ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆ ಆವರಣದಲ್ಲಿ ಪೊಲೀಸ್ ಬ್ಯಾಂಡ್ ನಿನಾದ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 23: ಝಗಮಗಿಸುವ ಹೊಂಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಮೈಸೂರು ಅರಮನೆಯ ಆವರಣದಲ್ಲಿ ಅಲೆ ಅಲೆಯಾಗಿ ತೇಲಿಬಂದ ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ವಾದ್ಯ ಸಂಗೀತ ಸುಧೆಗೆ ಕೇಳುಗರು ಮನಸೋತರು.

ನಾಡಹಬ್ಬ ದಸರಾ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ನಡೆದ ಪೊಲೀಸ್ ಬ್ಯಾಂಡ್ ಸಮೂಹ ವಾದ್ಯಮೇಳದಲ್ಲಿ ಶಿಸ್ತುಬದ್ಧವಾಗಿ ನುಡಿಸಿದ ಪೊಲೀಸ್ ವಾದ್ಯವೃಂದ ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.

ದಸರಾ ಮಹೋತ್ಸವ: ವರ್ಚುವಲ್ ಮೂಲಕ ಲಕ್ಷಾಂತರ ಜನರನ್ನು ಆಕರ್ಷಿಸಿದ ಕಾರ್ಯಕ್ರಮಗಳುದಸರಾ ಮಹೋತ್ಸವ: ವರ್ಚುವಲ್ ಮೂಲಕ ಲಕ್ಷಾಂತರ ಜನರನ್ನು ಆಕರ್ಷಿಸಿದ ಕಾರ್ಯಕ್ರಮಗಳು

ಮೊದಲಿಗೆ ಬಸವಪ್ಪ ಶಾಸ್ತ್ರಿ ಅವರ ರಚನೆಯ "ಕಾಯೋ ಶ್ರೀ ಗೌರಿ' ಗೀತೆಯನ್ನು ನುಡಿಸಿದರು. ನಂತರ ಜಯಚಾಮರಾಜೇಂದ್ರ ಒಡೆಯರ್ ಅವರ ರಚನೆಯ ಆಠಾಣ ರಾಗ ಸಂಯೋಜನೆಯ ಆದಿತಾಳದಲ್ಲಿ "ಶ್ರೀ ಮಹಾಗಣಪತಿಂ' ಗೀತೆ ನುಡಿಸಿದರು. ಬಳಿಕ ಇಮ್ಯಾನುಯೆಲ್ ಫ್ರಾನ್ಸಿಸ್ ಮತ್ತು ಟೋನಿ ಮ್ಯಾಥ್ಯೂ ತಂಡದಿಂದ ವಯೊಲಿನ್, ಪಿಯಾನೊ ವಾದನ ಕಂಡು ಪ್ರೇಕ್ಷಕರು ಪರವಶರಾದರು.

Mysuru Dasara 2020: Police Band Mesmerises Public At Mysuru Palace

ಕರ್ನಾಟಕ ವಾದ್ಯವೃಂದದವರು ಆದಿಶಂಕರಚಾರ್ಯರು ರಚಿಸಿದ "ಐಗಿರಿ ನಂದಿನಿ' ಗೀತೆಯನ್ನು ಪುನ್ನಾಗವರಾಳಿ ರಾಗದಲ್ಲಿ ಆದಿತಾಳ ರಾಗದಲ್ಲಿ ಪ್ರಸ್ತುತ ಪಡಿಸಿದರು. ಆಪ್ತಮಿತ್ರ ಚಲನಚಿತ್ರ ಗೀತೆಯಾದ "ಕಣಕಣದೆ ಶಾರದೆ' ಹಾಡು ಹಾಗೂ ಶಂಕರಾಭರಣ ರಾಗದಲ್ಲಿ ಮುತ್ತತ್ಯ ಭಾಗವತ್ ರಚನೆಯ "ನೋಟು ಸ್ವರ' ಭಾಗ್ಯದ ಲಕ್ಷ್ಮೀ ಬಾರಮ್ಮ.. ನುಡಿಸುವ ಮೂಲಕ ಮೋಡಿ ಮಾಡಿದರು.

ಆಂಗ್ಲ ವಾದ್ಯವೃಂದವರು ಟೋನಿ ಮ್ಯಾಥ್ಯೂ ಸಂಯೋಜನೆಯ ಫೈನಲ್ ಕಾಂಟ್ ಡೌನ್, ಕೃಷ್ಟೊಫರ್ ಪ್ರಾನ್ಸಿಸ್ ಸಂಯೋಜನೆಯ ಸೆರನಡ್ ಗೀತೆ, ಬಿಥೊವೆನ್ಸ್ ಪಿಯಾನೋ ಸೋಲೊ, ಜಯ ಹೋ', ಟೋನಿ ಮ್ಯಾಥ್ಯೂ ಸಂಯೋಜನೆಯ ಬಿಲಿವರ್ ಹಾಗೂ ಲೇ ಆನ್ ಯುವರ್ ಲವ್ ಗೀತೆಗಳನ್ನು ನುಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಇದೇ ವೇಳೆ ಹಲವಾರು ಸುಪ್ರಸಿದ್ಧ ಕೃತಿಗಳನ್ನು ಪ್ರಸ್ತುತ ಪಡಿಸಿದ ಕರ್ನಾಟಕ ಹಾಗೂ ಆಂಗ್ಲ ವಾದ್ಯವೃಂದವರಿಗೆ ನೆರೆದಿದ್ದ ಪ್ರಶಸ್ತಿ ಪ್ರದಾನ ಮಾಡಲಾಯಿತು.

English summary
As part of Dasara, the police band Playing in the Mysuru Palace premises in a disciplined manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X