ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಮೈಸೂರಿನಲ್ಲಿ ನೀರಿನ ಬಿಲ್ ಪಾವತಿಗೆ ಆನ್ ಲೈನ್ ವ್ಯವಸ್ಥೆ

|
Google Oneindia Kannada News

ಮೈಸೂರು, ಜೂನ್ 29: ಮೈಸೂರು ಮಹಾನಗರ ಪಾಲಿಕೆ ಹೈಟೆಕ್ ಆಗುವತ್ತ ದಾಪುಗಾಲು ಹಾಕುತ್ತಿದೆ. ಇನ್ನು ಮುಂದೆ ನೀರಿನ ಬಿಲ್ ಪಾವತಿಗಾಗಿ ಜನರು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಆನ್ ಲೈನ್ ಮೂಲಕವೇ ಹಣ ಪಾವತಿಸುವ ವ್ಯವಸ್ಥೆಯನ್ನು ನಗರ ಪಾಲಿಕೆ ಮಾಡಲು ಸಜ್ಜಾಗಿದೆ. ಇದಕ್ಕಾಗಿ 12 ವಿವಿಧ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜೊತೆಗೆ ನಗರ ಪಾಲಿಕೆ ವೆಬ್ ಸೈಟ್ ಮೂಲಕ ಕೂಡ ಬಿಲ್ ಪಾವತಿಸಬಹುದು.

ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ವತಿಯಿಂದ ಪ್ರಸ್ತುತ ಸುಮಾರು 1.56 ಲಕ್ಷ ಗ್ರಾಹಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಗ್ರಾಹಕರು ನೀರಿನ ಬಿಲ್ಲನ್ನು ವಾಣಿವಿಲಾಸ ನೀರು ಸರಬರಾಜು ಕೇಂದ್ರದ 16 ಸೇವಾ ಕೇಂದ್ರಗಳು ಮತ್ತು ಮೈಸೂರು ಒನ್ ಕೇಂದ್ರದ ಮೂಲಕ, ಆಯುಕ್ತರ ಖಾತೆಗೆ ಚೆಕ್, ಡಿಡಿ, ನಗದು ಮುಖಾಂತರ ಪಾವತಿಸುವ ವ್ಯವಸ್ಥೆ ಇತ್ತು. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಶುಲ್ಕವನ್ನು ಗ್ರಾಹಕರು ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ ಪೋರ್ಟಲ್ ಮೂಲಕ ಪಾವತಿಸುವ ಸೌಲಭ್ಯವನ್ನು ಸದ್ಯ ಪ್ರಾರಂಭಿಸಲಾಗಿದೆ.

 ಪೌರಕಾರ್ಮಿಕರಿಗೆ ಇನ್ಮುಂದೆ ಸಿಗಲಿದೆ ಬಿಸಿ ಬಿಸಿ ಟಿಫನ್ ಪೌರಕಾರ್ಮಿಕರಿಗೆ ಇನ್ಮುಂದೆ ಸಿಗಲಿದೆ ಬಿಸಿ ಬಿಸಿ ಟಿಫನ್

ಎನ್ ಪಿಸಿಐನಿಂದ ಸಕ್ರಿಯಗೊಳಿಸುವ ಎಲ್ಲಾ ಡಿಜಿಟಲ್ ಚಾನೆಲ್ ಆದ ಆನ್ ಲೈನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಪಾವತಿ ಹಾಗೂ ಡಿಜಿಟಲ್ ಪೇಮೆಂಟ್ ಆಪ್ ಮೂಲಕ ಕೂಡ ನೀರಿನ ಬಿಲ್ ಪಾವತಿಸಬಹುದು. ಹಾಗೆಯೇ ಗ್ರಾಹಕರಿಗೆ ಆನ್ ಲೈನ್ ಮೂಲಕ ಬಿಲ್ ಪಾವತಿಸುವಾಗ ಯಾವುದೇ ರೀತಿಯ ಸೇವಾ ಶುಲ್ಕ ನಿಗದಿಪಡಿಸಲಾಗುವುದಿಲ್ಲ.

Mysuru corporation water bill payment is now online

ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಸುಮಾರು 65,000 ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಈಗಾಗಲೇ ದಾಖಲು ಮಾಡಿದ್ದಾರೆ. ಸದರಿ ಗ್ರಾಹಕರಿಗೆ ನೀರಿನ ಬಿಲ್ ಬಗ್ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಗ್ರಾಹಕರಿಗೆ ಆನ್ ಲೈನ್ ಮೂಲಕ ಪಾವತಿಸಲು ಅನುವಾಗುವಂತೆ ವೆಬ್ ಲಿಂಕ್ ಅನ್ನು ರವಾನಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಪಾಲಿಕೆಯ ಆನ್ ಲೈನ್ ವ್ಯವಸ್ಥೆಗೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Mysuru corporation water bill payment can be done through online. Around 65 thousand consumers will get sms alert on online bill payment detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X