ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಚಿತ ಕಾಫಿ ನೀಡಿ ಸಿದ್ಧಾರ್ಥ್ ಸ್ಮರಿಸಿದ ಮೈಸೂರಿನ ಬ್ರಾಹ್ಮಿನ್ಸ್ ಕೆಫೆ ಪ್ರಸಾದ್

|
Google Oneindia Kannada News

ಮೈಸೂರು, ಆಗಸ್ಟ್ 3: ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್ ಬೆಳೆದು ಬಂದ ಹಾದಿ ಎಲ್ಲರಿಗೂ ಮಾರ್ಗದರ್ಶಕ. ಆದರೆ ಅವರ ದಾರುಣ ಅಂತ್ಯ ಮಾತ್ರ ಯಾರಿಗೂ ಅರಗಿಸಿಕೊಳ್ಳಲಾರದಂಥದ್ದು.

ಅವರ ಸ್ಮರಣಾರ್ಥ ಸಿದ್ಧಾರ್ಥ್ ಅವರ ಸಾಧನೆಯನ್ನು ಸಾಮಾನ್ಯರಿಗೂ ಪರಿಚಯಿಸಲು ಮೈಸೂರಿನ ಬ್ರಾಹ್ಮಿನ್ಸ್ ಕೆಫೆ ಮಾಲೀಕರಾದ ಪ್ರಸಾದ್ ಮುಂದಾದರು.

 ಸಿದ್ದಾರ್ಥ ಸಾವು; ಕಂಕನಾಡಿ ಪೊಲೀಸರಿಂದ ಐಟಿ ಇಲಾಖೆ ಮುಖ್ಯಸ್ಥರ ವಿಚಾರಣೆ? ಸಿದ್ದಾರ್ಥ ಸಾವು; ಕಂಕನಾಡಿ ಪೊಲೀಸರಿಂದ ಐಟಿ ಇಲಾಖೆ ಮುಖ್ಯಸ್ಥರ ವಿಚಾರಣೆ?

ಮೈಸೂರಿನ ಚಾಮುಂಡಿಪುರಂ ಬಳಿಯಿರುವ ಬ್ರಾಹ್ಮಿನ್ಸ್ ಕೆಫೆಯಲ್ಲಿ ಇಂದು ಬೆಳಿಗ್ಗೆ 7 ರಿಂದ 9ವರೆಗೆ ಆಗಮಿಸಿದ ಎಲ್ಲಾ ಗ್ರಾಹಕರಿಗೂ ಸಿದ್ದಾರ್ಥ್ ಹೆಸರಿನಲ್ಲಿ ಉಚಿತವಾಗಿ ನೀಡಿದ್ದಾರೆ.

Mysuru Brahmin Cafe Owner Pay Tribute to Siddharth Through Coffee

ಈ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿದ ಪ್ರಸಾದ್, "ನಾನು ಬ್ರಾಹ್ಮಿನ್ಸ್ ಕೆಫೆ ಆರಂಭಗೊಳಿಸಿ ಒಂದು ವರ್ಷವಾಗಿದೆ. ಈ ಸಣ್ಣ ಉದ್ಯಮ ಸಣ್ಣದಾಗಿ ಕಂಡರೂ ನಡೆಸಿಕೊಂಡು ಹೋಗುವುದು ಬಲು ಕಠಿಣ. ಸಿದ್ಧಾರ್ಥ್ ಕಾಫೆ ಉದ್ಯಮದಲ್ಲಿ ವಿಶ್ವದಲ್ಲಿಯೇ ಮನ್ನಣೆ ಪಡೆದವರು. ಹಾಗಾಗಿ ಅವರು ಕಾಫಿ ಲೋಕಕ್ಕೆ ನೀಡಿದ ಕೊಡುಗೆ ಸ್ಮರಿಸಲು ಉಚಿತವಾಗಿ ಕಾಂಪ್ಲಿಮೆಂಟರಿ ಕಾಫಿ ನೀಡಿದೆವು. ಇದರಿಂದ ನಮಗೆ ಅವರನ್ನು ನೆನಪಿಸಿಕೊಳ್ಳಲು ಒಂದು ಅವಕಾಶ ಸಿಕ್ಕಿದಂತಾಯಿತು" ಎಂದರು.

ಕಾಫಿ ಡೇ ಸಿದ್ದಾರ್ಥ ಸಾವಿನ ಪ್ರಕರಣ ತನಿಖೆಗೆ ಹಿರೇಮಠ ಆಗ್ರಹ ಕಾಫಿ ಡೇ ಸಿದ್ದಾರ್ಥ ಸಾವಿನ ಪ್ರಕರಣ ತನಿಖೆಗೆ ಹಿರೇಮಠ ಆಗ್ರಹ

ಸಿದ್ದಾರ್ಥ್ ಜೀವ ನಮ್ಮೊಂದಿಗಿಲ್ಲದಿದ್ದರೂ ಅವರ ಕೆಲಸಗಳು ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದೇ ಕಾಯಕ ಸಾಕ್ಷಿ ಎನ್ನಬಹುದು.

English summary
Prasad, the owner of Brahmins Cafe in Mysore, pay tribute to Siddharth by distributing free coffee to customers who have arrived at Brahmins Cafe near Chamundipuram in Mysore from 7 am to 9 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X