ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಪಾಲಿಕೆ ಬಜೆಟ್ 2017-18: ಮುಖ್ಯಾಂಶ

ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಮೈಸೂರು ಪಾಲಿಕೆ ಬಜೆಟ್ ಮಂಡಿಸಲಾಯಿತು.

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮಾರ್ಚ್ 25: ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಶುಕ್ರವಾರ (ಮಾರ್ಚ್ 24) ಮೈಸೂರು ಪಾಲಿಕೆ ಬಜೆಟ್ ಮಂಡಿಸಲಾಯಿತು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ವಿ.ಮಲ್ಲೇಶ್ 869 ಕೋಟಿ 30 ಲಕ್ಷ ಯೋಜನಾಗಾತ್ರದ ಬಜೆಟ್ ಮಂಡಿಸಿದರು. [ಲೂಟಿ ಹಣದಿಂದ ಓಟು ಕೇಳಿದರೆ ಸುಮ್ಮನಿರೋಲ್ಲ: ಬಿಎಸ್ ವೈ]

Mysuru city corporation Budget 2017-18

ಅರಮನೆ ನಗರಿ ಮೈಸೂರು ಪಾಲಿಕೆಯ ಬಜೆಟ್ ಮುಖ್ಯಾಂಶಗಳು ಹೀಗಿವೆ:

* ಡಿಸೆಂಬರ್ 2017 ರ ಅಂತ್ಯಕ್ಕೆ ರೂ.8467.80 ಲಕ್ಷಗಳನ್ನು ಸಂಗ್ರಹಿಸುವ ಗುರಿ
* 2017-18ನೇ ಸಾಲಿಗೆ ಈ ಬಾಬ್ತಿನಲ್ಲಿ ರೂ.17512.00ಲಕ್ಷಗಳ ನಿರೀಕ್ಷೆ.
* 2017-18ನೇ ಸಾಲಿನಲ್ಲಿ ಆಸ್ತಿ ತೆರಿಗೆ ಹಾಗೂ ಖಾತಾ ವರ್ಗಾವಣೆ ಶುಲ್ಕ, ಖಾತಾ ಪ್ರತಿಗಳ ಶುಲ್ಕ ಸೇರಿದಂತೆ ಕಂದಾಯ ಶಾಖೆಯಿಂದ ರೂ.20035.70ಲಕ್ಷ ನಿರೀಕ್ಷೆ.
* ನೀರು ಸರಬರಾಜು ಶುಲ್ಕವಾಗಿ ರೂ.520.
*ಲಕ್ಷ ಒಳಚರಂಡಿ ನಿರ್ವಹಣಾ ಕರವಾಗಿ ರೂ.156 ಲಕ್ಷಗಳನ್ನು ಹಾಗೂ ನೀರು ಸರಬರಾಜು ಸಂಬಂಧಿತ ಇತರೆ ಬಾಬ್ತುಗಳಿಂದ ರೂ.339.00ಲಕ್ಷಗಳನ್ನು ಸಂಗ್ರಹಿಸುವ ಗುರಿ.
* ರಾಜ್ಯ ಸರ್ಕಾರದಿಂದ 2017-18ನೇ ಸಾಲಿಗೆ ಬೀದಿದೀಪ ಹಾಗೂ ನೀರು ಸರಬರಾಜು ಸ್ಥಾವರಗಳ ವಿದ್ಯುಚ್ಛಕ್ತಿ ಬಿಲ್ಲುಗಳ ಪಾವತಿಗಾಗಿ ರೂ.7000.00ಲಕ್ಷಗಳ ಅನುದಾನ ನಿರೀಕ್ಷೆ.
* ಡಿಸೆಂಬರ್ ಅಂತ್ಯಕ್ಕೆ ರೂ.5121.05 ಲಕ್ಷಗಳು ಬಿಡುಗಡೆಯಾಗಿದ್ದು, ಮಾರ್ಚ್ ಅಂತ್ಯಕ್ಕೆ ಬಿಡುಗಡೆಯಾಗಿರುವ ಅನುದಾನ ಸೇರಿ ಒಟ್ಟು 7000.00ಲಕ್ಷಗಳು ಬಿಡುಗಡೆಯಾಗುವ ನಿರೀಕ್ಷೆ.
* 2017-18ನೇ ಸಾಲಿಗೆ ರೂ. 800 ಲಕ್ಷಗಳ ಅನುದಾನವನ್ನು ನಿರೀಕ್ಷೆ.
* 2017-18ನೇ ಸಾಲಿಗೆ ಮೈಸೂರು ನಗರವನ್ನು ಪಾರಂಪರಿಕ ನಗರವೆಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾಪ
* ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು ಗುಂಡಿ ಬೀಳದಂತೆ ಹಾಗೂ ಇದರಿಂದ ನಾಗರಿಕರಿಗೆ ತೊಂದರೆಯಾಗದಂತೆ ತಡೆಯಲು ವೈಜ್ಞಾನಿಕ, ಗುಂಡಿಮುಕ್ತ ರಸ್ತೆಗಳ ನಗರ ಎಂದು ಘೋಷಿಸುವ ಪ್ರಸ್ತಾಪ.
* ದೇಶದಲ್ಲೆ ಪ್ರಪ್ರಥಮವೆನ್ನಬಹುದಾದ ಕುಡಿಯುವ ನೀರಿನ ಶುದ್ಧೀಕರಣಕ್ಕಾಗಿ ಕ್ಲೋರಿನ್ ಡೈಆಕ್ಸೈಡ್ ಖರೀದಿಸಲು ರೂ.400.00ಲಕ್ಷ.
* ನಗರಪಾಲಿಕೆಯಲ್ಲಿ ಆಧುನಿಕ ಕಚೇರಿ ಉಪಕರಣಗಳಾದ ಲ್ಯಾಪ್ ಟಾಪ್, ಕಂಪ್ಯೂಟರ್ ಮುಂತಾದವುಗಳ ಉಪಯೋಗಕ್ಕೆ ಒತ್ತು.
* ಶಾಖಾ ಮುಖ್ಯಸ್ಥರುಗಳಿಗೆ ಅಂತರ್ಜಾಲ ಸೌಲಭ್ಯವುಳ್ಳ ಲ್ಯಾಪ್ ಟಾಪ್ ನೀಡಲು ಕ್ರಮ. ಇದಕ್ಕಾಗಿ ರೂ.75.00ಲಕ್ಷ ಮೀಸಲು.
* ಆನ್ ಲೈನ್ ಮೂಲಕವೇ ವ್ಯವಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು.

English summary
Mysuru city corporation presents it's 2017-18 budget on 24th, Friday. Here is the highlights of the budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X