ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಪ್ರೀತಿಯ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸಬೇಡಿ'

|
Google Oneindia Kannada News

ಮೈಸೂರು, ಫೆಬ್ರವರಿ 13: ನಾಳೆ ಎಲ್ಲೆಡೆ ಪ್ರೇಮಿಗಳ ದಿನಾಚರಣೆ (ವ್ಯಾಲಂಟೇನ್ಸ್ ಡೇ) ಸಂಭ್ರಮ. ಈ ದಿನಾಚರಣೆ ಬಗ್ಗೆ ಹಲವು ಸಂಘಟನೆಗಳು ವಿಭಿನ್ನ ನಿಲುವುಗಳನ್ನು ಹೊಂದಿದೆ. ಈ ಕಾರಣಕ್ಕಾಗಿ ನಗರದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಯುವಕ ಯುವತಿಯರ ಗಮನಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಸೂಚನೆ ನೀಡಿದ್ದಾರೆ.

ಪ್ರೇಮಿಗಳ ದಿನ: ಬೆಂಗಳೂರಲ್ಲಿ ಡಚ್ ಗುಲಾಬಿಗೆ ಹೆಚ್ಚಿದ ಬೇಡಿಕೆಪ್ರೇಮಿಗಳ ದಿನ: ಬೆಂಗಳೂರಲ್ಲಿ ಡಚ್ ಗುಲಾಬಿಗೆ ಹೆಚ್ಚಿದ ಬೇಡಿಕೆ

ಈ ಕುರಿತು ಕಟ್ಟು ನಿಟ್ಟಿನ ಸೂಚನೆ ನೀಡಿರುವ ಪೊಲೀಸ್ ಆಯುಕ್ತರು, ಪ್ರೀತಿಯ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸಬಾರದು. ರೇವ್ ಪಾರ್ಟಿ, ನಂಗಾನಾಚ್ ಮುಂತಾದ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಬಾರದು. ಅಮಲು ತರುವ ಗಾಂಜಾ, ಅಫೀಮು, ಚರಸ್ ಹಾಗೂ ಇತರೆ ಯಾವುದೇ ಮಾದಕ ವಸ್ತುಗಳನ್ನು ಉಪಯೋಗಿಸಬಾರದು. ಪ್ರೇಮಿಗಳ ದಿನಾಚರಣೆ ವಿರೋಧಿಸಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಮಾಡುವ ನೆಪದಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಪ್ರತಿಭಟನೆ ಹಾಗೂ ದಾಳಿ ಮಾಡಬಾರದು ಎಂದು ಎಚ್ಚರಿಸಿದ್ದಾರೆ.

 ಪ್ರೇಮಿಗಳ ದಿನಕ್ಕಾಗಿ ಪ್ರೀತಿಯ ಅರ್ಥ ಸ್ಪುರಿಸುವ ಸಂದೇಶಗಳು ಪ್ರೇಮಿಗಳ ದಿನಕ್ಕಾಗಿ ಪ್ರೀತಿಯ ಅರ್ಥ ಸ್ಪುರಿಸುವ ಸಂದೇಶಗಳು

ನಗರದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಶಾಂತ ರೀತಿಯಲ್ಲಿ ಆಚರಿಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸರಿಗೆ ಸಾರ್ವಜನಿಕರು ಸಹಕರಿಸುವಂತೆ ತಿಳಿಸಿದ್ದಾರೆ.

Mysuru city police commissioner gave an instruction about Valentain day celebration

ಗುಲಾಬಿ ಬೆಲೆ ಗಗನದೆತ್ತರಕ್ಕೆ
ಇತ್ತ ಸಾಂಸ್ಕೃತಿಕ ನಗರಿ ಪ್ರೇಮಿಗಳ ದಿನಾಚರಣೆಗೆ ತಯಾರಿ ನಡೆಸುತ್ತಿದೆ. ಹಲವು ಹೋಟೆಲ್, ರೆಸಾರ್ಟ್ ಗಳು ಹಾಗೂ ಪ್ರವಾಸಿ ತಾಣಗಳು ಜೋಡಿಹಕ್ಕಿಗಳನ್ನು ಸೆಳೆಯಲು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಖಾದ್ಯದ ಪ್ಲಾನ್ ಗಳನ್ನು, ಯೋಜನೆಗಳನ್ನು ಸಿದ್ಧಪಡಿಸಿದ್ದು, ವಿಶೇಷ ರಿಯಾಯಿತಿಗಳನ್ನು ಪ್ರಕಟಿಸಿದೆ.

 ಪ್ರೇಮಿಗಳ ಹಬ್ಬದಂದು ನಗರದಲ್ಲಿ ಪ್ರೇಮಿಗಳ ಹಬ್ಬದಂದು ನಗರದಲ್ಲಿ "ಅಜೀಬ್ ದಾಸ್ತಾನ್" ಸಂಗೀತ ಸಂಜೆ

ಮುಂಗಡ ಬುಕ್ಕಿಂಗ್ ಕೂಡ ಆರಂಭವಾಗಿದೆ. ಇತ್ತ ಸಮಯ ಕಳೆಯಲು ಶಾಂತ ಸ್ಥಳಗಳಾದ ಪ್ರವಾಸಿ ತಾಣಗಳನ್ನು ಮೈಸೂರಿನ ಪ್ರೇಮಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಕೂಡ.

ಇನ್ನು ಈ ಬಾರಿಯೂ ಕೂಡ ರೋಸ್ ಗೆ ಹೆಚ್ಚು ಬೇಡಿಕೆಯಿದೆ. ಪ್ರತಿ ಬಾರಿಯೂ ದಿನಕ್ಕೆ ಒಂದು ರೋಸ್ ಗೆ 10, 20 ರೂ ಇದೆ. ಆದರೆ ಪ್ರೇಮಿಗಳ ದಿನಾಚರಣೆ ಅಂಗವಾಗಿ ಇದೇ ಹೂವು 50, 100 ರೂ ಸರಿಸುಮಾರಿಗೆ ಸಿಗುತ್ತಿದೆ. ಬೊಕ್ಕೆಗಳಂತೂ ಗಗನಚುಂಬಿಯಾಗಿದೆ.

English summary
Mysuru city police commissioner KT Balakrishna requested public, particularly youth and young women in order to maintain peace, order and peace in the city on behalf of valentine day celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X