುರುವಾರ ಚಾಲನೆ ಸಿಗಲಿದೆ. ಅಕ್ಟೋಬರ್ 7ರಿಂದ 15ರ ತನಕ ಸರಳವಾಗಿ ಈ ಬಾರಿಯ ಮೈಸೂರು ದಸರಾ ನಡೆಯಲಿದೆ. ಪ್ರತಿ ವರ್ಷದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ.

ಇಂದು ಬೆಳಗ್ಗೆ ಬೆಳಗ್ಗೆ 8.15ರಿಂದ 8.45ರ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ 2021ನೇ ಸಾಲಿನ ದಸರಾವನ್ನು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಉದ್ಘಾಟನೆ ಮಾಡಲಿದ್ದಾರೆ. ಅರಮನೆ ಆವರಣದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಸಂಜೆ ಆರಂಭವಾಗಲಿವೆ.

ಮೈಸೂರು ದಸರಾ ಉದ್ಘಾಟನೆ: ಹೇಗಿದೆ ಸಿದ್ಧತೆ?ಮೈಸೂರು ದಸರಾ ಉದ್ಘಾಟನೆ: ಹೇಗಿದೆ ಸಿದ್ಧತೆ?

ಗುರುವಾರ ಸಂಜೆ ದಸರಾ ಅಂಗವಾಗಿ ಮೈಸೂರು ನಗರದಲ್ಲಿ ಮಾಡಿರುವ ವಿದ್ಯುತ್ ದೀಪಾಲಂಕಾರದ ವೀಕ್ಷಣೆಗೆ ಚಾಲನೆ ದೊರೆಯಲಿದೆ. ಅತ್ಯಂತ ಆಕರ್ಷಣಿಯ ಹಾಗೂ ವಿನೂತನ ರೀತಿಯಲ್ಲಿ ಈ ಬಾರಿ ದಸರಾ ದೀಪಾಲಂಕಾರ ಮಾಡಲಾಗಿದೆ. ಪ್ರತಿ ದಿನ ಸಂಜೆ 6.30 ರಿಂದ ರಾತ್ರಿ 9.30 ಗಂಟೆಯವರೆಗೆ ದೀಪಗಳನ್ನು ಬೆಳಗಿಸಲಾಗುತ್ತದೆ.

ಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯ

ದಸರಾ ಆರಂಭವಾಗುತ್ತಿದ್ದಂತೆ ಸಾವಿರಾರು ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಮೈಸೂರು ಮತ್ತು ಸುತ್ತಮುತ್ತಲ ಪ್ರವಾಸಿ ತಾಣಗಳನ್ನು ನೋಡಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಸರಾ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ.

ಮೈಸೂರು ದಸರಾ; ದೀಪಾಲಂಕಾರ ಕಣ್ತುಂಬಿಕೊಳ್ಳಲು ನಿಯಮಗಳು ಮೈಸೂರು ದಸರಾ; ದೀಪಾಲಂಕಾರ ಕಣ್ತುಂಬಿಕೊಳ್ಳಲು ನಿಯಮಗಳು

ಅಕ್ಟೋಬರ್ 9ರಿಂದ ಆರಂಭ

ಅಕ್ಟೋಬರ್ 9ರಿಂದ ಆರಂಭ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರತಿ ವರ್ಷದಂತೆ ಈ ವರ್ಷವು ಸಹ ಪ್ರವಾಸಿಗರ ಅನೂಕೂಲಕ್ಕಾಗಿ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಟೂರ್ ಪ್ಯಾಕೇಜ್ ವ್ಯವಸ್ಥೆ ಮಾಡಿದೆ. ಅಕ್ಟೋಬರ್ 9 ರಿಂದ 24ರ ತನಕ ಗಿರಿ ದರ್ಶನಿ, ದೇವ ದರ್ಶಿನಿ, ಜಲದರ್ಶನಿ ಪ್ಯಾಕೇಜ್‌ಗಳ ಮೂಲಕ ಜನರು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಪ್ಯಾಕೇಜ್ ಟೂರ್‌ಗಳಿಗೆ ಪ್ರಯಾಣಿಕರು ಮುಂಗಡವಾಗಿ ಆಸನ ಕಾಯ್ದಿರಿಸುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

ಗಿರಿ ದರ್ಶಿನಿ ಟೂರ್ ಪ್ಯಾಕೇಜ್

ಗಿರಿ ದರ್ಶಿನಿ ಟೂರ್ ಪ್ಯಾಕೇಜ್

ಗಿರಿ ದರ್ಶಿನಿ ಟೂರ್ ಪ್ಯಾಕೇಕ್ ಆಯ್ಕೆ ಮಾಡಿದರೆ ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಿಂದ ಬೆಳಗ್ಗೆ 6.30ಕ್ಕೆ ಬಸಗ ಹೊರಡಲಿದೆ. ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿಬೆಟ್ಟ ಸೇರಿದಂತೆ ಒಟ್ಟು 325 ಕಿ. ಮೀ. ಪ್ಯಾಕೇಜ್ ಇದು ಒಳಗೊಂಡಿದೆ. ಈ ಪ್ಯಾಕೇಜ್‌ಗೆ ದೊಡ್ಡವರಿಗೆ 350 ರೂ. ಮತ್ತು ಮಕ್ಕಳಿಗೆ 175 ರೂ. ದರವನ್ನು ನಿಗದಿ ಮಾಡಲಾಗಿದೆ.

