ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗರೇ ತಕ್ಷಣ ವಾಹನದ ಟಿಂಟೆಡ್ ಗ್ಲಾಸ್ ತೆಗೆಯಿರಿ

By Kiran B Hegde
|
Google Oneindia Kannada News

ಮೈಸೂರು, ಫೆ. 9: ಇಷ್ಟು ದಿನ ಅಂತೂ ಟಿಂಟೆಡ್ ಗ್ಲಾಸ್‌ ಬಳಸುತ್ತ ಓಡಾಡಿಕೊಂಡಿದ್ದ ಮೈಸೂರಿಗರು ಈಗ ತೆಗೆಯಲೇಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ನ್ಯಾಯಾಲಯದಲ್ಲೂ ಹಸಿರು ನಿಶಾನೆ ಸಿಕ್ಕ ಹಿನ್ನೆಲೆಯಲ್ಲಿ ಟಿಂಟೆಡ್ ಗ್ಲಾಸ್ ತೆಗೆಸಲು ಪೊಲೀಸರು ಸಜ್ಜಾಗಿದ್ದಾರೆ.

ಟಿಂಟೆಡ್ ಗ್ಲಾಸ್ ತೆಗೆಯದೆ ನಿಯಮ ಉಲ್ಲಂಘಿಸಿದವರೆಗೆ ಮೊದಲ ಬಾರಿಗೆ 100 ರು., ಎರಡನೇ ಬಾರಿಗೆ 300 ರು. ಹಾಗೂ ಮೂರನೇ ಬಾರಿ ಸಿಕ್ಕಿಬಿದ್ದವರ ಚಾಲನಾ ಪರವಾನಗಿ ರದ್ದು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. [ಷಟ್ಪಥ ರಸ್ತೆ ಇನ್ನೂ ವಿಳಂಬ?]

car

ಈ ಮೊದಲು ವಾಹನ ಚಾಲಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿತ್ತು. ಈಗ ಟೆಂಟೆಡ್ ಗ್ಲಾಸ್ ಹಾಗೂ ಫಿಲ್ಮ್ ಮಾರಾಟಗಾರರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಮೋಟಾರು ವಾಹನ ಕಾಯಿದೆ ಪ್ರಕಾರ ವಾಹನಗಳ ಎದುರಿನ ಗ್ಲಾಸ್ ಶೇ. 70ಕ್ಕಿಂತ ಕಡಿಮೆ ಹಾಗೂ ಕಿಡಕಿಯ ಗ್ಲಾಸ್ ಶೇ. 50ಕ್ಕಿಂತ ಕಡಿಮೆ ಇರುವಂತಿಲ್ಲ. [ಟಿಂಟೆಡ್ ಗ್ಲಾಸ್ ಇದ್ದರೆ ದಂಡ]

"ಕೆಲವು ಮಾರಾಟಗಾರರು ತಮ್ಮ ಹತ್ತಿರ ಇರುವ ಫಿಲ್ಮ್ ಹಾಗೂ ಗ್ಲಾಸ್ ಮಾರುವ ಉದ್ದೇಶದಿಂದ ಹೊಸ ವಾಹನ ಖರೀದಿದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ನಾವು ಕಾರ್ಯಾಚರಣೆ ಆರಂಭಿಸಿ ಪ್ರಕರಣ ದಾಖಲಿಸುವ ಮೊದಲು ಮಾರಾಟಗಾರರು ಟಿಂಟೆಡ್ ಗ್ಲಾಸ್ ಹಾಗೂ ಫಿಲ್ಮ್ ತೆಗೆಯಬೇಕು" ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

English summary
Mysuru police soon may launch a drive against the use of sun-control films and glasses in four-wheeler. First violation will be fined Rs. 100, second time Rs. 200 and third time license will be cancelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X