ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ಉತ್ಸವವನ್ನು ಮೊಬೈಲ್‌ನಿಂದಲೇ ಲೈವ್‌ ಆಗಿ ನೋಡಿ

|
Google Oneindia Kannada News

ಮೈಸೂರು, ಅಕ್ಟೋಬರ್ ೦2 : ಜಗತ್ತಿನ ಎಲ್ಲೇ ಕುಳಿತಿದ್ದರು ಈ ಬಾರಿಯ ದಸರಾ ಸಂಭ್ರಮವನ್ನು ಲೈವ್ ಆಗಿ ಮೊಬೈಲ್‌ನಿಂದಲೇ ಕಣ್ತುಂಬಿಕೊಳ್ಳುವ ಅವಕಾಶವನ್ನು ಮೈಸೂರು ಜಿಲ್ಲಾಡಳಿತ ಮಾಡಿಕೊಟ್ಟಿದೆ.

ಈಗಾಗಲೇ ಮೈಸೂರು ದಸರಾ ವೆಬ್‌ಸೈಟ್‌ಗೆ ಚಾಲನೆ ನೀಡಲಾಗಿದ್ದು, ದಸರಾ ಉತ್ಸವವನ್ನು ಫೇಸ್‌ಬುಕ್‌ ಲೈವ್ ಸಹ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈಗಾಗಲೇ ಕೆಲವು ಪ್ರಮುಖ ಆಚರಣೆಗಳ, ತಾಲೀಮುಗಳು ಲೈವ್‌ ವಿಡಿಯೋವನ್ನು ಪ್ರಸಾರ ಸಹ ಮಾಡಲಾಗಿದೆ.

ಮೈಸೂರು ದಸರಾ 2018 ಎಂಬ ಫೇಸ್‌ಬುಕ್ ಪೇಜ್ ತೆರೆಯಲಾಗಿದ್ದು, ಈ ಬಾರಿಯ ಮೈಸೂರು ದಸೆರಯ ಮಾಹಿತಿಯನ್ನು, ಚಿತ್ರಗಳನ್ನು ಇದರಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ಫೇಸ್‌ಬುಕ್‌ ಪುಟದಲ್ಲಿ ದಸರಾ ಉತ್ಸವದ ಲೈವ್ ವಿಡಿಯೋ ಸಹ ಪ್ರಸಾರವಾಗಲಿದೆ.

ನಾಡಹಬ್ಬ ವೀಕ್ಷಿಸಲು ರಾಯಲ್ ಎಂಟ್ರಿಯ ಗೋಲ್ಡನ್ ಕಾರ್ಡ್ ಬಿಡುಗಡೆ ನಾಡಹಬ್ಬ ವೀಕ್ಷಿಸಲು ರಾಯಲ್ ಎಂಟ್ರಿಯ ಗೋಲ್ಡನ್ ಕಾರ್ಡ್ ಬಿಡುಗಡೆ

ಮೈಸೂರು ದಸರಾ ವೆಬ್‌ಸೈಟ್‌ಗೆ ಚಾಲನೆ ದೊರೆತ ದಿನದಿಂದ ಇಲ್ಲಿಯವರೆಗೂ 40 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಈ ಪೈಕಿ ಶೇ.50ಕ್ಕೂ ಹೆಚ್ಚು ಮಂದಿ ತಮ್ಮ ಮೊಬೈಲ್‌ ಮೂಲಕವೇ, ಅಂತರ್ಜಾಲಕ್ಕೆ ಭೇಟಿ ನೀಡಿರುವುದು ವಿಶೇಷ !

Mysuru Dasara 2018 Facebook live video social media

ರಾಜ್ಯದ ಜನರಷ್ಟೇ ಅಲ್ಲದೇ ವಿದೇಶಿಗರೂ ಸಹ ಹೆಚ್ಚಾಗಿ ಈ ವೆಬ್‌ಸೈಟ್‌ನಿಂದ ದಸರಾ ಬಗ್ಗೆ ಮಾಹಿತಿ ಪಡೆದಿರುವುದು ಗಮನಾರ್ಹ. ಅ.10 ರಿಂದ 19ರವರೆಗೆ ಮೈಸೂರು ದಸರಾ ನಡೆಯಲಿದ್ದು, ಉತ್ಸವಕ್ಕೆ 8 ದಿನ ಬಾಕಿ ಉಳಿದಿದೆ. ದಸರಾ ಆಚರಣೆಗೆ ಹೆಚ್ಚು ಪ್ರಚಾರ ನೀಡುವ ಸಲುವಾಗಿ ಜಿಲ್ಲಾಡಳಿತ ಮೈಸೂರು ದಸರಾ ಹೆಸರಿನಲ್ಲಿ ಅಧಿಕೃತವಾಗಿ ವೆಬ್‌ಸೈಟ್‌ ಆರಂಭಿಸಿದೆ. ಈಗಾಗಲೇ ಈ ಮಾಹಿತಿ ತಾಣದಲ್ಲಿ ದಸರಾ ಚಟುವಟಿಕೆಗಳು, ಮೈಸೂರಿನ ಇತಿಹಾಸ, ಹಿಂದಿನ ದಸರಾ ವೈಭವವನ್ನು ಸಾರುವ ಛಾಯಾಚಿತ್ರಗಳು ರಾರಾಜಿಸುತ್ತಿವೆ.