ಜಲ ದರ್ಶಿನಿ ಪ್ಯಾಕೇಜ್ ವಿವರ

ಜಲ ದರ್ಶಿನಿ ಪ್ಯಾಕೇಜ್ ವಿವರ

ಜಲ ದರ್ಶಿನಿ ಪ್ಯಾಕೇಜ್ ಅಡಿ ಜಲಪಾತ, ಡ್ಯಾಂಗಳನ್ನು ವೀಕ್ಷಣೆ ಮಾಡಬಹುದು. ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಿಂದ ಬೆಳಗ್ಗೆ 6.30ಕ್ಕೆ ಬಸ್ ನಿರ್ಗಮಿಸಿ ಗೋಲ್ಡನ್ ಟೆಂಪಲ್, ನಿಸರ್ಗಧಾಮ, ದುಬಾರೆ ಅರಣ್ಯ, ಚಿಕ್ಲಿಹೊಳೆ ಡ್ಯಾಂ, ರಾಜಸೀಟ್, ಅಭಿ ಜಲಪಾತ, ಹಾರಂಗಿ ಜಲಾಶಯ, ಕೆಆರ್‌ಎಸ್ ಸೇರಿ ಒಟ್ಟು 350 ಕಿ. ಮೀ. ಸಂಚರ ನಡೆಸಲಿದೆ. ಪ್ಯಾಕೇಜ್ ಟೂರ್ ದರ ದೊಡ್ಡವರಿಗೆ 400 ರೂ. ಮತ್ತು ಮಕ್ಕಳಿಗೆ 200 ರೂ. ಆಗಿದೆ.

ದೇವ ದರ್ಶಿನಿ ಪ್ಯಾಕೇಜ್

ದೇವ ದರ್ಶಿನಿ ಪ್ಯಾಕೇಜ್

ಮೈಸೂರು ಮತ್ತು ಸುತ್ತಮುತ್ತಲಿನ ದೇವಾಲಯಗಳನ್ನು ನೋಡಲು ದೇವ ದರ್ಶಿನಿ ಪ್ಯಾಕೇಜ್ ಸಿದ್ಧಗೊಳಿಸಲಾಗಿದೆ. ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಿಂದ ಬೆಳಗ್ಗೆ 6.30ಕ್ಕೆ ಬಸ್ ನಿರ್ಗಮಿಸಿ ನಂಜನಗೂಡು, ತಲಕಾಡು, ಬ್ಲಫ್, ಮೂಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್‌ಎಸ್ ಸೇರಿದಂತೆ 250 ಕಿ. ಮೀ. ಬಸ್ ಸಂಚರಿಸಲಿದೆ. ಪ್ಯಾಕೇಜ್ ಟೂರ್ ದರ ದೊಡ್ಡವರಿಗೆ 275 ರೂ. ಮತ್ತು ಮಕ್ಕಳಿಗೆ 140 ರೂ. ಆಗಿದೆ.

ಮುಂಗಡ ಟಿಕೆಟ್ ಬುಕ್ ಮಾಡಿ

ಮುಂಗಡ ಟಿಕೆಟ್ ಬುಕ್ ಮಾಡಿ

ಪ್ಯಾಕೇಜ್ ಟೂರ್‌ಗಳಲ್ಲಿ ಸಂಚಾರ ನಡೆಸುವ ಜನರು ಮುಂಗಡವಾಗಿ ಆಸನ ಕಾಯ್ದಿರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಿಗಮದ ಮೈಸೂರು ಕೇಂದ್ರಿಯ ಬಸ್ ನಿಲ್ದಾಣ ಮತ್ತು ಕೆ. ಎಸ್. ಆರ್. ಟಿ. ಸಿ ಖಾಸಗಿ ಅವತಾರ್ ಬುಕ್ಕಿಂಗ್ ಕೌಂಟರ್ ಹಾಗೂ ಆನ್‌ಲೈನ್ ಮುಖಾಂತರ ಮುಂಗಡ ಆಸನ ಕಾಯ್ದಿರಿಸಬಹುದು ಎಂದು ಮೈಸೂರು ಗ್ರಾಮೀಣ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹೇಳಿದ್ದಾರೆ.

English summary
The Karnataka State Road Transport Corporation announced Mysuru dasara tour package 2021. People can visit tourism spot in this package from October 9 to 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X