ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವೇಶ್ಯಾವಾಟಿಕೆಗೆ ನೂಕಿದ ಕ್ರೂರಿ

|
Google Oneindia Kannada News

ಮೈಸೂರು, ಫೆಬ್ರವರಿ 14: ಯುವತಿಯೊಬ್ಬರನ್ನು ಮದುವೆಯಾಗಿ ನಂಬಿಸಿ ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಿದ ಪ್ರಕರಣವೊಂದನ್ನು ಮೈಸೂರು ಅಪರಾಧ ಪತ್ತೆ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಸಂಬಂಧ ಬೆಂಗಳೂರಿನ ಬಂಡೆ ಬೊಮ್ಮಸಂದ್ರದ ಎಂ.ನಾಗೇಶ್ (29), ಪಾಂಡವಪುರ ಕಡತನಾಳು ಗ್ರಾಮದ ಎನ್.ಸಂಜಯ್ (32), ತುಮಕೂರಿನ ಇಮ್ರಾನ್ (38), ಶ್ರೀರಂಗಪಟ್ಟಣದ ನಜೀರ್ ಅಹಮ್ಮದ್ (49) ಅವರನ್ನು ಬಂಧಿಸಿ, ಯುವತಿಯನ್ನು ರಕ್ಷಿಸಲಾಗಿದೆ.

ಮನೆಯಲ್ಲೇ ವೇಶ್ಯಾವಾಟಿಕೆ, 4 ಯವತಿಯರನ್ನು ರಕ್ಷಿಸಿದ ಮಂಗಳೂರು ಪೊಲೀಸರುಮನೆಯಲ್ಲೇ ವೇಶ್ಯಾವಾಟಿಕೆ, 4 ಯವತಿಯರನ್ನು ರಕ್ಷಿಸಿದ ಮಂಗಳೂರು ಪೊಲೀಸರು

ಬೆಂಗಳೂರಿನ ನಾಗೇಶ್ ಎಂಬಾತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಮೈಸೂರಿಗೆ ಕರೆ ತಂದು ಸ್ನೇಹಿತರಾದ ಸಂಜಯ್, ಇಮ್ರಾನ್ ನೊಂದಿಗೆ ಸೇರಿಕೊಂಡು ಶ್ರೀರಂಗಪಟ್ಟಣದಲ್ಲಿರುವ ಐಶ್ವರ್ಯ ಲಾಡ್ಜ್ ನ ಮಾಲೀಕ ನಜೀರ್ ಅಹಮ್ಮದ್ ಗೆ ಮಾರಾಟ ಮಾಡಿದ. ನಂತರ, ಆಕೆಯನ್ನು ಮೈಸೂರಿಗೆ ಕರೆ ತಂದ ನಾಗೇಶ್ ಮೈಸೂರಿನಲ್ಲಿ ಮನೆ ಮಾಡಿ ವೇಶ್ಯಾವಾಟಿಕೆ ನಡೆಸಲು ಮುಂದಾಗಿದ್ದ.

Mysuru Crime Investigation Police detected a prostitution network

 ಮೈಸೂರಿನಲ್ಲಿ ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ:ಇಬ್ಬರ ಬಂಧನ ಮೈಸೂರಿನಲ್ಲಿ ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ:ಇಬ್ಬರ ಬಂಧನ

ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ಪೀಪಲ್ಸ್ ಉದ್ಯಾನದಲ್ಲಿ ಕಾರ್ಯಾಚರಣೆ ನಡೆಸಿ, ಯುವತಿಯನ್ನು ರಕ್ಷಿಸಿದರು. ಆರೋಪಿಗಳನ್ನು ಬಂಧಿಸಿದರು. ಬಂಧಿತರಿಂದ 9,300 ನಗದು ಮತ್ತು ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಯಿತು. ಈ ಕುರಿತು ಸಿಸಿಬಿಯ ಆರ್ಥಿಕ ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Mysuru Crime Investigation Police detected a prostitution network. For this reason Four people were arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X