ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಗ ತಾಲೀಮಿಗೆ ಮೈಸೂರು ಪಾಲಿಕೆ ಸದಸ್ಯರ ನಿರಾಸಕ್ತಿ

|
Google Oneindia Kannada News

ಮೈಸೂರು, ಜೂನ್ 19: ಇದೇ ಶುಕ್ರವಾರ ಜೂನ್ 21ರಂದು ವಿಶ್ವ ಯೋಗ ದಿನದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ಸಾಮೂಹಿಕ ಯೋಗ ಕಾರ್ಯಕ್ರಮದ ಮುನ್ನುಡಿಯಾಗಿ ಇಂದು ಅರಮನೆ ಆವರಣದಲ್ಲಿ ಪಾಲಿಕೆ ಸದಸ್ಯರಿಗಾಗಿ ಯೋಗದ ತಾಲೀಮನ್ನು ನಡೆಸಲಾಯಿತು. ಆದರೆ 65 ಪಾಲಿಕೆ ಸದಸ್ಯರ ಪೈಕಿ ಭಾಗಿಯಾಗಿದ್ದು ಮಾತ್ರ 19 ಮಂದಿ.

 ಮೈಸೂರಿನಲ್ಲಿ ಯೋಗ ದಿನಕ್ಕೆ ತಾಲೀಮು; 60 ಲಕ್ಷ ಅನುದಾನ ಮೈಸೂರಿನಲ್ಲಿ ಯೋಗ ದಿನಕ್ಕೆ ತಾಲೀಮು; 60 ಲಕ್ಷ ಅನುದಾನ

ವಿಶ್ವ ಯೋಗ ದಿನದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡುವ ಸಲುವಾಗಿ ಆಯೋಜಿಸಿದ್ದ ಪೂವರ್ಭಾವಿ ತಯಾರಿ ವೇಳೆಯೇ ಪಾಲಿಕೆ ಸದಸ್ಯರು ಗೈರಾಗಿದ್ದಾರೆ. ತಾಲೀಮಿನಲ್ಲಿ ಮೇಯರ್ ಪುಷ್ಪಲತಾ, ಉಪ ಮೇಯರ್ ಶಫಿ ಅಹಮದ್, ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸೇರಿದಂತೆ ಕೆಲ ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಸಿಬ್ಬಂದಿ ಭಾಗಿಯಾಗಿ ಸೂರ್ಯ ನಮಸ್ಕಾರ, ಪದ್ಮಾಸನ , ಭುಂಜಂಗಾಸನ, ಚಕ್ರಾಸನ, ವೃಕ್ಷಾಸನ, ಸರ್ವಾಂಗಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ಅಭ್ಯಸಿಸಿದರು.

Mysuru city corporation members not willing to participate in yoga day workout

ಪ್ರಧಾನಮಂತ್ರಿ ಭಾಗವಹಿಸುವಿಕೆಯಲ್ಲಿ ದೇಶದ 5 ನಗರಗಳಲ್ಲಿ ಮೈಸೂರು ಒಂದಾಗಿತ್ತು. ಆದರೆ ಈ ಬಾರಿ ಪ್ರಧಾನಿಯವರು ಬರುವುದಿಲ್ಲ. ಜೊತೆಗೆ ಗಿನ್ನಿಸ್ ದಾಖಲೆಗೆ ಭಾಗವಹಿಸುವುದಿಲ್ಲ. ಇದೇ ಕಾರಣವಾಗಿ ತಾಲೀಮಿನೆಡೆಗೆ ನಿರಾಸಕ್ತಿಯೂ ವ್ಯಕ್ತವಾಗಿದೆ.

English summary
Mysuru city corporation members not willing to participate in yoga day workout. In 65 members, only 19 members participated for world yoga day rehearsal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X