ದಸರಾ ಯುವ ಸಂಭ್ರಮದಲ್ಲಿ ಮಹದೇಶ್ವರನ ಹಾಡಿಗೆ ಹೆಜ್ಜೆ ಹಾಕಿದ ಜಿಟಿಡಿದಸರಾ ಯುವ ಸಂಭ್ರಮದಲ್ಲಿ ಮಹದೇಶ್ವರನ ಹಾಡಿಗೆ ಹೆಜ್ಜೆ ಹಾಕಿದ ಜಿಟಿಡಿ

ಗಜಪಡೆಯು ಕಾಡಿನಿಂದ ನಾಡಿಗೆ ಗಜಪಯಣದ ಮೂಲಕ ಆಗಮಿಸಿದ ದಿನವೇ ಈ ವೆಬ್‌ಸೈಟ್‌ ಆರಂಭವಾಗಿದೆ. ಹೀಗೆ ವೆಬ್‌ಸೈಟ್‌ ಸಂಪರ್ಕಿಸಿದವರು ಹೆಚ್ಚಾಗಿ ಈ ಬಾರಿಯ ವಿಶೇಷಗಳೇನು ಎಂಬ ವಿಷಯದ ಮೇಲೆ ಕ್ಲಿಕ್‌ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಈ ಪೈಕಿ ಶೇ. 50ರಷ್ಟು ಮೊಬೈಲ್‌, ಶೇ. 10ರಷ್ಟು ಟ್ಯಾಬ್ಲೆಟ್‌, ಮಿಕ್ಕಿದ್ದು ಡೆಸ್ಕ್‌ಟಾಪ್‌ ಬಳಕೆದಾರರಾಗಿದ್ದಾರೆ.

ವರ್ಣಮಯ ಮೈಸೂರು ಯುವ ದಸರಾಗೆ ಭಾನುವಾರ ಚಾಲನೆ ವರ್ಣಮಯ ಮೈಸೂರು ಯುವ ದಸರಾಗೆ ಭಾನುವಾರ ಚಾಲನೆ

ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿಯೂ ಪ್ರತ್ಯೇಕವಾಗಿ 'ಮೈಸೂರು ದಸರಾ' ಹೆಸರಿನಲ್ಲಿ ಪೇಜ್‌ ತೆರೆಯಲಾಗಿದೆ. 25, 000 ಮಂದಿ ಈ ಪೇಜ್‌ ಅನ್ನು ಫಾಲೊ ಮಾಡುತ್ತಿದ್ದಾರೆ. ಇಲ್ಲಿಯೂ ದಸರಾ ಮಹೋತ್ಸವದ ಕುರಿತ ಮಾಹಿತಿಯನ್ನು ನಿತ್ಯವೂ ಅಪ್‌ಡೇಟ್‌ ಮಾಡಲಾಗುತ್ತಿದೆ. ಹಾಗಾಗಿ ಕ್ಷಣ ಕ್ಷಣಕ್ಕೂ ಫೇಸ್‌ಬುಕ್‌ನಲ್ಲಿ ಈ ಪೇಜ್‌ ವೀಕ್ಷಿಸುವವರ ಸಂಖ್ಯೆ ಸಾಗರೋಪಾದಿಯಲ್ಲಿ ಬೆಳೆಯುತ್ತಿದೆ. ಅಲ್ಲದೇ ಈ ಬಾರಿ ದಸರೆಯ ಪ್ರತಿಯೊಂದು ಮಾಹಿತಿ, ಗಜಪಡೆಯ ದಿನನಿತ್ಯದ ವಾಕಿಂಗ್ ಎಲ್ಲವನ್ನೂ ಲೈವ್ ನಲ್ಲಿ ನೀಡಲಾಗುತ್ತಿದೆ.
.
ವಿಶ್ವ ಮಾನ್ಯತೆಯ ಮೈಸೂರು ದಸರಾ ಆಚರಣೆಗೆ ಹೆಚ್ಚು ಪ್ರಚಾರ ಒದಗಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಮೈಸೂರು ದಸರಾ ವೆಬ್‌ಸೈಟ್‌ ತೆರೆಯಲಾಗಿದ್ದು, ಈಗಾಗಲೆ ಸಾರ್ವಜನಿಕರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

English summary
Mysuru district administration decided to broadcast mysuru dasara 2018 through Facebook live video. people can any where can see Mysuru Dasara 2018 live from there mobile phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X