ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮಹಾನಗರ ಪಾಲಿಕೆ ಬಜೆಟ್; ಉಚಿತ ವೈಫೈ, ಮಲ್ಟಿಲೆವೆಲ್ ಪಾರ್ಕಿಂಗ್ ಗೆ ಒತ್ತು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 18; ಮೈಸೂರು ಮಹಾ ನಗರಪಾಲಿಕೆ‌ಯು ಸೋಮವಾರ 878.79 ಕೋಟಿ ರೂ. ಮೊತ್ತದ ಉಳಿತಾಯ ಬಜೆಟ್ ಮಂಡಿಸಿದೆ. ಪ್ರಾರಂಭಿಕ ಶುಲ್ಕ 260.08 ಕೋಟಿ ಹಾಗೂ ಜಮೆ 618.71 ಕೋಟಿ‌ ಸೇರಿ 878.79 ಕೋಟಿ ರೂ.‌ ಮೊತ್ತದ ಬಜೆಟ್ ಇದಾಗಿದೆ. ಒಟ್ಟು 871.43 ಕೋಟಿ ರೂ. ಖರ್ಚು, 7.36. ಕೋಟಿ ರೂ. ಉಳಿತಾಯ ನಿರೀಕ್ಷೆ ಮಾಡಲಾಗಿದೆ.

ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ನಿರ್ಮಲಾ ಅವರು ಇದೇ ಮೊದಲ ಬಾರಿಗೆ ಆಯವ್ಯಯ ಮಂಡಿಸಿದ್ದಾರೆ. ಆಯವ್ಯಯ ಮಂಡನೆಗೆ ಮೊದಲು ಕೊರೊನಾಮುಕ್ತ ಮೈಸೂರಿಗೆ ಶ್ರಮಿಸಿದ ಕೊರೊನಾ ವಾರಿಯರ್ಸ್ ‌ಗೆ ಗೌರವ ಸಲ್ಲಿಸಿದರು.

ಪ್ಲಾಸ್ಟಿಕ್ ಮುಕ್ತ ನಗರವಾಗುವತ್ತ ಮೈಸೂರಿನ ಮತ್ತೊಂದು ಹೆಜ್ಜೆಪ್ಲಾಸ್ಟಿಕ್ ಮುಕ್ತ ನಗರವಾಗುವತ್ತ ಮೈಸೂರಿನ ಮತ್ತೊಂದು ಹೆಜ್ಜೆ

ಈ ಬಾರಿ 878 ಕೋಟಿ ಮೊತ್ತದ ಬೃಹತ್ ಆಯವ್ಯಯ ಮಂಡನೆ ಮಾಡಲಾಗುತ್ತಿದ್ದು, ಪಾಲಿಕೆ ಕಳೆದ ಬಾರಿಗಿಂತ ಮೌಲ್ಯ ಹೆಚ್ಚಿಸಿಕೊಂಡಿದೆ. ಆನ್ ಲೈನ್ ಮೂಲಕ ತೆರಿಗೆ ಸಂಗ್ರಹಕ್ಕೆ ಗ್ರೀನ್ ಸಿಗ್ನಲ್ ಲಭಿಸಿದ್ದು, ಉದ್ದಿಮೆ ಪರವಾನಗಿಯಿಂದ 8 ಕೋಟಿ ಆದಾಯ ನಿರೀಕ್ಷೆಯಿದೆ. ಪಾಲಿಕೆ ಆಸ್ತಿಗಳಿಂದ 2.96 ಕೋಟಿ ನಿರೀಕ್ಷೆಯಿದೆ ಎಂದು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ನಿರ್ಮಲ ತಿಳಿಸಿದರು.

 Mysuru City Corporation Budget Submitted Today

ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ ವೈ-ಫೈ ಸೇವೆ ಒದಗಿಸುವ ಹೊಸ ಯೋಜನೆಯನ್ನು ಮೈಸೂರು ಮಹಾನಗರ ಪಾಲಿಕೆ ಪ್ರಕಟಿಸಿದ್ದು, ಅದಕ್ಕಾಗಿ 2 ಲಕ್ಷ ರೂ. ಮೀಸಲಿಟ್ಟಿದೆ. ಅಮೆರಿಕಾದ 33 ವೆರ್ ‌ಮಾಂಟ್ ನಗರದಲ್ಲಿ ಅಳವಡಿಸಿರುವ ರೀತಿಯಲ್ಲಿ ಮೈಸೂರು ನಗರದಲ್ಲಿ ಉಚಿತ ವೈಫೈ ಸೇವೆ ಪ್ರಾರಂಭಿಸಲು (ವೆರ್ ‌ಮಾಂಟ್ ಡಿಜಿಟಲ್‌ ಎಕಾನಮಿ ಮಾದರಿ) ಆರಂಭಿಕ ಹಂತದಲ್ಲಿ 2 ಲಕ್ಷ ರೂ. ಹಣವನ್ನು ಕಾಯ್ದಿರಿಸಲಾಗಿದೆ. ಇಂಟರ್ ‌ನೆಟ್‌ ವ್ಯವಸ್ಥೆ ಪಡೆಯಲಾಗದ, ಆರ್ಥಿಕವಾಗಿ ದುರ್ಬಲ ವರ್ಗಗಳು ಹಾಗೂ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಹಕಾರಿಯಾಗಲಿದೆ ಎನ್ನಲಾಗಿದೆ.

ಶರವೇಗದಲ್ಲಿ ಬೆಳೆಯುತ್ತಿರುವ ನಗರದಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಉಲ್ಬಣಿಸಿದೆ. ಮಲ್ಟಿಲೆವೆಲ್ ಪಾರ್ಕಿಂಗ್ ಯೋಜನೆ ಮೂಲಕ ವಾಹನ ನಿಲುಗಡೆ ಸಮಸ್ಯೆ ಬಗೆಹರಿಸಲು ಪಾಲಿಕೆ ನಿರ್ಧರಿಸಿದ್ದು, ಈ ಯೋಜನೆಗಾಗಿ 4 ಕೋಟಿ ರೂ. ಮೀಸಲಿಟ್ಟಿದೆ.

ಸೂಯೆಜ್ ಫಾರಂ ಅನ್ನು ಉದ್ಯಾನವಾಗಿ ಮಾರ್ಪಡಿಸಲು 2 ಕೋಟಿ ರೂ., ಡಿ.ದೇವರಾಜ ಅರಸ್‌ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಹಾಗೂ ಇನ್ನೂ ಹಲವು ಪ್ರಮುಖ ಯೋಜನೆಗಳನ್ನು ಪ್ರಕಟಿಸಲಾಗಿದೆ.

English summary
Mysuru city corporation has submitted its budget today. Free wifi in public places and multi-level parking system are key highlights in this budget
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X