ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಚ್ಚುವರಿ ಕುಡಿಯುವ ನೀರು ಪೂರೈಕೆಗೆ ಮೈಸೂರು ಪಾಲಿಕೆ ತೆಗೆದುಕೊಂಡ ಕ್ರಮವೇನು?

|
Google Oneindia Kannada News

ಮೈಸೂರು, ಮೇ 6: ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ನೀರಿನ ಅಭಾವ ಹೆಚ್ಚಾಗಿರುವ ಪ್ರದೇಶಗಳಿಗೆ ಹೆಚ್ಚುವರಿ ನೀರು ಪೂರೈಸಲಾಗುತ್ತಿದೆ.

ಮೈಸೂರು ಪಾಲಿಕೆಯಲ್ಲಿ ಮೂಲೆಗುಂಪಾದ ಶಕ್ತಿಮಾನ್!ಮೈಸೂರು ಪಾಲಿಕೆಯಲ್ಲಿ ಮೂಲೆಗುಂಪಾದ ಶಕ್ತಿಮಾನ್!

ಮೈಸೂರು ನಗರದ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ದಿನ 135 ಲೀಟರ್ ನಂತೆ 175.50 ಎಂಎಲ್ ಡಿ ಒಂದು ದಿನಕ್ಕೆ ಅಗತ್ಯವಿದ್ದು, ಒಟ್ಟಾರೆ ನಗರಕ್ಕೆ 241.50 ಎಂ ಎಲ್ ಡಿ ನೀರಿನ ಅಗತ್ಯತೆ ಇದೆ ಎಂದು ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರದ ಇಂಜಿನಿಯರ್ ಹರೀಶ್ ತಿಳಿಸಿದ್ದಾರೆ.

 ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಜ್ಜಾದ ಮೈಸೂರು ಪಾಲಿಕೆ ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಜ್ಜಾದ ಮೈಸೂರು ಪಾಲಿಕೆ

ನಗರಪಾಲಿಕೆಯಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಗೆ 24 ಎಂಎಲ್ ಡಿ, 52 ಹಳ್ಳಿಗಳಿಗೆ 10 ಎಂಎಲ್ ಡಿ, ಚಾಮುಂಡಿ ಬೆಟ್ಟ ಮತ್ತು ರೆವಿನ್ಯೂ ಬಡಾವಣೆಗಳಿಗೆ 1 ಎಂಎಲ್ ಡಿ, ಆರ್ ಎಂ ಪಿ ವಸತಿ ಗೃಹಗಳಿಗೆ 2.50 ಎಂಎಲ್ ಡಿ ಹೀಗೆ ದಿನಕ್ಕೆ 225.00 ಎಂ ಎಲ್ ಡಿ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ನಗರದಲ್ಲಿ 531 ಕೈ ಪಂಪುಗಳು ಹಾಗೂ 803 ವಿದ್ಯುತ್ ಪಂಪುಗಳಿಂದಲೂ ನೀರು ಪೂರೈಸಲಾಗುತ್ತಿದೆ. ಅಲ್ಲದೇ ಬೇಸಿಗೆ ಕಾಲವಾದ್ದರಿಂದ ಹಾಲಿ ಇರುವ 20 ಟ್ಯಾಂಕರ್ ಗಳು ಜೊತೆಗೆ 5 ಟ್ಯಾಂಕರ್ ಹೆಚ್ಚುವರಿಯಾಗಿ ಬಳಕೆ ಮಾಡುತ್ತಿದ್ದೇವೆ ಎಂದಿದ್ದಾರೆ.

Mysuru city corporation is planned for proper supply of drinking water

ನಗರದಲ್ಲಿ 30-39 ವಾರ್ಡ್ ನಲ್ಲಿ ಸಮಸ್ಯೆ ಇದೆ. ಈ ಭಾಗದಲ್ಲಿ ಹೆಚ್ಚಿನ ಜನರು ವಾಸವಾಗಿದ್ದು, ನೀರಿನ ಅಗತ್ಯತೆ ಕೂಡ ಹೆಚ್ಚಿದೆ. ಆದ್ದರಿಂದ ನಿಗದಿತ ನೀರಿನ ಪೂರೈಕೆಯೊಂದಿಗೆ ಟ್ಯಾಂಕರ್ ಗಳ ಮೂಲಕವೂ ನೀರನ್ನು ನೀಡಲಾಗುತ್ತಿದೆ.

 ಮೈಸೂರು ಪಾಲಿಕೆ ಆಯುಕ್ತರ ಕಚೇರಿಯ ಪೀಠೋಪಕರಣ ಜಪ್ತಿ ಮೈಸೂರು ಪಾಲಿಕೆ ಆಯುಕ್ತರ ಕಚೇರಿಯ ಪೀಠೋಪಕರಣ ಜಪ್ತಿ

ನಗರವನ್ನು ಹೊರತುಪಡಿಸಿ ಹಿನಕಲ್ , ಬೋಗಾದಿ , ಹೂಟಗಳ್ಳಿಯಲ್ಲಿ ಸೇರಿದಂತೆ 52 ಹಳ್ಳಿಗಳಿಗೆ ವಾಣಿವಿಲಾಸ ವಾಟರ್ ವರ್ಕ್ಸ್ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದೆ. ಹಿನಕಲ್ ನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಸದ್ಯ 5 ಟ್ಯಾಂಕರ್ ಗಳಿಂದ ನೀರು ವಿತರಣೆ ಮಾಡಲಾಗುತ್ತಿದೆ.

ನೀರನ್ನು ಮಿತವಾಗಿ ಬಳಸಲು ಅಗತ್ಯವಿರುವ ಮೀಟರ್ ಗಳನ್ನು ಅಳವಡಿಸದೇ ಇರುವುದು, ನೀರಿನ ಸರಬರಾಜಿನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದು, ಅವಲಂಬಿತ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಹಾಗೂ ನೀರಿನ ಬಳಕೆಗೆ ಕುರಿತು ಅರಿವಿನ ಕೊರತೆಯಿಂದ ಹಳ್ಳಿಗಳಲ್ಲಿ ನೀರಿನ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಹರೀಶ್ ಹೇಳಿದರು.

English summary
Mysuru City Corporation is planned for proper supply of drinking water in city. Vani vilasa water supply team is already supplying water in scarcity of water places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X